Liver Detoxification: ಹೊಟ್ಟೆಯಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಸುಲಭ ಮನೆ ಉಪಾಯಗಳನ್ನು ಅನುಸರಿಸಿ

Liver Detoxification Tips: ಯಕೃತ್ತು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಯಕೃತ್ತನ್ನು ಹೇಗೆ ನಿರ್ವಿಷಗೊಳಿಸಬಹುದು ಎಂಬುದು ನಮಗೆ ತಿಳಿದಿರಬೇಕು.   

Written by - Nitin Tabib | Last Updated : Jul 9, 2022, 09:45 PM IST
  • ನಮ್ಮ ದೇಹದ ಪ್ರತಿಯೊಂದು ಭಾಗವೂ ತನ್ನದೇ ಅದ ಮಹತ್ವವನ್ನು ಹೊಂದಿವೆ.
  • ದೇಹದ ಯಾವುದಾದರೂ ಒಂದು ಭಾಗದಲ್ಲಿ ಸಮಸ್ಯೆ ಉಂಟಾದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ.
  • ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಯಕೃತ್ತು ನಮಗೆ ಸಹಾಯ ಮಾಡುತ್ತದೆ.
Liver Detoxification: ಹೊಟ್ಟೆಯಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಈ ಸುಲಭ ಮನೆ ಉಪಾಯಗಳನ್ನು ಅನುಸರಿಸಿ title=
Liver Detoxification Drinks

Liver Detoxification Tips:ನಮ್ಮ ದೇಹದ ಪ್ರತಿಯೊಂದು ಭಾಗವೂ ತನ್ನದೇ ಅದ ಮಹತ್ವವನ್ನು ಹೊಂದಿವೆ. ದೇಹದ ಯಾವುದಾದರೂ ಒಂದು ಭಾಗದಲ್ಲಿ ಸಮಸ್ಯೆ ಉಂಟಾದರೆ ಅದು ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಯಕೃತ್ತು ನಮಗೆ ಸಹಾಯ ಮಾಡುತ್ತದೆ. ಇದಲ್ಲದೆ, ಯಕೃತ್ತು ಅನೇಕ ಖನಿಜಗಳು ಮತ್ತು ಕಬ್ಬಿಣವನ್ನು ಸಂಗ್ರಹಿಸಿಡುವ ಮೂಲಕ ಮೂಲಕ ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಪಿತ್ತಜನಕಾಂಗವು ಹಲವಾರು ಕಾರ್ಯಗಳನ್ನು ಮಾಡುವ ಕಾರಣ ಅದನ್ನು ಆರೋಗ್ಯಕರವಾಗಿ ಇರಿಸುವುದು ಸಹ ತುಂಬಾ ಮುಖ್ಯವಾಗಿದೆ. ಇದೇ ವೇಳೆ, ಲಿವರ್ ಡಿಟಾಕ್ಸ್ ಮಾಡುವುದು ಇಂದಿನ ದಿನಗಳಲ್ಲಿ ತುಂಬಾ ಮುಖ್ಯವಾಗಿದೆ. ಯಕೃತ್ತನ್ನು ನಿರ್ವಿಷಗೊಳಿಸಲು ಮನೆಯಲ್ಲಿಯೇ ಸಿಗುವ ಕೆಲ ಸಂಗತಿಗಳನ್ನು ಬಳಸಬಹುದು.

ಯಕೃತ್ತನ್ನು ನಿರ್ವಿಷಗೊಳಿಸುವ ಮನೆಮದ್ದುಗಳು
ಅರಿಶಿನ ನೀರು

ಪ್ರತಿ ಮನೆಯಲ್ಲೂ ಅರಿಶಿನವನ್ನು ಬಳಸುತ್ತಾರೆ. ಅರಿಶಿನವನ್ನು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಲೀವರ್ ಗೆ ಸಂಬಂಧಿಸಿದ ಸಮಸ್ಯೆ ಇರುವವರಿಗೆ ಪ್ರತಿದಿನ ಅರಿಶಿನ ನೀರನ್ನು ಕುಡಿಯಲು ಸಲಹೆ ನೀಡಲಾಗುತ್ತದೆ. ಅರಿಶಿನ ನೀರು ದೇಹದಲ್ಲಿ ಕಿಣ್ವಗಳನ್ನು ಹೆಚ್ಚಿಸುವ ಮೂಲಕ ಈ ಕೆಲಸ ಮಾಡುತ್ತದೆ. ಇದು ಆಹಾರದ ಜೊತೆಗೆ ಹೊಟ್ಟೆಯೊಳಗೆ ಹೋದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ನಿಂಬೆ ಮತ್ತು ಉಗುರು ಬೆಚ್ಚಗಿನ ನೀರು
ದೇಹದಿಂದ ಕೊಬ್ಬನ್ನು ಕಡಿಮೆ ಮಾಡುವ ವಿಷಯ ಬಂದಾಗ, ಜನರು ಸಾಮಾನ್ಯವಾಗಿ ಉಗುರು ಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯಲು ಶಿಫಾರಸು ಮಾಡುತ್ತಾರೆ. ನಿಂಬೆ ಯಕೃತ್ತಿನ ನಿರ್ವಿಶೀಕರಣದ ಕೆಲಸ ಮಾಡುತ್ತದೆ. ಪ್ರತಿದಿನ ಒಂದು ಲೋಟ ನಿಂಬೆ ಮತ್ತು ಉಗುರುಬೆಚ್ಚನೆಯ ನೀರನ್ನು ಕುಡಿಯುವುದು ದೇಹದಿಂದ ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ ಮತ್ತು ಯಕೃತ್ತನ್ನು ಆರೋಗ್ಯಕರವಾಗಿಡಲು ಅದು ಸಹಾಯ ಮಾಡುತ್ತದೆ.

ಇದನ್ನೂ ಓದಿ-Diabetes ಪ್ರಭಾವವನ್ನು ಚಮತ್ಕಾರಿ ರೀತಿಯಲ್ಲಿ ದೂರ ಮಾಡುತ್ತದೆ ಈ ಎಣ್ಣೆಯುಕ್ತ ಹಣ್ಣು, ಹೇಗೆ ಸೇವಿಸಬೇಕು?

ಯಕೃತ್ತು ಆರೋಗ್ಯವಾಗಿರಲು ಏನು ಮಾಡಬೇಕು?
ನಿಮ್ಮ ಯಕೃತ್ತು ಯಾವಾಗಲೂ ಆರೋಗ್ಯವಾಗಿರಿಸಲು ನೀವು ಬಯಸುತ್ತಿದ್ದರೆ, ಇದಕ್ಕಾಗಿ ನೀವು ನಿಮ್ಮ ಆಹಾರ ಮತ್ತು ಪಾನೀಯದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು, ನೀವು ಪಿಜ್ಜಾ, ಬರ್ಗರ್, ನೂಡಲ್ಸ್ ಗಳಂತಹ ಜಂಕ್ ಫುಡ್ ಗಳು ಮತ್ತು ಸಿಗರೇಟ್, ಮದ್ಯದಂತಹ  ಕೆಟ್ಟ ಚಟಗಳಿಗೆ ಬೈ-ಬೈ ಹೇಳುವ ಮೂಲಕ ಲಿವರ್ ಅನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು.

ಇದನ್ನೂ ಓದಿ-Raw Banana: ಬಾಳೆಕಾಯಿ ಸೇವನೆಯಿಂದ ತೂಕ ಇಳಿಕೆಯ ಜೊತೆಗೆ ದೇಹಕ್ಕೆ ಹಲವು ಪ್ರಯೋಜನಗಳು ಸಿಗುತ್ತವೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News