ಟೂಥ್ ಪೇಸ್ಟ್ ಬದಲು ಈ ಹಣ್ಣಿನ ಸಿಪ್ಪೆ ಬಳಸಿ, ಹಲ್ಲಿನಲ್ಲಿರುವ ಹಳದಿ ಕಲೆ ಸುಲಭವಾಗಿ ಮಾಯವಾಗುತ್ತದೆ!

Teeth Whitening Tips : ಇದನ್ನು ಕೆಲವು ದಿನಗಳವರೆಗೆ ಪ್ರಯತ್ನಿಸಿದರೆ ಹಲ್ಲಿನ ಮೇಲಿರುವ ಹಳದಿ ಕಲೆಗಳು ಮರೆಯಾಗಿ ಹಲ್ಲುಗಳು ಮತ್ತೆ ಮುತ್ತಿನಂತೆ ಹೊಳೆಯಲು ಆರಂಭಿಸುತ್ತದೆ.  

Written by - Ranjitha R K | Last Updated : Apr 25, 2024, 01:56 PM IST
  • ಪ್ರತಿನಿತ್ಯ ಹಲ್ಲುಜ್ಜಿದರೂ ಹಲ್ಲುಗಳಲ್ಲಿ ಹಳದಿ ಕಲೆಗಳು ಉಳಿದು ಬಿಡುತ್ತವೆ.
  • ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ ಹಲ್ಲುಗಳು ಮಾತ್ರ ಹಳದಿಯಾಗಿಯೇ ಇರುತ್ತವೆ.
  • ಹಳದಿ ಹಲ್ಲುಗಳು ನಮ್ಮ ಸೌಂದರ್ಯವನ್ನು ಹಾಳುಮಾಡುತ್ತದೆ.
ಟೂಥ್ ಪೇಸ್ಟ್ ಬದಲು ಈ ಹಣ್ಣಿನ ಸಿಪ್ಪೆ ಬಳಸಿ, ಹಲ್ಲಿನಲ್ಲಿರುವ ಹಳದಿ ಕಲೆ ಸುಲಭವಾಗಿ ಮಾಯವಾಗುತ್ತದೆ! title=

ಬೆಂಗಳೂರು : ಪ್ರತಿನಿತ್ಯ ಹಲ್ಲುಜ್ಜಿದರೂ ಹಲ್ಲುಗಳಲ್ಲಿ ಹಳದಿ ಕಲೆಗಳು ಉಳಿದು ಬಿಡುತ್ತವೆ. ಕೆಲವೊಮ್ಮೆ ದಿನಕ್ಕೆರಡು ಬಾರಿ ಹಲ್ಲುಜ್ಜಿದರೂ ಹಲ್ಲುಗಳು ಮಾತ್ರ ಹಳದಿಯಾಗಿಯೇ ಇರುತ್ತವೆ. ಹಳದಿ ಹಲ್ಲುಗಳು ನಮ್ಮ ಸೌಂದರ್ಯವನ್ನು ಹಾಳುಮಾಡುತ್ತದೆ. ಇದರ ಜೊತೆಗೆ ಹಳದಿ ಹಲ್ಲು ರೋಗಗಳ ಸಂಕೇತವೂ ಆಗಿರಬಹುದು. ಈ ಹಳದಿ ಹಲ್ಲುಗಳ ಸಮಸ್ಯೆಯನ್ನು ಬಗೆಹರಿಸಲು ಹಲವು ಮಾರ್ಗಗಳಿವೆ. 

ಹಲ್ಲುಗಳ ಬಿಳುಪನ್ನು ಮತ್ತೆ ಮರಳಿ ಪಡೆಯುವುದು ಹೇಗೆ ಎನ್ನುವ ಪ್ರಶ್ನೆ ಅನೇಕರಲ್ಲಿರುತ್ತದೆ. ಇದಕ್ಕಾಗಿ ಯಾವುದೇ ಟೂತ್ ಪೇಸ್ಟ್, ಮೌತ್ ವಾಶ್ ಇದ್ಯಾವುದನ್ನೂ ಬಳಸುವ ಅಗತ್ಯ ಇಲ್ಲ. ನಮ್ಮ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಬಳಸಿ ಹಲ್ಲಿನ ಮೇಲೆ ಅಂಟಿ ಕುಳಿತಿರುವ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದು ಹಾಕಬಹುದು. ಇದನ್ನು ಕೆಲವು ದಿನಗಳವರೆಗೆ ಪ್ರಯತ್ನಿಸಿದರೆ ಹಲ್ಲಿನ ಮೇಲಿರುವ ಹಳದಿ ಕಲೆಗಳು ಮರೆಯಾಗಿ ಹಲ್ಲುಗಳು ಮತ್ತೆ ಮುತ್ತಿನಂತೆ ಹೊಳೆಯಲು ಆರಂಭಿಸುತ್ತದೆ.

