ಈ ಹಣ್ಣುಗಳು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಲು ಇಡುವುದೇ ಇಲ್ಲ !ಮಧುಮೇಹಿಗಳು ತಿನ್ನುವ ಮುನ್ನ ಎಚ್ಚರ

Worst Fruits For Diabetes: ಕೆಲವೊಂದು ಆಹಾರವನ್ನು ಮಧುಮೇಹಿಗಳು ಸೇವಿಸಿದರೆ ಹಾನಿಕಾರಕವಾಗಿ ಪರಿಣಮಿಸಬಹುದು. ಹೌದು ಅಂತೆಯೇ ಕೆಲವೊಂದು ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಲೇ  ಬಾರದು.   

Written by - Ranjitha R K | Last Updated : Jul 15, 2024, 05:03 PM IST
  • ಮಧುಮೇಹವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗುತ್ತದೆ.
  • ಸಕ್ಕರೆಯ ಮಟ್ಟ ಹೆಚ್ಚಾದಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
  • ಮಧುಮೇಹಿಗಳು ಈ ಹಣ್ಣುಗಳಿಂದ ದೂರವಿರಬೇಕು
ಈ ಹಣ್ಣುಗಳು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಲು ಇಡುವುದೇ ಇಲ್ಲ !ಮಧುಮೇಹಿಗಳು ತಿನ್ನುವ ಮುನ್ನ ಎಚ್ಚರ  title=

Worst Fruits For Diabetes : ಮಧುಮೇಹವಿದ್ದಾಗ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗದಂತೆ ನೋಡಿಕೊಳ್ಳಬೇಕಾಗುತ್ತದೆ.ಯಾಕೆಂದರೆ ಸಕ್ಕರೆಯ ಮಟ್ಟ ಹೆಚ್ಚಾದಾಗ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ರಕ್ತದಲ್ಲಿನ ಸಕ್ಕರೆಯ ಮಟ್ಟ ದೀರ್ಘಕಾಲದವರೆಗೆ ಹೈ ಆಗಿದ್ದರೆ ದೇಹದ ಆಂತರಿಕ ಅಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ.ನರಮಂಡಲ,ಹೃದಯ,ಯಕೃತ್ತು ಮತ್ತು ಮೂತ್ರಪಿಂಡಗಳಂತಹ ಅಂಗಗಳಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳು  ಹೈ ಬ್ಲಡ್ ಶುಗರ್ ಇದ್ದಾಗ ಕಂಡು ಬರುತ್ತದೆ. 

ಮಧುಮೇಹಿಗಳು ಈ ಹಣ್ಣುಗಳಿಂದ ದೂರವಿರಬೇಕು : 
ರಕ್ತದಲ್ಲಿನ ಗ್ಲೂಕೋಸ್ ಅಥವಾ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು  ಜನರು ಮೊದಲು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವತ್ತ ಗಮನ ಹರಿಸಬೇಕು.ಕೆಲವೊಂದು ಆಹಾರವನ್ನು ಮಧುಮೇಹಿಗಳು ಸೇವಿಸಿದರೆ ಹಾನಿಕಾರಕವಾಗಿ ಪರಿಣಮಿಸಬಹುದು.ಹೌದು,ಅಂತೆಯೇ ಕೆಲವೊಂದು ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಲೇ  ಬಾರದು. 

ಇದನ್ನೂ ಓದಿ : ತುಳಸಿಯ ಈ ಆರೋಗ್ಯ ಪ್ರಯೋಜನಗಳ ಬಗ್ಗೆ ನಿಜಕ್ಕೂ ಆಶ್ಚರ್ಯಪಡ್ತೀರಾ!

ದ್ರಾಕ್ಷಿ : 
ದ್ರಾಕ್ಷಿ ಹಣ್ಣುಗಳು ತಿನ್ನಲು ಬಹಳ ರುಚಿಕರವಾಗಿರುತ್ತದೆ.ಈ ಮಾಧುರ್ಯವು ರಕ್ತದಲ್ಲಿ ಕರಗುತ್ತದೆ.ಇದು ಸಕ್ಕರೆ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು.

ಅನಾನಸ್ : 
ರುಚಿ ಮತ್ತು ಪೌಷ್ಟಿಕಾಂಶದಿಂದ ಸಮೃದ್ಧವಾಗಿರುವ ಅನಾನಸ್ ಹಣ್ಣು ಮಧುಮೇಹದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.ಈ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆ ನಿಮ್ಮ ಗ್ಲೂಕೋಸ್ ಮಟ್ಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.  

ಮಾವು : 
ಮಾವು ಸಿಹಿ ಮತ್ತು ರಸಭರಿತವಾದ ಹಣ್ಣು. ಮಾವಿನ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ.ಹಣ್ಣಾದ ಮಾವು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ.ಹೆಚ್ಚಿನ GI ಮಟ್ಟವನ್ನು ಹೊಂದಿರುವ ಆಹಾರವನ್ನು ತಿನ್ನುವುದು ಸಕ್ಕರೆಯ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು.

ಇದನ್ನೂ ಓದಿ : ಮಾಂಸಾಹಾರಿ ಆಹಾರಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ವಿಶ್ವದ ಏಕೈಕ ನಗರದ ಬಗ್ಗೆ ನಿಮಗೆಷ್ಟು ಗೊತ್ತು?

ಕಲ್ಲಂಗಡಿ : 
ಬೇಸಿಗೆಯಲ್ಲಿ ಜನರು ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ತಿನ್ನುತ್ತಾರೆ.ಇದು ಕೂಡ ರಸಭರಿತ,ಸಿಹಿ ಹಣ್ಣು. ಆದರೆ,ಕಲ್ಲಂಗಡಿ ತಿನ್ನುವುದು ಮಧುಮೇಹದಲ್ಲಿ ಹಾನಿಕಾರಕವಾಗಿರುತ್ತದೆ.ಇದನ್ನು ತಿನ್ನುವುದರಿಂದ ಸಕ್ಕರೆಯ ಪ್ರಮಾಣವು ಹೆಚ್ಚಾಗುತ್ತದೆ. 

ಬಾಳೆ ಹಣ್ಣು :
ಬಾಳೆಹಣ್ಣಿನ ಸೇವನೆಯು ದೌರ್ಬಲ್ಯವನ್ನು ತೊಡೆದುಹಾಕಲು ಮತ್ತು ಹಸಿವನ್ನು ತಕ್ಷಣವೇ ಪೂರೈಸಲು ಬಹಳ ಪ್ರಯೋಜನಕಾರಿ.ಆದರೆ ಮಧುಮೇಹ ರೋಗಿಗಳು ಬಾಳೆಹಣ್ಣಿನಿಂದ ದೂರವಿರಬೇಕು.ಮಾಗಿದ ಬಾಳೆಹಣ್ಣು ಹೆಚ್ಚು ಸಿಹಿಯಾಗಿರುತ್ತದೆ.ಇದು ಹೆಚ್ಚಿನ ಪ್ರಮಾಣದ ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು, ಮಧುಮೇಹ ರೋಗಿಗಳ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸಬಹುದು.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.   

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News