ಚಿಯಾ ಬೀಜಗಳು ಕಪ್ಪು ಬಣ್ಣದಾಗಿದ್ದು, ನೋಡಲು ಬಹಳ ಚಿಕ್ಕದಾಗಿರುತ್ತೆ. ಇದು ಹೇಗೆ ಅಂದ್ರೆ ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅಂತಾರಲ್ಲ ಹಾಗೆ. ಈ ಬೀಜಗಳು ಪೋಷಕಾಂಶಗಳಿಂದ ತುಂಬಿದ್ದರಿಂದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿವೆ ಎಂದು ಪರಿಗಣಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಈ ಬೀಜಗಳನ್ನ 'ಆಳವಿ' ಎಂದು ಕರೆಯುತ್ತಾರೆ. ಮಹಿಳೆ ಹೆರಿಗೆ ಆದ ಸಂಧರ್ಭದಲ್ಲಿ ಇವುಗಳನ್ನ ನೀರಿನಲ್ಲಿ ಕುಡುಸಿ ಅದಕ್ಕೆ ತುಪ್ಪ ಹಾಕಿ ಕುಡಿಸುತ್ತಾರೆ. ಇದರಿಂದ ಮಹಿಳೆ ಬೇಗೆ ಚೇತರಿಕೊಳ್ಳಲು ತುಂಬಾ ಸಹಾಯವಾಗುತ್ತೆದೆ.
ಕೇವಲ 2 ಟೀ ಚಮಚ ಚಿಯಾ ಬೀಜಗಳು(Chia Seeds) (30 ಗ್ರಾಂ) 10 ಗ್ರಾಂ ಫೈಬರ್, 5 ಗ್ರಾಂ ಪ್ರೋಟೀನ್ ಮತ್ತು 138 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಪ್ರೋಟೀನ್ ಭರಿತ ಚಿಯಾ ಬೀಜಗಳು ಮೂಳೆಗಳನ್ನು ಬಲವಾಗಿರಿಸಲು, ಹೃದಯಾ ರೋಗದಿಂದ ರಕ್ಷಿಸಲು ಮತ್ತು ದೇಹ ತೂಕ ಇಳಿಸಿಲು ಕೂಡ ಸಹಾಯ ಮಾಡುತ್ತದೆ. ಆದರೆ, ನೀವು ಇವುಗಳನ್ನ ಹಾಲಿನಲ್ಲಿ ನೆನೆಸಿದ ಸೇವಿಸಿದರೆ, ದೇಹಕ್ಕೆ ಮತ್ತೆ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.
ಇದನ್ನೂ ಓದಿ : Ginger Water For Glowing Skin:ಹೊಳೆಯುವ ಚರ್ಮಕ್ಕಾಗಿ ನಿತ್ಯ ಬಳಸಿ ಶುಂಠಿ ನೀರು
ಹಾಲಿನಲ್ಲಿ ನೆನೆಸಿದ ಚಿಯಾ ಬೀಜಗಳನ್ನು ತಿನ್ನುವುದರ ಪ್ರಯೋಜನಗಳು:
1. ಹಾಲು ಮತ್ತು ಚಿಯಾ ಬೀಜಗಳು ಎರಡೂ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಹೊಂದಿರುತ್ತವೆ ಚಿಯಾದಲ್ಲಿ ಪ್ರೋಟೀನ್ ಕೂಡ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತದೆ. ಆದ್ದರಿಂದ ವಯಸ್ಸಾದ ಮೇಲೆ ನಿಮ್ಮ ಮೂಳೆಗಳು(Strong Bones) ದುರ್ಬಲವಾಗಬಾರದು ಎಂದು ನೀವು ಬಯಸಿದರೆ, ಇಂದಿನಿಂದ ಹಾಲಿನಲ್ಲಿ ನೆನೆಸಿದ ಚಿಯಾ ಬೀಜಗಳನ್ನು ತಿನ್ನಲು ಪ್ರಾರಂಭಿಸಿ.
ಇದನ್ನೂ ಓದಿ : Benefits of Flaxseeds: ಪ್ರತಿದಿನ 1 ಚಮಚ 'ಅಗಸೆಬೀಜ ಸೇವಿಸಿದ್ರೆ ದೇಹಕ್ಕೆ ಎಷ್ಟು ಲಾಭಗಳು ಗೊತ್ತಾ?
