oil for healthy kidney : ಕಿಡ್ನಿ ಆರೋಗ್ಯವಾಗಿರಬೇಕಾದರೆ ಈ ಎಣ್ಣೆಯನ್ನೇ ಬಳಸಬೇಕು !

Foods Cooked In Good Oil For Kidneys: ಮೂತ್ರಪಿಂಡವು ದೇಹದ ಪ್ರಮುಖ  ಅಂಗವಾಗಿದೆ. ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದರೂ ದೇಹದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳುವುದು.   

Written by - Ranjitha R K | Last Updated : Jan 8, 2024, 06:41 PM IST
  • ಆರೋಗ್ಯಕರ ದೇಹಕ್ಕಾಗಿ ಜನರು ಪೌಷ್ಟಿಕ ಆಹಾರವನ್ನು ಸೇವಿಸುತ್ತಾರೆ.
  • ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಕೂಡಾ ಅಗತ್ಯ.
  • ನಮ್ಮ ದೇಹದಲ್ಲಿ ಕೆಲವು ಅಂಗಗಳಿವೆ.
oil for healthy kidney : ಕಿಡ್ನಿ ಆರೋಗ್ಯವಾಗಿರಬೇಕಾದರೆ ಈ ಎಣ್ಣೆಯನ್ನೇ ಬಳಸಬೇಕು ! title=

ಬೆಂಗಳೂರು : ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮೊದಲು ನಾವು ಅನುಸರಿಸುವ ಆಹಾರದ ಬಗ್ಗೆ ಕಾಳಜಿ ವಹಿಸಬೇಕು. ಪೌಷ್ಟಿಕ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಇದರ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸಾಕಷ್ಟು ನಿದ್ರೆ ಕೂಡಾ ಅಗತ್ಯ.ನಮ್ಮ ದೇಹದಲ್ಲಿ ಹಲವಾರು ಅಂಗಗಳಿವೆ. ಈ ಅಂಗಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ನಾವು ಆರೋಗ್ಯವಾಗಿರುವುದು, ಸಹಜವಾಗಿ ಜೀವನ ಸಾಗಿಸುವುದು ಸಾಧ್ಯವಾಗುತ್ತದೆ.  ಈ ಅಂಗಗಳಲ್ಲಿ ಒಂದು ಮೂತ್ರಪಿಂಡವೂ ಒಂದು. ಮೂತ್ರಪಿಂಡವು ದೇಹದ ಪ್ರಮುಖ  ಅಂಗವಾಗಿದೆ. ಕಿಡ್ನಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡು ಬಂದರೂ ದೇಹದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳುವುದು. 

 ಮೂತ್ರದ ಮೂಲಕ ದೇಹದ ಮಲಿನವನ್ನು ದೇಹದಿಂದ ಹೊರಹಾಕುವ ಕೆಲಸವನ್ನು ಮೂತ್ರ ಪಿಂಡ ಮಾಡುತ್ತದೆ. ಈ ಕಾರಣದಿಂದಾಗಿ ಮೂತ್ರಪಿಂಡ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಬಯಸಿದರೆ, ಸಕ್ರಿಯ ಜೀವನಶೈಲಿ ಮತ್ತು ಆರೋಗ್ಯಕರ ಆಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಅದರಲ್ಲೂ ಪ್ರತಿನಿತ್ಯ ಯಾವ ಎಣ್ಣೆಯನ್ನು ಅಡುಗೆಗೆ ಬಳಸುತ್ತೀರಿ ಎನ್ನುವುಡು ಬಹಳ ಮುಖ್ಯವಾಗುತ್ತದೆ. 

ಇದನ್ನೂ ಓದಿ :  Tomato: ಕೆಂಪಲ್ಲ.. ಹಸಿರು ಟೊಮೆಟೊದಿಂದ ದೇಹಕ್ಕಿದೆ ಹಲವಾರು ಪ್ರಯೋಜನ!

