ಚಳಿಗಾಲದಲ್ಲಿ ಮುದ್ದು ಮಗುವಿನ ಆರೈಕೆ ಮಾಡಲು 7 ಟಿಪ್ಸ್‌..! ತಪ್ಪದೆ ನೋಡಿ

ಚಳಿಗಾಲ ಬಂದ್ರೆ ಸಾಕು ಮಕ್ಕಳಿಗೆ ಶೀತ, ಕೆಮ್ಮು, ನ್ಯುಮೋನಿಯಾ, ಅಸ್ತಮಾ, ಉಸಿರಾಟದ ತೊಂದರೆ, ಜ್ವರ, ಕಿವಿ ಸೋಂಕು ಮತ್ತು ಹೊಟ್ಟೆ ನೋವುಗಳು ಸೇರಿದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ತಂದೆ ತಾಯಂದಿರೂ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸಹ ಮಕ್ಕಳಿಗೆ ಮೂಗು ಸೋರದೆ ಇರುದು. ಅಲ್ಲದೆ, ಅನಾರೋಗ್ಯಕ್ಕೀಡಾದ ಮಕ್ಕಳು ವೈದ್ಯರು ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ಮಗು ಅನುಸರಿಸುತ್ತಿದ್ದಾರೋ ಇಲ್ಲವೋ ಅನ್ನೋದನ್ನ ನೋಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿರುತ್ತದೆ. ಅದಕ್ಕೆ ಮಗುವನ್ನ ಯಾವ ರೀತಿ ನೋಡಿಕೊಳ್ಳಬೇಕು ಎನ್ನುವ ಸಲಹೆಗಳು ಇಲ್ಲಿವೆ ನೋಡಿ.

Written by - Krishna N K | Last Updated : Dec 20, 2022, 05:30 PM IST
  • ಚಳಿಗಾಲ ಬಂದ್ರೆ ಸಾಕು ಮಕ್ಕಳಿಗೆ ಶೀತ, ಕೆಮ್ಮು ಸೇರಿದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ.
  • ತಾಯಂದಿರೂ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸಹ ಮಕ್ಕಳಿಗೆ ಮೂಗು ಸೋರದೆ ಇರುದು.
  • ಚಳಿಗಾಲದಲ್ಲಿ ವಿವಿಧ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು, ಈ 7 ವಿಷಯಗಳನ್ನು ಗಮನಿಸಬಹುದು.
ಚಳಿಗಾಲದಲ್ಲಿ ಮುದ್ದು ಮಗುವಿನ ಆರೈಕೆ ಮಾಡಲು 7 ಟಿಪ್ಸ್‌..! ತಪ್ಪದೆ ನೋಡಿ title=

Tips To Protect Kids During Winter : ಚಳಿಗಾಲ ಬಂದ್ರೆ ಸಾಕು ಮಕ್ಕಳಿಗೆ ಶೀತ, ಕೆಮ್ಮು, ನ್ಯುಮೋನಿಯಾ, ಅಸ್ತಮಾ, ಉಸಿರಾಟದ ತೊಂದರೆ, ಜ್ವರ, ಕಿವಿ ಸೋಂಕು ಮತ್ತು ಹೊಟ್ಟೆ ನೋವುಗಳು ಸೇರಿದಂತೆ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ. ತಂದೆ ತಾಯಂದಿರೂ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಸಹ ಮಕ್ಕಳಿಗೆ ಮೂಗು ಸೋರದೆ ಇರುದು. ಅಲ್ಲದೆ, ಅನಾರೋಗ್ಯಕ್ಕೀಡಾದ ಮಕ್ಕಳು ವೈದ್ಯರು ನೀಡಿದ ಎಲ್ಲಾ ಮಾರ್ಗಸೂಚಿಗಳನ್ನು ಮಗು ಅನುಸರಿಸುತ್ತಿದ್ದಾರೋ ಇಲ್ಲವೋ ಅನ್ನೋದನ್ನ ನೋಡುವುದೇ ಪೋಷಕರಿಗೆ ದೊಡ್ಡ ತಲೆನೋವಾಗಿರುತ್ತದೆ. ಅದಕ್ಕೆ ಮಗುವನ್ನ ಯಾವ ರೀತಿ ನೋಡಿಕೊಳ್ಳಬೇಕು ಎನ್ನುವ ಸಲಹೆಗಳು ಇಲ್ಲಿವೆ ನೋಡಿ.

