Acidity ಯಿಂದ ತೊಂದರೆಗೊಳಗಾಗಿದ್ದರೆ ಈ ಎಲೆಗಳನ್ನು ಸೇವಿಸಿ ತಕ್ಷಣ ಪರಿಹಾರ ಸಿಗಲಿದೆ

Benefits of Tulsi in Acidity:  ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ. ಹೀಗಿರುವಾಗ ನೀವು ಕೂಡ ಅಪಚನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ತುಳಸಿಯ ಎಲೆಗಳ ಬಳಕೆಯನ್ನು ಒಮ್ಮೆ ಮಾಡಿ ನೋಡಿ,   

Written by - Nitin Tabib | Last Updated : Jul 1, 2022, 08:57 PM IST
  • ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಾರೆ.
  • ಹೀಗಿರುವಾಗ ನೀವು ಕೂಡ ಅಪಚನ ಸಮಸ್ಯೆಯನ್ನು ಎದುರಿಸುತ್ತಿದ್ದರೆ,
  • ತುಳಸಿಯ ಎಲೆಗಳ ಬಳಕೆಯನ್ನು ಒಮ್ಮೆ ಮಾಡಿ ನೋಡಿ,
Acidity ಯಿಂದ ತೊಂದರೆಗೊಳಗಾಗಿದ್ದರೆ ಈ ಎಲೆಗಳನ್ನು ಸೇವಿಸಿ ತಕ್ಷಣ ಪರಿಹಾರ ಸಿಗಲಿದೆ title=
Use Of Tulsi For Acitity

Benefits of Tulsi in Acidity: ತುಳಸಿ ಗಿಡ ಬಹುತೇಕ ಮನೆಗಳಲ್ಲಿ ಸುಲಭವಾಗಿ ಕಂಡುಬರುವ ಒಂದು ಸಸ್ಯವಾಗಿದೆ. ಇನ್ನೊಂದೆಡೆ, ತುಳಸಿ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಈ ಕಾಯಿಲೆಗಳಲ್ಲಿ ಅಸಿಡಿಟಿ ಸಮಸ್ಯೆಯೂ ಕೂಡ ಒಂದಾಗಿದೆ. ತುಳಸಿ ಸೇವನೆಯು ಆಮ್ಲೀಯತೆಯನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯಾ? ತುಳಸಿ ಸೇವನೆ ದೇಹದಿಂದ ವಿಷಕಾರಿ ಪದಾರ್ಥಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಹೀಗಾಗಿ, ನೀವು ಅಪಚನ ಸಮಸ್ಯೆ ಹೊಂದಿದ್ದರೂ ಕೂಡ ತುಳಸಿಯನ್ನು ಬಳಕೆ ಮಾಡಬಹುದು. ಅಸಿಡಿಟಿ ಸಮಸ್ಯೆಯಲ್ಲಿ ತುಳಸಿ ಬಳಕೆಯನ್ನು ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ, 

ಅಸಿಡಿಟಿ ಹೋಗಲಾಡಿಸಲು ತುಳಸಿಯನ್ನು ಈ ರೀತಿ ಬಳಸಿ
ತುಳಸಿ ಎಲೆಗಳು - ಅಸಿಡಿಟಿ ಸಮಸ್ಯೆ ಇರುವುವರು ತುಳಸಿ ಎಲೆಗಳನ್ನು ಸೇವಿಸಬಹುದು. ನೀವು 5 ತುಳಸಿ ಎಲೆಗಳನ್ನು ಸೇವಿಸಿ ನೀರು ಕುಡಿಯಬೇಕು. ನೀವು ತುಳಸಿ ಎಲೆಗಳನ್ನು ಜಗಿದು ಕೂಡ ತಿನ್ನಬೇಕು. ಅಸಿಡಿಟಿ ಸಮಸ್ಯೆ ಇದ್ದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಸೇವಿಸಿದರೆ ಹೆಚ್ಚು ಪ್ರಯೋಜನಕಾರಿ ಸಾಬೀತಾಗುತ್ತದೆ.

ತುಳಸಿ ಕಷಾಯ - ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಲು ತುಳಸಿಯಿಂದ ತಯಾರಿಸಿದ ಕಷಾಯವನ್ನು ಕೂಡ ನೀವು ಸೇವಿಸಬಹುದು. ಇನ್ನೊಂದೆಡೆ, ತುಳಸಿಯ ಕಷಾಯ ಹೊಟ್ಟೆಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ತುಳಸಿ ಕಷಾಯವನ್ನು ತಯಾರಿಸಲು ಅಜ್ವಾಯಿನ್, ಲವಂಗ ಮತ್ತು ತುಳಸಿ ಎಲೆಗಳನ್ನು ಪುಡಿಮಾಡಿ ಬಿಸಿನೀರಿನಲ್ಲಿ ಹಾಕಿ ಕುದಿಯಲು ಬಿಡಿ. ಈಗ ಅದು ಗಟ್ಟಿಯಾದ ನಂತರ, ಮಿಶ್ರಣವನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.

ತುಳಸಿ ಚೂರ್ಣ - ಅಸಿಡಿಟಿ ಸಮಸ್ಯೆ ನಿವಾರಣೆಗೆ ನೀವು ತುಳಸಿ ಚೂರ್ಣವನ್ನು ಕೂಡ ಸೇವಿಸಬಹುದು. ಇದಕ್ಕಾಗಿ ನೀವು 1 ರಿಂದ 3 ಗ್ರಾಂ ತುಳಸಿ ಚೂರ್ಣವನ್ನು ಕೂಡ ಸೇವಿಸಬಹುದು. ತುಳಸಿ ಬೀಜಗಳು ಹಾಗೂ ಒಣ ಎಲೆಗಳ ಜೊತೆಗೆ ಅಜ್ವಾಯಿನ್, ಸೌಂಪ್ಹ್ ಹಾಗೂ ಲವಂಗವನ್ನು ಬೆರೆಸಿ ಚೂರ್ಣ ತಯಾರಿಸಿ ಅದನ್ನು ಸೇವಿಸಬಹುದು.  

ಇದನ್ನೂ ಓದಿ-ಕೇವಲ ಮದ್ಯ ಮಾತ್ರವಲ್ಲ ಈ ವಸ್ತುಗಳ ಸೇವನೆಯಿಂದಲೂ ಕಿಡ್ನಿ ವೈಫಲ್ಯವಾಗುತ್ತದೆ

ತುಳಸಿ ನೀರು -  ಅಸಿಡಿಟಿ ಇರುವ ಸಂದರ್ಭದಲ್ಲಿ ನೀವು ತುಳಸಿ ನೀರನ್ನು ಕೂಡ ಸೇವಿಸಬಹುದು. ಅನೇಕ ಜನರು ತುಳಸಿ ಎಲೆಗಳನ್ನು ಅಗೆಯುವಾಗ ಕಹಿಯನ್ನು ಅನುಭವಿಸುತ್ತಾರೆ, ಆದ್ದರಿಂದ ನೀವು ತುಳಸಿಯನ್ನು ನೀರಿನೊಂದಿಗೂ ಕೂಡಸೇವಿಸಬಹುದು. ಇದಕ್ಕಾಗಿ, ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ, ನಂತರ ನೀರನ್ನು ಫಿಲ್ಟರ್ ಮಾಡಿ ಸೇವಿಸಬಹುದು.

ಇದನ್ನೂ ಓದಿ-ಅಧಿಕ ರಕ್ತದೊತ್ತಡ ಇರುವವರು ಈ ಆಹಾರಗಳನ್ನು ಸೇವಿಸಬಾರದು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News