Hing Health Benefits: ಎಲ್ಲರ ಅಡುಗೆಯ ಮನೆಯಲ್ಲಿ ಸಾಮಾನ್ಯವಾಗಿ ಇಂಗು ಸಿಕ್ಕೇ ಸಿಗುತ್ತದೆ. ಇಂಗು ಸುವಾಸನೆ, ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ನಮ್ಮ ಆರೋಗ್ಯದ ಅನೇಕ ಸಮಸ್ಯೆಗಳಿಗೆ ಇಂಗಿನಲ್ಲಿ ಪರಿಹಾರವಿದೆ. ಇಂಗು ಭಾರತಕ್ಕೆ ಯಾವಾಗ ಮತ್ತು ಹೇಗೆ ಬಂದಿತು ಎಂಬುದರ ಕುರಿತು ಅನೇಕ ಅಭಿಪ್ರಾಯಗಳಿವೆ. ಮಧ್ಯಯುಗದಲ್ಲಿ ಮೊಘಲರು ಭಾರತಕ್ಕೆ ಬಂದಾಗ ಅವರ ಜೊತೆ ಇಂಗು ಕೂಡ ಇಲ್ಲಿಗೆ ಬಂದಿತ್ತು ಎಂದು ಕೆಲವರು ಹೇಳುತ್ತಾರೆ. ಆದರೆ ಹಲವು ದಾಖಲೆಗಳ ಪ್ರಕಾರ ಮೊಘಲರು ಭಾರತಕ್ಕೆ ಬರುವುದಕ್ಕಿಂತ ಮುಂಚೆಯೇ ಭಾರತದಲ್ಲಿ ಇಂಗು ಬಳಕೆಗಯಲ್ಲಿತ್ತು ಎಂಬ ಪುರಾವೆಗಳಿವೆ. ಇಂಗು ಸಂಸ್ಕೃತದಲ್ಲಿ ಹಿಂಗು ಎಂದು ಕರೆಯುತ್ತಾರೆ. ಭಾರತದ ಹವಾಮಾನದ ಪ್ರಕಾರ ಮತ್ತು ಇಲ್ಲಿ ಕಂಡುಬರುವ ಮಣ್ಣಿನ ಪ್ರಕಾರ, ಭಾರತದಲ್ಲಿ ಇದರ ಕೃಷಿ ಅಪರೂಪ. ಭಾರತದಲ್ಲಿನ ಹವಾಮಾನ ಮತ್ತು ಮಣ್ಣು ಇಂಗು ಉತ್ಪಾದನೆಗೆ ಸೂಕ್ತವಲ್ಲದಿದ್ದರೂ ಸಹ, ಪ್ರಪಂಚದ ಇತರ ದೇಶಗಳಿಗಿಂತ ಹೆಚ್ಚು ಇಂಗು ಭಾರತದಲ್ಲಿ ಬಳಸಲಾಗುತ್ತದೆ.
ಇದನ್ನೂ ಓದಿ: ಈ ಮಣ್ಣಿನಿಂದ ಕೂದಲು ತೊಳೆಯಿರಿ: ನೀವು ಊಹಿಸಿರದಷ್ಟು ಅದ್ಭುತ ಪ್ರಯೋಜನ ಸಿಗುತ್ತೆ
ಇಂಗು ಎಲ್ಲಿ ಬೆಳೆಯಲಾಗುತ್ತದೆ?
ಇಂಗು ಫೆನ್ನೆಲ್ ಜಾತಿಯ ಇರಾನಿ ಮೂಲದ ಸಸ್ಯವಾಗಿದೆ. ಇದರ ಎತ್ತರವು 1 ರಿಂದ 1.5 ಮೀ. ವರೆಗೂ ಇರುತ್ತದೆ. ಸಾಮಾನ್ಯವಾಗಿ ಈ ಸಸ್ಯಗಳು ಮೆಡಿಟರೇನಿಯನ್ ಪ್ರದೇಶದಿಂದ ಮಧ್ಯ ಏಷ್ಯಾದವರೆಗೂ ಸಿಗುತ್ತವೆ. ಭಾರತದಲ್ಲಿ, ಇದನ್ನು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ನ ಭಾಗಗಳಲ್ಲಿ ಬೆಳೆಸಲಾಗುತ್ತಿದೆ. ಇಂಗು ಭಾರತದ ಪ್ರತಿಯೊಂದು ಮನೆಯಲ್ಲೂ ಬಳಸಲ್ಪಡುತ್ತದೆ ಮತ್ತು ಭಾರತವು ಹೆಚ್ಚಾಗಿ ಇರಾನ್, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನ್‌ನಂತಹ ದೇಶಗಳಿಂದ ಇಂಗನ್ನು ಪಡೆಯಬೇಕಾಗುತ್ತದೆ.
ಇಂಗು ಹೇಗೆ ತಯಾರಿಸಲಾಗುತ್ತದೆ?
