Weight Loss Tips:ನಾರಿನಾಂಶ ಸಮೃದ್ಧವಾಗಿರುವ ಈ ಪದಾರ್ಥಗಳನ್ನು ಸೇವಿಸಿ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಿ!

Weight Loss Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳದಿಂದ ತೊಂದರೆಗೊಳಗಾಗಿದ್ದಾರೆ. ತೂಕ ಇಳಿಕೆ ಮಾಡಿಕೊಳ್ಳಲು ಜನ ಏನೆಲ್ಲಾ ಕಸರತ್ತು ನಡೆಸುತ್ತಾರೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ.

Written by - Nitin Tabib | Last Updated : Jun 3, 2023, 08:28 PM IST
  • ಉಪ್ಪು ರಹಿತ ಏರ್ ಪಾಪಡ್ ಪಾಪ್ ಕಾರ್ನ್ ಫೈಬರ್ನಿಂದ ಸಮೃದ್ಧವಾಗಿದೆ,
  • ಇದು ತೂಕ ಇಳಿಕೆಗೆ ತುಂಬಾ ರುಚಿಕರವಾದ ಒಂದು ಪದಾರ್ಥವಾಗಿದೆ.
  • ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ,
  • ನೀವು ಉಪ್ಪುರಹಿತ ಏರ್ ಪಾಪಡ್ ಪಾಪ್‌ಕಾರ್ನ್ ಅನ್ನು ಸೇವಿಸಬಹುದು.
Weight Loss Tips:ನಾರಿನಾಂಶ ಸಮೃದ್ಧವಾಗಿರುವ ಈ ಪದಾರ್ಥಗಳನ್ನು ಸೇವಿಸಿ ಒಂದೇ ವಾರದಲ್ಲಿ ತೂಕ ಇಳಿಸಿಕೊಳ್ಳಿ! title=

Weight Loss Tips: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳದಿಂದ ತೊಂದರೆಗೊಳಗಾಗಿದ್ದಾರೆ. ತೂಕ ಇಳಿಕೆ ಮಾಡಿಕೊಳ್ಳಲು ಜನ ಏನೆಲ್ಲಾ ಕಸರತ್ತು ನಡೆಸುತ್ತಾರೆ. ಸ್ಥೂಲಕಾಯತೆಯನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ. ಆದ್ದರಿಂದ ನಿಮ್ಮ ಹೆಚ್ಚುತ್ತಿರುವ ತೂಕದ ಬಗ್ಗೆ ನೀವೂ ಕೂಡ ಚಿಂತಿತರಾಗಿದ್ದರೆ, ನಿಮ್ಮ ಆಹಾರದಲ್ಲಿ ಈ ಕೆಳಗೆ ಸೂಚಿಸಲಾಗಿರುವ ಫೈಬರ್ ಆಹಾರಗಳನ್ನು ನೀವು ಶಾಮೀಲುಗೊಳಿಸಬಹುದು.

1. ಅಗಸೆ ಬೀಜವು ತೂಕವನ್ನು ಕಡಿಮೆ ಮಾಡಲು ಬಲು ಸಹಕಾರಿಯಾಗಿದೆ. ತೂಕ ಹೆಚ್ಚಳದಿಂದ ನೀವೂ ಕೂಡ ಚಿಂತಿತರಾಗಿದ್ದರೆ, ನಂತರ ನೀವು ನಿಮ್ಮ ಆಹಾರದಲ್ಲಿ ಅಗಸೆ ಬೀಜಗಳನ್ನು ಶಾಮೀಳುಗೊಳಿಸಿ. ಇದನ್ನು ಸೇವಿಸುವುದರಿಂದ ತೂಕವು ವೇಗವಾಗಿ ಕಡಿಮೆಯಾಗುತ್ತದೆ.

2. ಬಾದಾಮಿ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಕಾರಿ ಸಾಬೀತಾಗಬಹುದು, ಆದ್ದರಿಂದ ನೀವು ತೂಕವನ್ನು ಕಳೆದುಕೊಳ್ಳಲು ಬಯಸುತ್ತಿದ್ದರೆ, ಪ್ರತಿದಿನ ಬಾದಾಮಿಯನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ.

3. ಉಪ್ಪು ರಹಿತ ಏರ್ ಪಾಪಡ್ ಪಾಪ್ ಕಾರ್ನ್ ಫೈಬರ್ನಿಂದ ಸಮೃದ್ಧವಾಗಿದೆ, ಇದು ತೂಕ ಇಳಿಕೆಗೆ ತುಂಬಾ ರುಚಿಕರವಾದ ಒಂದು ಪದಾರ್ಥವಾಗಿದೆ. ಆದ್ದರಿಂದ ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ, ನೀವು ಉಪ್ಪುರಹಿತ ಏರ್ ಪಾಪಡ್ ಪಾಪ್‌ಕಾರ್ನ್ ಅನ್ನು ಸೇವಿಸಬಹುದು.

4. ನಿಮ್ಮ ಹೆಚ್ಚುತ್ತಿರುವ ತೂಕದಿಂದ ನೀವು ಸಹ ತೊಂದರೆಗೊಳಗಾಗಿದ್ದರೆ, ನಿಮ್ಮ ಆಹಾರದಲ್ಲಿ ನೀವು ಸಿರಿಧಾನ್ಯದಿಂದ ತಯಾರಿಸಲಾದ ಬ್ರೆಡ್ ಅನ್ನು ಸೇರಿಸಿಕೊಳ್ಳಬೇಕು. ಒಂದು ಧಾನ್ಯದ ಬ್ರೆಡ್ನ ಸ್ಲೈಸ್ 4 ಅಥವಾ 5 ಗ್ರಾಂಗಿಂತ ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ. ಆದ್ದರಿಂದ ಇದು ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Success Mantra: ನಿತ್ಯ ಬೆಳಗ್ಗೆ ಈ 4 ಕೆಲಸಗಳನ್ನು ತಪ್ಪದೆ ಮಾಡಿ, ಯಶಸ್ಸು ನಿಮ್ಮ ಪಾದಕ್ಕೆ ಮುತ್ತಿಕ್ಕುತ್ತದೆ!

5. ತೂಕವನ್ನು ಕಳೆದುಕೊಳ್ಳಲು ಬೀನ್ಸ್ ಅನ್ನು ನಿಮ್ಮ ಆಹಾರದಲ್ಲಿ ನೀವು ಸೇರಿಸಿಕೊಳ್ಳಬಹುದು ಬೀನ್ಸ್ ಸಾಕಷ್ಟು ಪ್ರಮಾಣದಲ್ಲಿ ಫೈಬರ್ ಅನ್ನು ಹೊಂದಿದ್ದು, ಅದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Health Tips: ಈ ಸಾಂಬಾರ ಪದಾರ್ಥಗಳಲ್ಲಡಗಿದೆ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವ ಸಾಮರ್ಥ್ಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹ್ತಿಯನ್ನು ಪುಷ್ಠಿಕರಿಸುವುದಿಲ್ಲ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News