ಈ ಮೂರು ಕೆಲಸ ಮಾಡಿದರೆ ಶುಗರ್ ನಿಯಂತ್ರಣದಲ್ಲಿರುತ್ತದೆ ..!

ನಾವು ಹೇಳಲು ಹೊರಟಿರುವ ಈ ವಿಧಾನಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ತಮ್ಮ ಬ್ಯುಸಿ ಜೀವನಶೈಲಿಯ ಕಾರಣ ಅದನ್ನು  ಅಳವಡಿಸಿಕೊಳ್ಳುವಲ್ಲಿ ಜನ ಉದಾಸೀನ ತೋರಿಸುತ್ತಾರೆ.  

Written by - Ranjitha R K | Last Updated : Jun 29, 2022, 12:49 PM IST
  • ಮಧುಮೇಹ ರೋಗಿಗಳಿಗೆ ಅತ್ಯಂತ ಸರಳವಾದ ಸಲಹೆಗಳು ಇಲ್ಲಿವೆ.
  • ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಿ
  • ದೈಹಿಕವಾಗಿ ಸಕ್ರಿಯರಾಗಿರಿ
ಈ ಮೂರು ಕೆಲಸ ಮಾಡಿದರೆ ಶುಗರ್ ನಿಯಂತ್ರಣದಲ್ಲಿರುತ್ತದೆ ..! title=
Diabetes Control Tips (file photo)

Diabetes Control Tips : ಮಧುಮೇಹ ರೋಗಿಗಳಿಗೆ ಅತ್ಯಂತ ಸರಳವಾದ ಸಲಹೆಗಳು ಇಲ್ಲಿವೆ. ಇದನ್ನು ಅಳವಡಿಸಿಕೊಳ್ಳುವ ಮೂಲಕ ಫಿಟ್ ಆಗಿರಬಹುದು ಮಾತ್ರವಲ್ಲ ರಕ್ತದಲ್ಲಿನ ಸಕ್ಕರೆ ಕೂಡಾ ನಿಯಂತ್ರಣದಲ್ಲಿರುತ್ತದೆ. ನಾವು ಹೇಳಲು ಹೊರಟಿರುವ ಈ ವಿಧಾನಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ. ಆದರೆ ತಮ್ಮ ಬ್ಯುಸಿ ಜೀವನಶೈಲಿಯ ಕಾರಣ ಅದನ್ನು ಅಳವಡಿಸಿಕೊಳ್ಳುವಲ್ಲಿ ಜನ ಉದಾಸೀನ ತೋರಿಸುತ್ತಾರೆ.  

1. ಹೆಚ್ಚುವರಿ ಕೊಬ್ಬನ್ನು ಕಳೆದುಕೊಳ್ಳಿ :
ಮನುಷ್ಯನಿಗೆ ಬರುವ ಹೆಚ್ಚಿನ ಕಾಯಿಲೆಗಳು ಅತಿಯಾದ ಕೊಬ್ಬಿನಿಂದ ಬರುತ್ತವೆ. ತೂಕ ಹೆಚ್ಚುತ್ತಿದ್ದರೆ, ಅಥವಾ ಈಗಾಗಲೇ ಹೆಚ್ಚಿದ್ದರೆ ಮೊದಲು ಅದನ್ನು ನಿಯಂತ್ರಿಸಿಕೊಳ್ಳಿ. ಏಕೆಂದರೆ ಈ ಕಾರಣದಿಂದಾಗಿ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಸಮಸ್ಯೆ ಎದುರಾಗುತ್ತದೆ. ಇದಲ್ಲದೆ, ಇನ್ನೂ  ಅನೇಕ ಪ್ರಮುಖ ಕಾಯಿಲೆಗಳ ಅಪಾಯ ಎದುರಾಗಬಹುದು. 

ಇದನ್ನೂ ಓದಿ : Tea: ಚಹಾ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ? ಇದರ ಹಿಂದಿನ ನಿಜಾಂಶ ಏನು?

2. ದೈಹಿಕವಾಗಿ ಸಕ್ರಿಯರಾಗಿರಿ :
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ದೈಹಿಕವಾಗಿ ಸಕ್ರಿಯವಾಗಿರುವುದು ಬಹಳ ಮುಖ್ಯ. ನೀವು ಸಕ್ರಿಯವಾಗಿಲ್ಲದಿದ್ದರೆ ರೋಗಗಳು ನಿಮ್ಮನ್ನು ಸುತ್ತುವರೆಯುತ್ತವೆ. ಕ್ರಮೇಣ ನೀವು ಅನೇಕ ಪ್ರಮುಖ ಕಾಯಿಲೆಗಳಿಗೆ ಬಲಿಯಾಗುತ್ತೀರಿ. ಹೆಚ್ಚಿನ ಜನರು ಮಧುಮೇಹಕ್ಕೆ ಬಲಿಯಾಗಲು ಇದೇ ಕಾರಣ.

3. ಆರೋಗ್ಯಕರ ವಸ್ತುಗಳನ್ನು ತಿನ್ನಿರಿ :
ಸದಾ ಫಿಟ್ ಆಗಿರಲು ಆರೋಗ್ಯಕರ ವಸ್ತುಗಳನ್ನೇ ಸೇವಿಸಬೇಕು. ಹೈ ಬ್ಲಡ್ ಶುಗರ್ ರೋಗಿಗಳಂತೂ, ಈ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ದಿನೇ ದಿನೇ ಸಮಸ್ಯೆಗಳು ಹೆಚ್ಚಾಗಬಹುದು. ಹಾಗಾಗಿ ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಿ. ಅಲ್ಲದೆ, ಪ್ರೋಟೀನ್-ಭರಿತ ವಸ್ತುಗಳನ್ನು ತಿನ್ನಿರಿ. ಅದು ನಿಮಗೆ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ : Lung Cancer: ದೇಹದಲ್ಲಿ ಈ ಬದಲಾವಣೆಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ

 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.) 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News