Diabetes: ಇಲ್ಲಿವೆ ಮಧುಮೇಹದ ಸೈಲೆಂಟ್ ಲಕ್ಷಣಗಳು, ಮರೆತೂ ಕೂಡ ನಿರ್ಲಕ್ಷಿಸಬೇಡಿ

Diabetes Silent Symptoms: ಚಿಕಿತ್ಸೆಯೇ ಇಲ್ಲದ ಜೀವನಶೈಲಿಯ ಒಂದು ಕಾಯಿಲೆ ಎಂದರೆ ಅದು ಮಧುಮೇಹ. ಇತ್ತೀಚಿನ ದಿನಗಳಲ್ಲಿ ಯುವಕರೂ ಕೂಡ ಮಧುಮೇಹಕ್ಕೆ ಗುರಿಯಾಗುತ್ತಿದ್ದಾರೆ. ಇನ್ನೊಂದೆಡೆ ಈ ಸಕ್ಕರೆ ಕಾಯಿಲೆಗೆ ಕೆಲವು ಮೂಕ ಲಕ್ಷಣಗಳಿವೆ, ಈ ಲಕ್ಷಣಗಳನ್ನು ಮರೆತೂ ಕೂಡ ನಿರ್ಲಕ್ಷಿಸಬೇಡಿ.  

Written by - Nitin Tabib | Last Updated : Nov 21, 2022, 10:21 PM IST
  • ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗುತ್ತಿದೆ.
  • ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ರೋಗಗಳು ಅವರನ್ನು ಆವರಿಸಿಕೊಳ್ಳುತ್ತಿವೆ.
  • ಇದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಮಧುಮೇಹದ ಕಪಿಮುಷ್ಟಿಗೆ ಸಿಲುಕಿಕೊಳ್ಳುತ್ತಿದ್ದಾರೆ.
Diabetes: ಇಲ್ಲಿವೆ ಮಧುಮೇಹದ ಸೈಲೆಂಟ್ ಲಕ್ಷಣಗಳು, ಮರೆತೂ ಕೂಡ ನಿರ್ಲಕ್ಷಿಸಬೇಡಿ title=
Diabetes Silent Symptoms

Diabetes Silent Symptoms: ಬದಲಾಗುತ್ತಿರುವ ಹವಾಮಾನ ಮತ್ತು ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜನರಲ್ಲಿ ರೋಗನಿರೋಧಕ ಶಕ್ತಿ ತುಂಬಾ ದುರ್ಬಲವಾಗುತ್ತಿದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ರೋಗಗಳು ಅವರನ್ನು ಆವರಿಸಿಕೊಳ್ಳುತ್ತಿವೆ. ಹೀಗಿರುವಾಗ ಮಧುಮೇಹ ಕೂಡ ಅಂತಹ ಒಂದು ಅಪಾಯಕಾರಿ ಕಾಯಿಲೆಗಳಲ್ಲಿ ಒಂದಾಗಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಜನರು ಈ ಕಾಯಿಲೆಯ ಕಪಿಮುಷ್ಟಿಗೆ ಸಿಲುಕಿಕೊಳ್ಳುತ್ತಿದ್ದಾರೆ. ಯಾವುದೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಇಲ್ಲದ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು.  ಇತ್ತೀಚಿನ ದಿನಗಳಲ್ಲಿ ಯುವಕರು ಕೂಡ ಮಧುಮೇಹಕ್ಕೆ ಗುರಿಯಾಗುತ್ತಿದ್ದಾರೆ. ಆದರೆ, ಈ ಕಾಯಿಲೆ ಕೆಲ ಮೂಕ ಲಕ್ಷಣಗಳನ್ನು ಹೊಂದಿದೆ. ಅವುಗಳನ್ನು ಸಮಯ ಇರುವಂತೆಗೆ ಗುರುತಿಸಿ ನೀವು ಈ ಕಾಯಿಲೆಯನ್ನು ನಿಯಂತ್ರಿಸಬಹುದು.  ಮಧುಮೇಹದ ಯಾವ ಲಕ್ಷಣಗಳು ಮೌನ ಲಕ್ಷಣಗಳಾಗಿವೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ ಬನ್ನಿ,
ಇವು ಮಧುಮೇಹದ ಮೂಕ ಲಕ್ಷಣಗಳು

