Badam For Health: ದಿನ ಬೆಳಿಗ್ಗೆ ನೆನೆಸಿದ 5 ಬಾದಾಮಿ ಸೇವಿಸಿ; ಇದರಿಂದ ಮೆದುಳು ಚುರುಕಾಗುತ್ತದೆ!

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬಾದಾಮಿ

Last Updated : Apr 25, 2021, 03:03 PM IST
  • ಬಾದಾಮಿಯನ್ನ ರಾತ್ರಿ ನೀರಿನಲ್ಲಿ ನೆನಸಿ ಬೆಳಿಗ್ಗೆ ಉಪಾಹಾರದಲ್ಲಿ ಸೇವಿಸಿದರೆ ದೇಹಕ್ಕೆ ತುಂಬಾ ಪ್ರಯೋಜನ
  • ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬಾದಾಮಿ
  • ಚರ್ಮ ಹೊಳಪಿಗೆ ಪ್ರಯೋಜನಕಾರಿ ಬಾದಾಮಿ
Badam For Health: ದಿನ ಬೆಳಿಗ್ಗೆ ನೆನೆಸಿದ 5 ಬಾದಾಮಿ ಸೇವಿಸಿ; ಇದರಿಂದ ಮೆದುಳು ಚುರುಕಾಗುತ್ತದೆ! title=

ಆರೋಗ್ಯವಾಗಿರಲು ಜನ ಪ್ರತಿದಿನ ಬೆಳಿಗ್ಗೆ ಏನು ತಿನ್ನಬೇಕು ಎಂದು ಯೋಚಿಸುತ್ತಾರೆ. ಅಲ್ಲದೆ ಮಕ್ಕಳಿಂದ ಹಿಡಿದು ಹಿರಿಯರು ಕೂಡ ನೆನಪಿನ ಶಕ್ತಿಗಾಗಿ ಏನೆಲ್ಲಾ ಔಷಧಿಗಳನ್ನೂ ಪ್ರಯತ್ನಿಸಿಯುತ್ತಾರೆ. ಇದಕ್ಕೆಲ್ಲ ಮನೆಯಲ್ಲಿಯೇ ಔಷಧಿಗಳಿವೆ. ಬಾದಾಮಿಯನ್ನ ರಾತ್ರಿ ನೀರಿನಲ್ಲಿ ನೆನಸಿ  ಬೆಳಿಗ್ಗೆ ಉಪಾಹಾರದಲ್ಲಿ ಸೇವಿಸಿದರೆ ದೇಹಕ್ಕೆ ತುಂಬಾ ಪ್ರಯೋಜನಗಳಿವೆ. ಈ ಕುರಿತು ಕೆಳೆಗೆ ಓದಿ..

ಜೀರ್ಣ ಶಕ್ತಿ ಹೆಚ್ಚಿಸಲು ಬಾದಾಮಿ: ಬಾದಾಮಿ ಜೀರ್ಣಿಸಿಕೊಳ್ಳುವುದು ಸುಲಭವಲ್ಲ. ಆದರೆ ನೆನೆಸಿದ ಬಾದಾಮಿ(Almonds) ಸುಲಭವಾಗಿ ಜೀರ್ಣವಾಗುತ್ತದೆ. ಇದಲ್ಲದೆ, ಇದು ಅಂತಹ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸದೃಢವಾಗಿಸುತ್ತದೆ.

ಇದನ್ನೂ ಓದಿ : ಕರೋನಾ ಕಾಲದಲ್ಲಿ ಸೇಫ್ ಸಂಸಾರಕ್ಕೆ ಇಪ್ಪತ್ತು ಸೂತ್ರಗಳು..!

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಬಾದಾಮಿ: ನೆನೆಸಿದ ಬಾದಾಮಿಯಲ್ಲಿ ಫೈಬರ್, ಪ್ರೋಟೀನ್, ವಿಟಮಿನ್ ಇ ಮತ್ತು ಮೆಗ್ನೀಸಿಯಮ್ ಅಂಶಗಳಿ ಕಂಡು ಬರುತ್ತದೆ. ಪ್ರತಿ ದಿನ ಇದರ ಸೇವನೆಯಿಂದ ದೇಹದಲ್ಲಿ ರೋಗನಿರೋಧ(Immunity)ಕ ಶಕ್ತಿ ಹೆಚ್ಚಾಗುತ್ತದೆ. ಕರೋನಾ ಅವಧಿಯಲ್ಲಿ ಇದನ್ನು ಸೇವಿಸುವುದರಿಂದ ಇದು ನಿಮಗೆ ತುಂಬಾ ಸಹಾಯ ಮಾಡುತ್ತದೆ.

ಇದನ್ನೂ ಓದಿ : ಕರೋನಾ ಕಾಲದಲ್ಲಿ ದೇಸಿ ತುಪ್ಪ ಯಾಕೆ ತಿನ್ನಬೇಕು.? ಇಲ್ಲಿದೆ ಉತ್ತರ

ಹೃದ್ರೋಗಗಳಿಗೆ ಪ್ರಯೋಜನಕಾರಿ ಬಾದಾಮಿ: ನೆನೆಸಿದ ಬಾದಾಮಿ  ಹೃದ್ರೋಗಗಳಿಗೆ(Heart Problem) ತುಂಬಾ ಪ್ರಯೋಜನಕಾರಿಯಾಗಿದೆ. ಇದು ದೇಹದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ನೆನೆಸಿದ ಬಾದಾಮಿ ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ : Health Tips: ರಾತ್ರಿ ಮಲಗುವ ಮುನ್ನ ಹಾಲಿನಲ್ಲಿ 5 ಮಖಾನಾ ಸೇವಿಸಿ

ಚರ್ಮ ಹೊಳಪಿಗೆ ಪ್ರಯೋಜನಕಾರಿ ಬಾದಾಮಿ : ನೆನಸಿದ ಬಾದಾಮಿಯಲ್ಲಿ ಕಂಡುಬರುವ ವಿಟಮಿನ್ ಇ ಚರ್ಮ(Skin) ಮತ್ತು ಕೂದಲು ಎರಡಕ್ಕೂ ಬಹಳ ಪ್ರಯೋಜನಕಾರಿ. ಇದಲ್ಲದೆ ಕೂದಲಿಗೆ ಬಾದಾಮಿ ಎಣ್ಣೆಯನ್ನು ಸಹ ಬಳಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News