ಇಂಗು ಸಸ್ಯವು ಹಳದಿ ಹೂಗಳನ್ನು ಹೊಂದಿರುತ್ತದೆ. ಇಂಗು ಗಿಡ ದೂರದಿಂದ ನೋಡಿದಾಗ ಸಾಸಿವೆ ಗಿಡದಂತೆ ಕಾಣುತ್ತದೆ. ಆದರೆ, ಅದರ ಎತ್ತರ ಸಾಸಿವೆಯಷ್ಟು ಇಲ್ಲ. ನಾವು ನಮ್ಮ ಆಹಾರದಲ್ಲಿ ಬಳಸುವ ಇಂಗನ್ನು ವಾಸ್ತವವಾಗಿ ಸಸ್ಯದ ಮೂಲದಿಂದ ತಯಾರಿಸಲಾಗುತ್ತದೆ. ಸಸ್ಯದ ಬೇರಿನ ರಸದಿಂದ ತಯಾರಿಸಿದ ಇಂಗು ಸುಮಾರು 130 ವಿಧಗಳಿವೆ. ಒಂದು ಗಿಡದಿಂದ ಇಂಗು ಇಳುವರಿ ಪಡೆಯಲು ನಾಲ್ಕು ವರ್ಷ ಕಾಯಬೇಕು ಮತ್ತು ಒಂದು ಗಿಡದಿಂದ ಕೇವಲ ಅರ್ಧ ಕಿಲೋ ಇಂಗು ಸಿಗುತ್ತದೆ.
ಇಂಗಿನಲ್ಲಿರುವ ಆರೋಗ್ಯ ಪ್ರಯೋಜನಗಳು:
ಇಂಗು ಹಲವಾರು ಪ್ರಯೋಜನಗಳನ್ನು ಹೊಂದಿದೆ, ಇದನ್ನು ಭಾರತದ ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಮೊದಲನೆಯದಾಗಿ ಬಿಕ್ಕಳಿಕೆ ಮತ್ತು ವಾಂತಿಯಿಂದ ಬಳಲುತ್ತಿದ್ದರೆ ಬಾಳೆಹಣ್ಣಿನ ತಿರುಳಿನಲ್ಲಿ ಸ್ವಲ್ಪ ಇಂಗು ಬೆರೆಸಿ ತಿಂದರೆ ಪರಿಹಾರ ಸಿಗುತ್ತದೆ. ಅಷ್ಟೇ ಅಲ್ಲ ಜ್ಞಾಪಕ ಶಕ್ತಿ ಹೆಚ್ಚಿಸಲು ಇಂಗು ಬಳಸುತ್ತಾರೆ. ಇದು ಹೊಟ್ಟೆಯ ಸಮಸ್ಯೆ, ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ.
ಎದೆಯಲ್ಲಿ ಕಫ ಶೇಖರಣೆಗೊಂಡಿದ್ದರೆ ನೀರಿಗೆ ಇಗನ್ನು ಸೇರಿಸಿ ಲೋಷನ್ ಮಾಡಿ ನಂತರ ದಿನಕ್ಕೆ ಎರಡು-ಮೂರು ಬಾರಿ ಎದೆಗೆ ಹಚ್ಚಿದರೆ ಕೆಮ್ಮಿನ ಜೊತೆ ಬರುವ ಕಫ ಹೊರಬರುತ್ತದೆ. ಹಲ್ಲುನೋವು ಇದ್ದರೆ, ಇಂಗನ್ನು ಬಾಯಿಯಲ್ಲಿ ಇಟ್ಟುಕೊಂಡು ಪರಿಹಾರವನ್ನು ಪಡೆಯಬಹುದು. ರಿಂಗ್ ವರ್ಮ್ ಅಥವಾ ಇತರ ಚರ್ಮ ರೋಗಗಳಿದ್ದರೆ, ಇಂಗು ಮತ್ತು ನೀರಿನ ಪೇಸ್ಟ್ ಅನ್ನು ಅನ್ವಯಿಸುವುದರಿಂದ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ:Blood Pressure: ನೀರು ಕುಡಿದೇ ಬಿಪಿ ಕಂಟ್ರೋಲ್‌ಗೆ ತರಬಹುದು! ಈ ವಿಧಾನ ಅನುಸರಿಸಬೇಕಷ್ಟೆ
ಪಾದಗಳು ಬಿರುಕು ಬಿಟ್ಟಿರುವ ಸಮಸ್ಯೆಯಿದ್ದರೆ ಬೇವಿನ ಎಣ್ಣೆಯಲ್ಲಿ ಇಂಗು ಹಾಕಿ ಲೇಪಿಸಿದರೆ ಬೇಗ ಪರಿಹಾರ ಸಿಗುತ್ತದೆ. ಚಳಿಗಾಲದಲ್ಲಿ ಬಿಸಿನೀರಿನೊಂದಿಗೆ ಅರ್ಧ ಗ್ರಾಂ ಇಂಗು ಮತ್ತು ಬೇಸಿಗೆಯಲ್ಲಿ ಮಜ್ಜಿಗೆಯನ್ನು ಇಂಗಿನ ಜೊತೆ ಸೇವಿಸುವುದರಿಂದ ಆಸಿಡಿಟಿ ಸಮಸ್ಯೆ ದೂರವಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.