Health Care Tips: ಹೈ ಬಿಪಿ ನಿಯಂತ್ರಿಸಲು ಈ ರೀತಿ ಇರಲಿ ನಿಮ್ಮ ದಿನಚರಿ

High Blood Pressure: ಕಳಪೆ ಜೀವನಶೈಲಿಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆ ಎಂದರೆ ಅಧಿಕ ರಕ್ತದೊತ್ತಡ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಬಿಪಿಯನ್ನು ನಿಯಂತ್ರಣದಲ್ಲಿ ಇರಿಸಬಹುದು. 

Written by - Yashaswini V | Last Updated : May 31, 2022, 01:35 PM IST
  • ಹೃದಯದ ಆರೋಗ್ಯಕ್ಕೆ ಪೊಟ್ಯಾಸಿಯಮ್ ಬಹಳ ಮುಖ್ಯ.
  • ಇದಕ್ಕಾಗಿ ಒಣ ಹಣ್ಣುಗಳು, ಬೀನ್ಸ್, ಉದ್ದಿನಬೇಳೆ, ಆಲೂಗಡ್ಡೆ, ಪಾಲಕ್ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
  • ಏಕೆಂದರೆ ಪೊಟ್ಯಾಸಿಯಮ್ ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
Health Care Tips: ಹೈ ಬಿಪಿ ನಿಯಂತ್ರಿಸಲು ಈ ರೀತಿ ಇರಲಿ ನಿಮ್ಮ ದಿನಚರಿ  title=
High blood pressure Treatment

ಅಧಿಕ ರಕ್ತದೊತ್ತಡ ನಿಯಂತ್ರಿಸುವ ವಿಧಾನ: ಕಳಪೆ ಜೀವನಶೈಲಿಯಿಂದ ಉಂಟಾಗುವ ಸಾಮಾನ್ಯ ಸಮಸ್ಯೆ ಅಧಿಕ ರಕ್ತದೊತ್ತಡ. ಹಲವೊಮ್ಮೆ ಇದು ಮಾರಣಾಂತಿಕವಾಗಿಯೂ ಪರಿಣಮಿಸಬಹುದು. ಹಾಗಾಗಿಯೇ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಮೂಕ ಕೊಲೆಗಾರ ಎಂತಲೂ ಬಣ್ಣಿಸಲಾಗುತ್ತದೆ. 

ವಾಸ್ತವವಾಗಿ, ಹೃದಯವು ನಮ್ಮ ದೇಹದಾದ್ಯಂತ ರಕ್ತವನ್ನು ಸಾಗಿಸಲು ಕೆಲಸ ಮಾಡುತ್ತದೆ. ಹೃದಯದಲ್ಲಿ ಅಪಧಮನಿಗಳು ಸಂಕುಚಿತಗೊಂಡಾಗ ರಕ್ತದೊತ್ತಡ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡವು ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಬಿಪಿಯನ್ನು ನಿಯಂತ್ರಣದಲ್ಲಿ ಇರಿಸಬಹುದು. ನಿಮ್ಮ ಬಿಪಿಯನ್ನು ಹತೋಟಿಯಲ್ಲಿಡಬಹುದಾದಂತಹ ಅಭ್ಯಾಸಗಳ ಬಗ್ಗೆ ಈ ಲೇಖನದಲ್ಲಿ ಕೆಲವು ಮಾಹಿತಿಯನ್ನು ನೀಡಲಿದ್ದೇವೆ.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಈ ವಿಧಾನಗಳನ್ನು ಅನುಸರಿಸಿ:-
ಪೊಟ್ಯಾಸಿಯಮ್ ಸಮೃದ್ಧ ಆಹಾರವನ್ನು ತೆಗೆದುಕೊಳ್ಳಿ:

ಹೃದಯದ ಆರೋಗ್ಯಕ್ಕೆ ಪೊಟ್ಯಾಸಿಯಮ್ ಬಹಳ ಮುಖ್ಯ. ಇದಕ್ಕಾಗಿ ಒಣ ಹಣ್ಣುಗಳು, ಬೀನ್ಸ್, ಉದ್ದಿನಬೇಳೆ, ಆಲೂಗಡ್ಡೆ, ಪಾಲಕ್ ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಏಕೆಂದರೆ ಪೊಟ್ಯಾಸಿಯಮ್ ಉತ್ತಮ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ- Moringa Leaves: ನುಗ್ಗೆ ಸೊಪ್ಪನ್ನು ಈ ರೀತಿ ಬಳಸಿದರೆ ಸಿಗುತ್ತೆ ಹಲವು ಪ್ರಯೋಜನ