ಇದನ್ನೂ ಓದಿ : ಬೇಸಿಗೆಯಲ್ಲಿ ಕಬ್ಬಿನಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು!

ಅರಿಶಿನ : 
ತೆಂಗಿನ ಎಣ್ಣೆಯೊಂದಿಗೆ ಅರಿಶಿನವನ್ನು ಮಿಶ್ರಣ ಮಾಡಿ ಅದನ್ನು ಹಲ್ಲುಗಳ ಮೇಲೆ ಸ್ವಲ್ಪ ಸಮಯದವರೆಗೆ ಹಚ್ಚಿ. ಇದು ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು   ಹೋಗಲಾಡಿಸುವುದು ಮಾತ್ರವಲ್ಲ ಬಾಯಿಯ ದುರ್ವಾಸನೆಯನ್ನು ಕೂಡಾ ನಿರ್ಮೂಲನೆ ಮಾಡುತ್ತದೆ. ಈ ಮಿಶ್ರಣವನ್ನು ನಿಮ್ಮ ಹಲ್ಲುಗಳ ಮೇಲೆ ಹಚ್ಚಿ  ಸ್ವಲ್ಪ ಸಮಯದವರೆಗೆ ಹಾಗೆಯೇ ಬಿಡಬೇಕು. ನಂತರ ಹಲ್ಲನ್ನು ಚೆನ್ನಾಗಿ ಉಜ್ಜಬೇಕು. ಹೀಗೆಯೇ ಮಾಡುತ್ತಾ ಬಂದರೆ ಹಳದಿ ಹಲ್ಲಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದು. 

ಹಲ್ಲುಗಳನ್ನು ಸ್ವಚ್ಛಗೊಳಿಸಲು ಮನೆಮದ್ದುಗಳು :
ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ, ನಿಂಬೆ ಹಣ್ಣಿನ ಸಿಪ್ಪೆಯನ್ನು ತೆಗೆದುಕೊಂಡು ಅವುಗಳನ್ನು ಹಲ್ಲಿನ ಮೇಲೆ ಉಜ್ಜಬೇಕು. ಈ ಮೂಲಕ  ಹಲ್ಲುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದು ಹಲ್ಲು ನೋವಿನಿಂದಲೂ ಪರಿಹಾರ ನೀಡುತ್ತದೆ.

ಹಲ್ಲುಗಳನ್ನು ಸ್ವಚ್ಛಗೊಳಿಸಲು ಅಡಿಗೆ ಸೋಡಾದ ಪೇಸ್ಟ್ ಮಾಡಿ ಹಚ್ಚಿದರೂ ಪ್ರಯೋಜನವಾಗುವುದು.ಈ ಪೇಸ್ಟ್ ಮೂಲಕ ವಾರಕ್ಕೊಮ್ಮೆ ಬ್ರಷ್ ಮಾಡಿದರೆ ಹಳದಿ ಹಲ್ಲುಗಳು ಬಿಳಿಯಾಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ : ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿಂದರೆ ಏನಾಗುತ್ತದೆ? ತಜ್ಞರು ಈ ಬಗ್ಗೆ ಹೇಳುವುದೇನು ?

ಇನ್ನು ಸಾಸಿವೆ ಎಣ್ಣೆಯಲ್ಲಿ ಒಂದು ಚಿಟಿಕೆ ಅರಿಶಿನ ಮತ್ತು ಉಪ್ಪನ್ನು ಬೆರೆಸಿ ಪೇಸ್ಟ್ ಮಾಡಿ ದಿನಕ್ಕೆ ಎರಡು ಬಾರಿ ಬ್ರಷ್ ಮಾಡಬೇಕು. ಹೀಗೆ ಮಾಡುವುದರಿಂದ ಹಲ್ಲುಗಳಲ್ಲಿರುವ ಕ್ರಿಮಿಗಳು  ದೂರವಾಗುತ್ತವೆ.ಇದಲ್ಲದೇ ಬಾಯಿಯ ದುರ್ವಾಸನೆಯೂ ದೂರವಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News