ಹಲ್ಲುಗಳ ಮೇಲೆ ಪರಿಣಾಮ ಬೀರುತ್ತದೆ ಹೈ ಬ್ಲಡ್ ಶುಗರ್ , ಇದನ್ನು ತಡೆಯುವುದು ಹೇಗೆ ?

ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ ಹಲ್ಲುಗಳು ಹಾನಿಗೊಳಗಾಗುತ್ತವೆ.  ಇದು ಹೃದಯ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದರೆ ಹಲ್ಲುಗಳ ಸಮಸ್ಯೆಯನ್ನು ಕೂಡಾ ಹೆಚ್ಚಿಸುತ್ತದೆ.   

Written by - Ranjitha R K | Last Updated : Jun 6, 2022, 05:36 PM IST
  • ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿದೆ.
  • ಮಧುಮೇಹಿಗಳು ಜೀವನಶೈಲಿ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು
  • ಮಧುಮೇಹದಲ್ಲಿ, ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ.
ಹಲ್ಲುಗಳ ಮೇಲೆ ಪರಿಣಾಮ ಬೀರುತ್ತದೆ ಹೈ ಬ್ಲಡ್ ಶುಗರ್ ,  ಇದನ್ನು ತಡೆಯುವುದು ಹೇಗೆ ?  title=
diabetes and dental health (file photo)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಧುಮೇಹ ಎನ್ನುವುದು ಸಾಮಾನ್ಯ ಕಾಯಿಲೆಯಾಗಿದೆ. ಈ ರೋಗಕ್ಕೆ ಭಾರತದಲ್ಲಿ ಅನೇಕ ಜನರು ಬಲಿಯಾಗುತ್ತಿದ್ದಾರೆ. ಮಧುಮೇಹಿಗಳು ತಮ್ಮ ಜೀವನಶೈಲಿ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಲಾಗುತ್ತದೆ. ಆಗ ಮಾತ್ರ ಅವರು ಆರೋಗ್ಯಕರ ಜೀವನವನ್ನು ನಡೆಸಬಹುದು. ಮಧುಮೇಹದಲ್ಲಿ, ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿ ಸಾಬೀತಾಗುತ್ತದೆ.  

ರಕ್ತದಲ್ಲಿನ ಸಕ್ಕರೆಯ ಹೆಚ್ಚಳದಿಂದಾಗಿ ಹಲ್ಲುಗಳು ಹಾನಿಗೊಳಗಾಗುತ್ತವೆ :
ಮಧುಮೇಹವು ಅನೇಕ ಕಾಯಿಲೆಗಳ ಮೂಲ ಎಂದರೆ ತಪ್ಪಲ್ಲ. ಇದು ಹೃದಯ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದರೆ ಹಲ್ಲುಗಳ ಸಮಸ್ಯೆಯನ್ನು ಕೂಡಾ ಹೆಚ್ಚಿಸುತ್ತದೆ. 

ಇದನ್ನೂ ಓದಿ : ಕಾಫಿ ಮೇಕರ್‌ನ ಗಾಡ್‌ಫಾದರ್‌ ಏಂಜೆಲೊ ಹುಟ್ಟುಹಬ್ಬ: ಗೂಗಲ್‌ನಿಂದ ಗೌರವ

ಮಧುಮೇಹವು ಹಲ್ಲುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
1. ಕುಳಿಗಳು :

ಬ್ಯಾಕ್ಟೀರಿಯಾಗಳು ಬಾಯಿಯನ್ನು ಪ್ರವೇಶಿಸಲು ಹಲವು ಮಾರ್ಗಗಳಿವೆ. ಆದರೆ ಅವು ರಕ್ತದಲ್ಲಿನ ಸಕ್ಕರೆಯೊಂದಿಗೆ ಸಂಪರ್ಕಕ್ಕೆ ಬಂದಾಗ, ಹಲ್ಲುಗಳ ಸುತ್ತಲೂ ಪದರವನ್ನು ರೂಪಿಸುತ್ತವೆ. ಇದನ್ನು ಪ್ಲೇಕ್ ಎಂದು ಕರೆಯಲಾಗುತ್ತದೆ. ಈ ಪ್ಲೇಕ್ ವಿಶೇಷ ರೀತಿಯ ಆಮ್ಲವನ್ನು ಹೊಂದಿರುತ್ತದೆ.  ಇದರಿಂದ ನಿಧಾನವಾಗಿ ಹಲ್ಲುಗಳು ಕೊಳೆಯಲು ಪ್ರಾರಂಭಿಸುತ್ತದೆ.

2. ವಸಡಿನ ಕಾಯಿಲೆ : 
ಮಧುಮೇಹವು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ತುಂಬಾ ದುರ್ಬಲವಾಗುತ್ತದೆ. ಹೀಗಾದಾಗ ಅನೇಕ ಕಾಯಿಲೆಗಳಿಗೆ ಬಲಿಯಾಗಬೇಕಾಗುತ್ತದೆ. ವಸಡಿನ ತೊಂದರೆ ಕೂಡಾ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಎದುರಾಗುತ್ತದೆ.

ಇದನ್ನೂ ಓದಿ : Norovirus: ಕರೋನಾ ಮತ್ತು ಮಂಕಿಪಾಕ್ಸ್‌ನ ಭೀತಿಯ ನಡುವೆ ಭಾರತಕ್ಕೆ ಹೊಸ ವೈರಸ್ ಬೆದರಿಕೆ

ಮಧುಮೇಹ ರೋಗಿಗಳು ಹಲ್ಲಿನ ಕಾಯಿಲೆಗಳನ್ನು ತಪ್ಪಿಸುವುದು ಹೇಗೆ ?
1. ರಕ್ತದ ಸಕ್ಕರೆಯ ಮಟ್ಟವನ್ನು ಯಾವಾಗಲೂ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಿ. ನಿಯಮಿತವಾಗಿ ಶುಗರ್ ಪರೀಕ್ಷೆ ಮಾಡುತ್ತಿರಿ. 
2. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಮತ್ತು ರಾತ್ರಿ ಮಲಗುವ ಮೊದಲು ಬ್ರಷ್ ಮಾಡುವುದನ್ನು ಮರೆಯಬೇಡಿ. 
3. ಎರಡು ಹಲ್ಲುಗಳ ನಡುವೆ ಅಂಟಿಕೊಂಡಿರುವ ಕೊಳೆಯನ್ನು ತೆಗೆಯಲು ಡೆಂಟಲ್ ಫ್ಲೋಸ್ ಬಳಸಿ.
4. ಸಿಗರೇಟ್, ಮದ್ಯ ಮತ್ತು ತಂಪು ಪಾನೀಯಗಳು ನಿಮ್ಮ ಹಲ್ಲುಗಳನ್ನು ಹಾಳುಮಾಡುತ್ತವೆ. ಅವುಗಳಿಂದ ದೂರವಿರಿ.
5. ದಂತವೈದ್ಯರ ಬಳಿಗೆ ಹೋಗಿ ಮತ್ತು ನಿಮ್ಮ ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಿ.

 

 (ಸೂಚನೆ : ಈ ಮೇಲಿನ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,  ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News