Anti Ageing tips: ವಯಸ್ಸಾದಂತೆ ಚರ್ಮದ ಸ್ಥಿತಿ ಬದಲಾಗುತ್ತದೆ. ವಯಸ್ಸನ್ನು ನಿಯಂತ್ರಿಸಲು ಸಾಧವೇ ಇಲ್ಲ, ಆದರೆ ವಯಸ್ಸಿನ ಲಕ್ಷಣಗಳನ್ನು ತುಂಬಾ ಸರಳವಾಗಿ ನಿಯಂತ್ರಿಸಬಹುದು ಅಂತ ಆರೋಗ್ಯ ತಜ್ಞರು ಹೇಳುತ್ತಾರೆ. ಸದಾ ಯೌವನ ಮತ್ತು ಕಾಂತಿಯುಟ ಚರ್ಮವನ್ನು ಪಡೆಯಲು ಈ ಸಲಹೆಗಳನ್ನು ಅನುಸರಿಸಿ.
ವಯೋಸಹಜ ಸಮಸ್ಯೆ ನಿವಾರಣೆಗೆ ಮತ್ತು ಶಾಶ್ವತ ಯುವಕರಾಗಿರಲು ಮೊದಲು ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಉತ್ಪನ್ನಗಳಿಂದ ದೂರವಿರಬೇಕು. ನೈಸರ್ಗಿಕ ಉತ್ಪನ್ನಗಳಿಗೆ ಆದ್ಯತೆ ನೀಡಬೇಕು. ಇವುಗಳು ಚರ್ಮಕ್ಕೆ ತೇವಾಂಶವನ್ನು ನೀಡುವುದರ ಜೊತೆ ಆರೋಗ್ಯ ರಕ್ಷಿಸುತ್ತದೆ.
ಇದನ್ನೂ ಓದಿ:ತಲೆಯ ಬಳಿ ಮೊಬೈಲ್ ಇಟ್ಟುಕೊಂಡು ಮಲಗುತ್ತೀರಾ..? ಮಾರಕ ರೋಗಗಳು ಗ್ಯಾರಂಟಿ..!
ಬಾಹ್ಯ ಸೌಂದರ್ಯಕ್ಕೆ ಆಂತರಿಕ ಆರೋಗ್ಯ ಅತ್ಯಗತ್ಯ. ಇದಕ್ಕಾಗಿ ಆಹಾರ ಕ್ರಮ ಸರಿಯಾಗಿರಬೇಕು. ಸಮತೋಲನ ಆಹಾರವು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದಕ್ಕಾಗಿ ಉಗುರು ಬೆಚ್ಚಗಿನ ನೀರನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಅಕಾಲಿಕ ವಯಸ್ಸಾಗುವುದನ್ನು ತಡೆಯಬಹುದು.
ಮಾರುಕಟ್ಟೆಯಲ್ಲಿ ಫೇಸ್ ಮಾಸ್ಕ್ ಬಳಸಬಾರದು. ಮನೆಯಲ್ಲೇ ತಯಾರಿಸಬೇಕು. ಹಿಸುಕಿದ ಆಲೂಗಡ್ಡೆ, ಬಾಳೆಹಣ್ಣು ಮತ್ತು ಜೇನುತುಪ್ಪದಿಂದ ಮಾಡಿದ ಫೇಸ್ ಮಾಸ್ಕ್ ಉತ್ತಮ ಫಲಿತಾಂಶವನ್ನು ನೀಡುತ್ತದೆ. ತ್ವಚೆಯನ್ನು ತೇವಾಂಶದಿಂದ ಇಡುತ್ತದೆ. ಬೆರ್ರಿ ಹಣ್ಣುಗಳು ಮತ್ತು ಆವಕಾಡೊದಿಂದ ಮಾಡಿದ ಸ್ಮೂಥಿಯನ್ನು ಸೇವಿಸಿ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಹಾರದಲ್ಲಿ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಸೇರಿಸುವುದನ್ನು ಮರೆಯಬೇಡಿ.. ಹೀಗೆ ಮಾಡುವುದರಿಂದ ಚರ್ಮಕ್ಕೆ ಬೇಕಾದ ಪೋಷಕಾಂಶಗಳು ಹೇರಳವಾಗಿ ಸಿಗುತ್ತದೆ.
ಇದನ್ನೂ ಓದಿ:ಕೇವಲ ಮಸಾಲೆ ಅಷ್ಟೇ ಅಲ್ಲ, ಆಯುರ್ವೇದ ಔಷಧಿಯೂ ಹೌದು ಈ ಚಕ್ಕೆ, ಮಧುಮೆಹಿಗಳಿಗೆ ರಾಮಬಾಣ!
ಪ್ರತಿದಿನ ವ್ಯಾಯಾಮ ಅಥವಾ ನಡಿಗೆಗೆ ಸಾಕಷ್ಟು ಸಮಯವನ್ನು ಮೀಸಲಿಡಬೇಕು. ಇದು ಬಾಹ್ಯವಾಗಿ ಮತ್ತು ಆಂತರಿಕವಾಗಿ ಆರೋಗ್ಯವನ್ನು ಸುಧಾರಿಸುತ್ತದೆ. ತ್ವಚೆಯ ಆರೈಕೆ ಮತ್ತು ಸೌಂದರ್ಯಕ್ಕೆ ದೈನಂದಿನ ವ್ಯಾಯಾಮ ಅತ್ಯಗತ್ಯ. ಇದರಿಂದ ದೇಹವು ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ದೇಹದಲ್ಲಿ ರಕ್ತ ಪೂರೈಕೆ ಉತ್ತಮವಾಗಿರುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.