ಮೂತ್ರಪಿಂಡದ ಆರೋಗ್ಯಕ್ಕೆ ಆಲಿವ್ ಎಣ್ಣೆ  :
ಅಡುಗೆ ಮಾಡಬೇಕಾದರೆ ಎಣ್ಣೆಯನ್ನು ಬಳಸುವುದು ಅಗತ್ಯ. ಮಾರುಕಟ್ಟೆಯಲ್ಲಿ ಬೇರೆ ಬೇರೆ ಬ್ರಾಂಡ್ ಗಳ  ಸಿಗುತ್ತದೆ.ಹಾಗಂತ ಯಾವುದು ಬೇಕೋ ಆ ಎಣ್ಣೆಯನ್ನು ಅಡುಗೆಗೆ ಬಳಸುವುದಲ್ಲ.ಇದರ ಬದಲಿಗೆ ಉತ್ತಮ ಆರೋಗ್ಯಕ್ಕಾಗಿ ಆಲಿವ್ ಎಣ್ಣೆಯನ್ನು ಬಳಸಬೇಕು.  ಆಲಿವ್ ಎಣ್ಣೆ ನಮ್ಮ ಹೃದಯದ ಆರೋಗ್ಯಕ್ಕೆ  ತುಂಬಾ ಒಳ್ಳೆಯದು. ವಾಸ್ತವವಾಗಿ, ಅಪರ್ಯಾಪ್ತ ಕೊಬ್ಬು, ವಿಟಮಿನ್-ಇನಂತಹ ಪೋಷಕಾಂಶಗಳು ಆಲಿವ್ ಎಣ್ಣೆಯಲ್ಲಿ ಕಂಡುಬರುತ್ತವೆ. ಇವು ಮೂತ್ರಪಿಂಡವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ, ಆಲಿವ್ ಎಣ್ಣೆಯಲ್ಲಿ ಉತ್ತಮ ಪ್ರಮಾಣದ ಒಲೀಕ್ ಆಸಿಡ್ ಇದೆ.

ಆರೋಗ್ಯಕರ ಮೂತ್ರಪಿಂಡಕ್ಕಾಗಿ ಈ ಆಹಾರಗಳನ್ನು ಸೇವಿಸಿ :
1. ನಿಮ್ಮ ಮೂತ್ರಪಿಂಡವನ್ನು ದೀರ್ಘಕಾಲದವರೆಗೆ ಆರೋಗ್ಯಕರವಾಗಿರಬೇಕಾದರೆ  ಆಹಾರದಲ್ಲಿ ಬೆಳ್ಳುಳ್ಳಿ-ಈರುಳ್ಳಿಯನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿ. ಬೆಳ್ಳುಳ್ಳಿ-ಈರುಳ್ಳಿಯನ್ನು ಉತ್ತಮ ಪ್ರಮಾಣದಲ್ಲಿ ಸೇವಿಸುವುದರಿಂದ  ಮೂತ್ರಪಿಂಡವು ಸಂಪೂರ್ಣವಾಗಿ ಫಿಟ್ ಆಗಿರುತ್ತದೆ. ಇವೆರಡೂ ಉರಿಯೂತದ ಗುಣಲಕ್ಷಣಗಳಿಂದ ತುಂಬಿವೆ. ವಿಟಮಿನ್ ಬಿ6, ಮ್ಯಾಂಗನೀಸ್, ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಇವುಗಳಲ್ಲಿ ಹೇರಳವಾಗಿ ಕಂಡುಬರುತ್ತವೆ. 

ಇದನ್ನೂ ಓದಿ :  ಈ ಹಣ್ಣಿನ ಎಲೆಯ ಜ್ಯೂಸ್ ಕುಡಿದರೆ ತಕ್ಷಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್! ಆದರೆ ಎಷ್ಟು ಜ್ಯೂಸ್ ಕುಡಿಯಬೇಕು ತಿಳಿದುಕೊಳ್ಳಿ !

2. ಇನ್ನು ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು, ಎಲೆಕೋಸು, ಹೂಕೋಸು, ಕೋಸುಗಡ್ಡೆಯಂತಹ ಎಲೆಗಳ ತರಕಾರಿಗಳನ್ನೂ ಸೇವಿಸಬೇಕು.ಈ ತರಕಾರಿಗಳಲ್ಲಿ ಉತ್ಕರ್ಷಣ ನಿರೋಧಕಗಳು, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿವೆ. ಆಹಾರದಲ್ಲಿ ಈ ತರಕಾರಿಗಳನ್ನು  ತಿನ್ನಬೇಕು. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News