ನಿಮ್ಮ ದಿನಚರಿಯಲ್ಲಿ ಇವುಗಳನ್ನು ರೂಢಿಸಿಕೊಳ್ಳಿ:
ಹಲವರಿಗೆ ಸರಿಯಾಗಿ ನಿದ್ರೆ ಇಲ್ಲದಿದ್ದಾಗ ಬಿಪಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನ ಸಾಕಷ್ಟು ನಿದ್ರೆ ಮಾಡಿ. ಇದಲ್ಲದೆ, ಯೋಗ, ವಾಕಿಂಗ್, ವ್ಯಾಯಾಮದಂತಹ ಆರೋಗ್ಯಕರ ಅಭ್ಯಾಸಗಳನ್ನೂ ರೂಢಿಸಿಕೊಳ್ಳಿ. ನಿಮ್ಮ ಜೀವನಶೈಲಿಯಲ್ಲಿ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ  ಯಾವಾಗಲೂ ಆರೋಗ್ಯವಾಗಿರಬಹುದು. ನೀವು ರೋಗಗಳಿಂದ ದೂರವಿರಬಹುದು. ಹಾಗಾಗಿ ನಿಮಗೆ ಅಧಿಕ ರಕ್ತದೊತ್ತಡದ ಸಮಸ್ಯೆ ಇಲ್ಲದಿದ್ದರೂ, ಖಂಡಿತವಾಗಿಯೂ ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿ. 

ಉಪ್ಪು ಸೇವನೆಯನ್ನು ಕಡಿಮೆ ಮಾಡಿ- 
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಏಕೆಂದರೆ ಹೆಚ್ಚಿನ ಪ್ರಮಾಣದ ಸೋಡಿಯಂ ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. 

ಯಾವುದೇ ವಿಷಯಕ್ಕೂ ಗಾಬರಿ ಆಗಬೇಡಿ:
ಸಾಮಾನ್ಯವಾಗಿ ಹಲವು ಬಾರಿ ನಾವು ಕೆಲವು ವಿಷಯಗಳ ಬಗ್ಗೆ ತುಂಬಾ ಚಿಂತಿಸುತ್ತೇವೆ ಅಥವಾ ಆಂತಕಕ್ಕೆ ಒಳಗಾಗುತ್ತೇವೆ. ದೀರ್ಘಕಾಲದ ಒತ್ತಡದಿಂದಾಗಿ ಅನೇಕ ರೋಗಗಳು ಉದ್ಭವಿಸಲು ಪ್ರಾರಂಭಿಸುತ್ತವೆ. ಒತ್ತಡದಿಂದಾಗಿ ವ್ಯಕ್ತಿಯಲ್ಲಿ ರಕ್ತದೊತ್ತಡವೂ ಹೆಚ್ಚಾಗಬಹುದು. ಆದರೆ ಒತ್ತಡವನ್ನು ಕಡಿಮೆ ಮಾಡುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.  ಯಾವಾಗಲಾದರೂ ಯಾವುದೇ ವಿಷಯದಿಂದಾಗಿ ಒತ್ತಡಕ್ಕೆ ಒಳಗಾದಾಗ ಮೊದಲು ಒಂದು ಕಡೆ ಶಾಂತವಾಗಿ ಕುಳಿತು ಆಳವಾದ ಉಸಿರನ್ನು ತೆಗೆದುಕೊಳ್ಳಿ. ನಂತರ ಅದನ್ನು ನಿಧಾನವಾಗಿ ಹೊರಬಿಡಿ. ಈ ಸಮಯದಲ್ಲಿ ನಿಮ್ಮ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಇದಲ್ಲದೆ, ನಿಮ್ಮಿಷ್ಟದ ಹಾಡು ಕೇಳುವುದು, ಪುಸ್ತಕ ಓದುವುದು ಅಥವಾ ವಾಕ್ ಮಾಡುವುದರಿಂದಲೂ ಒತ್ತಡದಿಂದ ಪಇಹಾರ ಪಡೆಯಬಹುದು.

ಇದನ್ನೂ ಓದಿ- Side Effects Of Tea: ನೀವು ಚಹಾ ಪ್ರಿಯರೆ! ಹಾಗಂತ ಅತಿಯಾಗಿ ಸೇವಿಸಿದರೆ ತಪ್ಪಿದ್ದಲ್ಲ ಅಪಾಯ!

ತೂಕವನ್ನು ನಿಯಂತ್ರಣದಲ್ಲಿಡಿ:
ಸ್ಥೂಲಕಾಯತೆಯು ಅನೇಕ ರೋಗಗಳಿಗೆ ಕಾರಣವಾಗಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆ ಇದರಲ್ಲಿ ಸಾಮಾನ್ಯವಾಗಿದೆ. ಅಧಿಕ ತೂಕ ಹೊಂದಿರುವವರಲ್ಲಿ ಅಧಿಕ ರಕ್ತದೊತ್ತಡದ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ತೂಕವನ್ನು ಕಡಿಮೆ ಮಾಡುವುದು ಬಹಳ ಮುಖ್ಯ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News