ಕತ್ತಿನ ಭಾಗ ದಪ್ಪಾಗುವುದು ಮತ್ತು ಕಪ್ಪಾಗುವುದು
ಹಲವರು ಮಧುಮೇಹದ ಈ ರೋಗಲಕ್ಷಣವನ್ನು ನಿರ್ಲಕ್ಷಿಸುತ್ತಾರೆ, ಒಂದು ವೇಳೆ ನಿಮ್ಮ ಕತ್ತಿನ ಬಣ್ಣವು ಉಳಿದ ಚರ್ಮಕ್ಕಿಂತ ಗಾಢವಾಗಿ ಮತ್ತು ದಪ್ಪವಾಗಿ ಕಾಣುತ್ತಿದ್ದರೆ, ನೀವು ತಕ್ಷಣ ಎಚ್ಚೆತ್ತುಕೊಳ್ಳಬೇಕು. ಏಕೆಂದರೆ ಅದು ಮಧುಮೇಹದ ಲಕ್ಷಣವಾಗಿರಬಹುದು, ಆದ್ದರಿಂದ ನಿಮ್ಮ ಕುತ್ತಿಗೆಯ ಕಪ್ಪಾಗುತ್ತಿದೆ ಅಥವಾ ನಿಮ್ಮ ಕುತ್ತಿಗೆ ದಪ್ಪವಾಗುತ್ತಿದೆ ಅಂತ ನಿಮಗೆ ಅನಿಸಿದರೆ ಖಂಡಿತವಾಗಿಯೂ ಅದನ್ನು ನಿರ್ಲಕ್ಷಿಸಬೇಡಿ ಮತ್ತು ವೈದ್ಯರನ್ನು ಸಂಪರ್ಕಿಸಿ.

ಆಗಾಗ್ಗೆ ಸೋಂಕುಗಳು ತಗುಲುವುದು
ಮಧುಮೇಹ ರೋಗಿಗಳಿಗೆ ಆಗಾಗ್ಗೆ ಸೋಂಕು ತಗುಲುತ್ತದೆ. ಕೆಲವೊಮ್ಮೆ ಹೊಟ್ಟೆಯಲ್ಲಿ ತೊಂದರೆ, ಕೆಲವೊಮ್ಮೆ ತೊಡೆ ಮತ್ತು ಕೈಕಾಲುಗಳಲ್ಲಿ ತುರಿಕೆ ಸಂಭವಿಸಲಾರಂಭಿಸುತ್ತದೆ, ಹೀಗಿರುವಾಗ ಒಂದು ವೇಳೆ ನೀವು ಕೂಡ ಆಗಾಗ್ಗೆ ಸೋಂಕುಗಳಿಗೆ ಒಳಗಾಗುತ್ತಿದ್ದರೆ, ಅದನ್ನು ತಪ್ಪಾಗಿ ನಿರ್ಲಕ್ಷಿಸಬೇಡಿ. ಏಕೆಂದರೆ ಇದು ಮಧುಮೇಹದ ಮೂಕ ಲಕ್ಷಣವಾಗಿದೆ. ಇದರಿಂದ ನಿಮ್ಮ ಚರ್ಮದಿಂದ ಸಾಕಷ್ಟು ಮೊಡವೆಗಳು ಕೂಡ ಕಾಣಿಸಿಕೊಳ್ಳುತ್ತವೆ. 

ಇದನ್ನೂ ಓದಿ-Ginger Milk: ಚಳಿಗಾಲದಲ್ಲಿ ಶುಂಠಿ ಹಾಲು ಕುಡಿದರೆ ಆರೋಗ್ಯಕ್ಕೆ ಸಿಗುತ್ತವೆ ಈ ಲಾಭಗಳು

ಕನ್ನಡಕದ ನಂಬರ್ ಹೆಚ್ಚಾಗುವುದು
ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಂತೆ ಕನ್ನಡಕದ ನಂಬರ್ ಕೂಡ ಹೆಚ್ಚಾಗತೊಡಗುತ್ತದೆ. ಆದ್ದರಿಂದ ಇದನ್ನು ನಿರ್ಲಕ್ಷಿಸುವ ಬದಲು, ಕಣ್ಣಿನ ತಪಾಸಣೆಯ ಜೊತೆಗೆ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಒಮ್ಮೆ ಪರೀಕ್ಷಿಸಿ. ಏಕೆಂದರೆ ಇವು ಮಧುಮೇಹದ ಮೂಕ ಲಕ್ಷಣಗಳಾಗಿರಬಹುದು.

ಇದನ್ನೂ ಓದಿ-Bad Cholesterol ಹೆಚ್ಚಾದಾಗ ಶರೀರದಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News