ಬೆಂಗಳೂರು : ಹಸಿರು ಚಹಾವನ್ನು ಆರೋಗ್ಯಕರ ಪಾನೀಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಈ ಪಾನೀಯವನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನಮ್ಮಲ್ಲಿ ಹೆಚ್ಚಿನವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯಲು ಇಷ್ಟಪಡುತ್ತಾರೆ ಅದು ನಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆರೋಗ್ಯಕರ ಪಾನೀಯದೊಂದಿಗೆ ದಿನವನ್ನು ಪ್ರಾರಂಭಿಸಿದರೆ,ದೇಹವು ಅನೇಕ ಪ್ರಯೋಜನಗಳನ್ನು ಪಡೆಯಬಹುದು.ಬೆಳಿಗ್ಗೆ ಗ್ರೀನ್ ಟೀ ಸೇವಿಸುವುದು ತುಂಬಾ ಒಳ್ಳೆಯದು. ಗ್ರೀನ್ ಟೀಯಲ್ಲಿ ಕೆಲವು ವಸ್ತುಗಳನ್ನು ಬೆರೆಸಿ ಕುಡಿದಾಗ,ಅದರ ಆರೋಗ್ಯಕರ ಗುಣ ಮತ್ತಷ್ಟು ಹೆಚ್ಚಾಗುತ್ತದೆ.
ಗ್ರೀನ್ ಟೀಯೊಂದಿಗೆ ಏನು ಮಿಶ್ರಣ ಮಾಡಬೇಕು? :
ಗ್ರೀನ್ ಟೀಗೆ ನಿಂಬೆ ಬೆರೆಸಿ ಸೇವಿಸಿದರೆ ಅದು ತೂಕವನ್ನು ಕಡಿಮೆ ಮಾಡುವುದು ಸೇರಿದಂತೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ.
1. ಬೊಜ್ಜು ನಿವಾರಣೆ :
ಗ್ರೀನ ಟೀ ಮತ್ತು ನಿಂಬೆಯ ಸಂಯೋಜನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ.ಇದು ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ. ಸಣ್ಗಗಬೇಕು ಎಂದು ಪ್ರಯತ್ನಿಸುವವರು ಗ್ರೀನ್ ಟೀಗೆ ನಿಂಬೆ ರಸ ಬೆರೆಸಿ ಸೇವಿಸಬೇಕು.
ಇದನ್ನೂ ಓದಿ : ಮಧುಮೇಹದಿಂದ ತೂಕ ಇಳಿಕೆವರೆಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ
2. ಜೀರ್ಣಕ್ರಿಯೆ:
ನಿಂಬೆ ವಿಟಮಿನ್ ಸಿ ಮತ್ತು ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತದೆ.ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
3. ರೋಗನಿರೋಧಕ ಶಕ್ತಿ:
ನಿಂಬೆಯೊಂದಿಗೆ ಗ್ರೀನ್ ಟೀ ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಬಹುದು. ನಿಂಬೆ ವಿಟಮಿನ್ ಸಿ ಯ ಉತ್ತಮ ಮೂಲವಾಗಿದೆ. ಇಮ್ಯುನಿಟಿ ಬೂಸ್ಟ್ ಮಾಡಲು ನಿಂಬೆ ಬಹಳ ಪ್ರಯೋಜನಕಾರಿ.
4. ಚರ್ಮ :
ಗ್ರೀನ್ ಟೀ ಮತ್ತು ನಿಂಬೆಯ ಸಂಯೋಜನೆಯು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.ಇದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : Diabetes: ಯಾವ ಔಷಧಿಯೂ ಬೇಡ.. ಮಜ್ಜಿಗೆಗೆ ಈ ಪುಡಿ ಬೆರಸಿ ಕುಡಿಯಿರಿ ಸಾಕು! ಬ್ಲಡ್ ಶುಗರ್ ಕಂಟ್ರೋಲ್ನಲ್ಲಿರುತ್ತದೆ
5. ಹೃದಯದ ಆರೋಗ್ಯ :
ಗ್ರೀನ್ ಟೀ ಫ್ಲೇವನಾಯ್ಡ್ಗಳನ್ನು ಹೊಂದಿರುತ್ತದೆ. ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.ನಿಂಬೆಯೊಂದಿಗೆ ಇದನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.
(ಸೂಚನೆ :ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ.ZEE KANNADA NEWS ಈ ಮಾಹಿತಿಯ ಜವಾಬ್ದಾರಿಯನ್ನು ಪಡೆದುಕೊಳ್ಳುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.