ಈ ಮೂರು ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ

Onion Garlic Peels Health Benefits : ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅವುಗಳ ಸಿಪ್ಪೆಯನ್ನು  ಎಸೆಯಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆಯಲ್ಲಿ ವಿವಿಧ ಉತ್ಕರ್ಷಣ ನಿರೋಧಕಗಳ ಜೊತೆಗೆ, ವಿಟಮಿನ್ ಎ, ವಿಟಮಿನ್ ಇ ಮತ್ತು ಫ್ಲೇವನಾಯ್ದ್ ಗಳು ಕಂಡು ಬರುತ್ತವೆ. 

Written by - Ranjitha R K | Last Updated : Jul 14, 2022, 04:19 PM IST
  • ಪ್ರತಿದಿನದ ಆಹಾರದಲ್ಲಿ ತಾಜಾ ಮತ್ತು ಕಾಲೋಚಿತ ತರಕಾರಿಗಳನ್ನು ಸೇರಿಸಲಾಗುತ್ತದೆ
  • ತರಕಾರಿಗಳ ಗುಣಲಕ್ಷಣಗಳು ಅವುಗಳ ಸಿಪ್ಪೆಗಳಲ್ಲಿಯೂ ಕಂಡುಬರುತ್ತವೆ
  • ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ.
ಈ ಮೂರು ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆ  title=
Onion Garlic Peels Health Benefits (file photo)

ಬೆಂಗಳೂರು : Onion Garlic Peels Health Benefits: ತರಕಾರಿಗಳು ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ.  ಈ ಕಾರಣಕ್ಕಾಗಿಯೇ ಪ್ರತಿದಿನದ ಆಹಾರದಲ್ಲಿ ತಾಜಾ ಮತ್ತು ಕಾಲೋಚಿತ ತರಕಾರಿಗಳನ್ನು ಸೇರಿಸಲು ಸಲಹೆ ನೀಡಲಾಗುತ್ತದೆ. ತರಕಾರಿಗಳ ಗುಣಲಕ್ಷಣಗಳು ಅವುಗಳ ಸಿಪ್ಪೆಗಳಲ್ಲಿಯೂ ಕಂಡುಬರುತ್ತವೆ. ಆದ್ದರಿಂದ, ಕ್ಯಾರೆಟ್, ಮೂಲಂಗಿ, ಸೋರೆಕಾಯಿ ಮತ್ತು ಹಸಿರು ಬಟಾಣಿಗಳ ಸಿಪ್ಪೆಗಳನ್ನು ಸಹ ಅಡುಗೆಮನೆಯಲ್ಲಿ  ಬಳಸುವಂತೆ ಸೂಚಿಸಲಾಗುತ್ತದೆ.  ಅದೇ ರೀತಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ತರಕಾರಿಗಳ ಸಿಪ್ಪೆಗಳನ್ನು ಕೂಡಾ ಅಡುಗೆಯಲ್ಲಿ ಬಳಸಬಹುದು.  

ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಎಲ್ಲಾ ರೀತಿಯ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅವುಗಳ ಸಿಪ್ಪೆಯನ್ನು  ಎಸೆಯಲಾಗುತ್ತದೆ. ಈರುಳ್ಳಿ, ಬೆಳ್ಳುಳ್ಳಿ ಸಿಪ್ಪೆಯಲ್ಲಿ ವಿವಿಧ ಉತ್ಕರ್ಷಣ ನಿರೋಧಕಗಳ ಜೊತೆಗೆ, ವಿಟಮಿನ್ ಎ, ವಿಟಮಿನ್ ಇ ಮತ್ತು ಫ್ಲೇವನಾಯ್ದ್ ಗಳು ಕಂಡು ಬರುತ್ತವೆ. ಈ ಕಾರಣದಿಂದಾಗಿ, ಅವುಗಳನ್ನು ಅಡುಗೆಯಲ್ಲಿ ಬಳಸುವುದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ನಿವಾರಿಸಬಹುದು. 