2. ಚಿಯಾ ಬೀಜದಲ್ಲಿ ಹೆಚ್ಚಿನ ಫೈಬರ್ ಅಂಶವಿದೆ ಮತ್ತು ಇದು ಪ್ರೋಟೀನ್(Protein) ತುಂಬಿದ ಅತ್ಯುತ್ತಮ ಆಹಾರವಾಗಿದೆ. ಆದ್ದರಿಂದ ಹಾಲಿನೊಂದಿಗೆ ಚಿಯಾ ಬೀಜಗಳನ್ನು ಸೇವಿಸುವುದರಿಂದ ವೇಗವಾಗಿ ತೂಕ ಇಳಿಸಿಕೊಳ್ಳುವುದು. ಇದಕ್ಕೆ ಕಾರಣವೆಂದರೆ ಅದನ್ನು ಸೇವಿಸಿದ ನಂತರ ನಿಮ್ಮ ಹೊಟ್ಟೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ, ಅದೇ ವೇಗದಲ್ಲಿ ಹಸಿವಾಗುತ್ತದೆ.
ಇದನ್ನೂ ಓದಿ : Watermelon Peel Benefits: ಕಲ್ಲಂಗಡಿ ಸಿಪ್ಪೆಯ ಪ್ರಯೋಜನಗಳ ಬಗ್ಗೆ ತಿಳಿದಿದೆಯೇ?
3. ರಕ್ತಹೀನತೆ(Anemia) ಸಮಸ್ಯೆಯಿಂದ ಬಳಲುತ್ತಿರುವವರು ಚಿಯಾ ಬೀಜಗಳನ್ನ ಹಾಲಿನಲ್ಲಿ ನೆನಸಿ ಸೇವಿಸಬೇಕು. ಚಿಯಾ ಬೀಜಗಳಲ್ಲಿ ಕಬ್ಬಿಣ ಅಂಶವು ಹೆಚ್ಚಾಗಿದೆ. ಆದ್ದರಿಂದ ಹಾಲು ಮತ್ತು ಚಿಯಾ ಬೀಜಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತಹೀನತೆ ಸಮಸ್ಯೆಗೆ ಬೇಗೆ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ : World Health Day 2021: ಈ 5 ಸರಳ ಅಭ್ಯಾಸಗಳು ನಿಮ್ಮ ದೇಹದ ಜೊತೆಗೆ ಮನಸ್ಸನ್ನೂ ಸದೃಢವಾಗಿರಿಸುತ್ತೆ
4. ಚಿಯಾ ಬೀಜಗಳನ್ನು ಹಾಲಿನಲ್ಲಿ ನೆನೆಸುವ ಸೇವಿಸುವುದರಿಂದ ಜೀರ್ಣಕ್ರಿಯೆ(Digestion) ಸಮಸ್ಯೆ ಕೂಡ ದೂರ ಮಾಡಬಹುದು. ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ದೇಹಕ್ಕೆ ಫೈಬರ್ ಅಗತ್ಯವಿರುತ್ತದೆ. ಚಿಯಾ ಬೀಜಗಳಲ್ಲಿ ಸಾಕಷ್ಟು ಫೈಬರ್ ಅಂಶ ಇರುವುದರಿಂದ ಈ ಸಮಾಗಳಿಂದ ಬಳಲುವವರು ಸೇವಿಸುವುದು ಬಹಳ ಉತ್ತಮ.
ಇದನ್ನೂ ಓದಿ : Nail Biting Habit: ಉಗುರು ಕಚ್ಚುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ, ಆರೋಗ್ಯದ ಮೇಲೆ ಬೀಳಲಿದೆ ಭಾರೀ ಪರಿಣಾಮ
ಅದನ್ನು ಹೇಗೆ ಮಾಡುವುದು: ಒಂದು ಅಥವಾ ಎರಡು ಚಮಚ ಚಿಯಾ ಬೀಜಗಳನ್ನು 1 ಲೋಟ ಹಾಲಿಗೆ(Milk) ಹಾಕಿ ರಾತ್ರಿಯಿಡೀ ನೆನಸಿ. ಬೆಳಿಗ್ಗೆ ಉಪಾಹಾರಕ್ಕಾಗಿ ಇದನ್ನು ಕುಡಿಯಿರಿ. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಪಾನೀಯವಾಗಿದೆ.
(ಗಮನಿಸಿ: ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು ಯಾವಾಗಲೂ ತಜ್ಞರು ಅಥವಾ ವೈದ್ಯರನ್ನು ಸಂಪರ್ಕಿಸಿ. Zee Hindustan Kannada ಈ ಮಾಹಿತಿಗೆ ಜವಾಬ್ದಾರರಲ್ಲ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.