ಇದನ್ನೂ ಓದಿ : ಹೃದಯಾಘಾತಕ್ಕೆ ಆಹ್ವಾನ ನೀಡುತ್ತವೆ ಈ ಐದು ಆಹಾರಗಳು..!

ಈ ಸಮಸ್ಯೆಗಳಿಗೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಸಿಪ್ಪೆಯನ್ನು ಬಳಸಿ : 
ಎಸ್ಜಿಮಾ :
ಆಂಟಿಫಂಗಲ್ ಅಂಶಗಳಿಂದ ಸಮೃದ್ಧವಾಗಿರುವ ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಗಳು ತುರಿಕೆ, ಎಸ್ಜಿಮಾ ಮತ್ತು ಅಥ್ಲೀಟ್ ಪಾದದಂತಹ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಮನೆಮದ್ದುಗಳಾಗಿ ಬಳಸಬಹುದು. ಈರುಳ್ಳಿ ಮತ್ತು ಬೆಳ್ಳುಳ್ಳಿಯ ಸಿಪ್ಪೆಗಳನ್ನು ಕುದಿಸಿ ಮತ್ತು ಸ್ನಾನದ ನೀರಿನಲ್ಲಿ ಮಿಶ್ರಣ ಮಾಡಿ ಅಥವಾ ಈ ನೀರಿನಿಂದ ಚರ್ಮವನ್ನು ಸ್ವಚ್ಛಗೊಳಿಸಿ. ಇದರಿಂದ ಚರ್ಮದ ಸಮಸ್ಯೆಗಳನ್ನು ನಿವಾರಿಸಬಹುದು. 

ನಿದ್ರಾಹೀನತೆ : 
ಸರಿಯಾಗಿ ನಿದ್ದೆ ಬಾರದ ಸಮಸ್ಯೆಯಿಂದ ಬಳಲುತ್ತಿರುವವರು ಈರುಳ್ಳಿ ಮತ್ತು ಬೆಳ್ಳುಳ್ಳಿ ಸಿಪ್ಪೆಯ ಟೀ ಕುಡಿಯುವುದರಿಂದ ಪ್ರಯೋಜನವಾಗಲಿದೆ. ಒತ್ತಡವನ್ನು ಕಡಿಮೆ ಮಾಡುವ ಮತ್ತು ನಿದ್ರೆಯನ್ನು ಹೆಚ್ಚಿಸುವ ಅಂಶಗಳು ಈ ಸಿಪ್ಪೆಗಳಲ್ಲಿ ಕಂಡುಬರುತ್ತವೆ.   ಮಲಗುವ ಸ್ವಲ್ಪ ಸಮಯದ ಮೊದಲು, ಬೆಳ್ಳುಳ್ಳಿ ಮತ್ತು ಈರುಳ್ಳಿಯ ಸಿಪ್ಪೆಯನ್ನು ನೀರಿನಿಂದ ಕುದಿಸಿ  ಅದನ್ನು ಸೇವಿಸಿದರೆ ಉತ್ತಂ ನಿದ್ದೆ ಬರುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ : Diabetes Test: ನಿಖರವಾದ ರಿಸಲ್ಟ್‌ಗಾಗಿ ಶುಗರ್ ಟೆಸ್ಟ್ ಮಾಡಲು ಇದು ಬೆಸ್ಟ್ ಟೈಮ್

ಮಾಂಸಖಂಡಗಳ ನೋವಿಗೆ  :
ಸ್ನಾಯು ನೋವಿನಿಂದ ಪರಿಹಾರ ಪಡೆಯಲು ಈರುಳ್ಳಿ ಸಿಪ್ಪೆಯನ್ನು ಬಳಸಬಹುದು.  ಈರುಳ್ಳಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ನಾಯು ಸೆಳೆತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ಸ್ನಾಯು ನೋವಿನ ಸಮಸ್ಯೆ ಇರುವವರು ಈರುಳ್ಳಿ ಸಿಪ್ಪೆಯನ್ನು ನೀರಿನೊಂದಿಗೆ ಕುದಿಸಿ ಕಷಾಯ ಮಾಡಿ ಕುಡಿಯಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News