ಅನಾವಶ್ಯಕವಾದ ಆ್ಯಂಟಿಬಯೋಟಿಕ್‌ಗಳನ್ನು ತಪ್ಪಿಸಿ: ಸಾಮಾನ್ಯ ನೆಗಡಿ ಮತ್ತು ಜ್ವರಕ್ಕೆ ಸಹ ವೈದ್ಯರ ಸಹಾಯದಿಂದ ಮಾತ್ರ ಚಿಕಿತ್ಸೆ ನೀಡಬೇಕು. ವೈದ್ಯರೊಂದಿಗೆ ಮಾತನಾಡದೆ ಮಗುವಿಗೆ ಮಾತ್ರೆಗಳನ್ನು ನೀಡಬೇಡಿ. ಮಾತ್ರೆಗಳ ಮಿತಿಮೀರಿದ ಬಳಕೆ ರೋಗನಿರೋಧಕ ಶಕ್ತಿ ಕಡಿಮೆಯಾಗಲು ಕಾರಣವಾಗಬಹುದು.

ಬೀಸಿ ನೀರು ಉತ್ತಮ : ಮಕ್ಕಳು ಚಳಿಗಾಲದಲ್ಲೂ ತಣ್ಣೀರು ಕುಡಿಯಲು ಬಳಸುತ್ತಾರೆ. ತಣ್ಣೀರು ಕುಡಿಯುವುದರಿಂದ ಸ್ವಾಶಕೋಶಕ್ಕೆ ಸೋಂಕು ಉಂಟಾಗುತ್ತದೆ. ಇದರಿಂದ ಕೆಮ್ಮು, ನೆಗಡಿ, ಬರುವ ಸಾಧ್ಯತೆ ಹೆಚ್ಚು. ಅದಕ್ಕಾಗಿ ಮಕ್ಕಳಿಗೆ ಹಾಟ್‌ ವಾಟರ್‌ ನೀಡುವುದು ಉತ್ತಮ. ದೇಹ ಹೈಡ್ರೇಟೆಡ್ ಆಗಿರುವುದು ವಿಷಕಾರಿ ಅಂಶವನ್ನು ದೇಹದಿಂದ ಹೊರಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Winter Health tips : ಚಳಿಗಾಲ ಇದೆ ಅಂತ ಮಲ್ಕೊಂಡೆ ಇರ್ಬೇಡಿ.. ಮಾರ್ನಿಂಗ್‌ ಈ ಕೆಲಸ ಮಾಡಿ..!

ಕರಿದ ಆಹಾರಗಳನ್ನು ಕಡಿಮೆ ಮಾಡಿ : ಅನೇಕ ಮಕ್ಕಳು ಫ್ರೆಂಚ್ ಫ್ರೈಸ್, ಪಾಸ್ತಾ ಮತ್ತು ಬರ್ಗರ್‌ಗಳಂತಹ ಜಂಕ್ ಫುಡ್‌ಗಳನ್ನು ತಿನ್ನುತ್ತಾರೆ. ಜಂಕ್‌ ಫುಡ್‌ಗಳನ್ನು ತಪ್ಪಿಸಿ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರ ನೀಡುವಂತೆ ಎಚ್ಚರಿಕೆ ವಹಿಸಿ. ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ನೀಡಿ. ಪ್ರೋಟೀನ್, ಕಬ್ಬಿಣ ಮತ್ತು ಸತುವುಗಳಂತಹ ಅಗತ್ಯ ಪೋಷಕಾಂಶಗಳು ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವ್ಯಾಯಾಮ: ಮಗು ಆಟವಾಡಲು ಹೊರಗೆ ಹೋಗುತ್ತಾರೆ. ಅವರು ಸೂರ್ಯನ ಬೆಳಕಿನಲ್ಲಿ ಆಡುವಂತೆ ನೋಡಿಕೊಳ್ಳಿ. ನಿಯಮಿತ ವ್ಯಾಯಾಮ ಮಗುವಿನ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.

ಇದನ್ನೂ ಓದಿ: ಈ ರೋಗಗಳಿಂದ ಮುಕ್ತಿ ಪಡೆಯಲು ಚಳಿಗಾಲದಲ್ಲಿ ತಪ್ಪದೇ ಸೇವಿಸಿ ಖರ್ಜೂರ

ಬಾಡಿ ಮಸಾಜ್ : ರಕ್ತ ಪರಿಚಲನೆ ಹೆಚ್ಚಿಸುವ ಮೂಲಕ ದೇಹವನ್ನು ಪುನರ್ಯೌವನಗೊಳಿಸಲು ಬಾಡಿ ಮಸಾಜ್ ಉತ್ತಮವಾಗಿದೆ. ಮಸಾಜ್ ಕೂಡ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ.

ಉತ್ತಮ ನಿದ್ರೆ : ಮಕ್ಕಳು ಸರಿಯಾಗಿ ನಿದ್ದೆ ಮಾಡುವಂತೆ ನೋಡಿಕೊಳ್ಳಿ. ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಲು, ಆರೋಗ್ಯವಾಗಿರಲು ಮತ್ತು ಮಗುವನ್ನು ರೋಗಗಳಿಂದ ರಕ್ಷಿಸಲು ಉತ್ತಮ ನಿದ್ರೆ ಬಹು ಮುಖ್ಯ.

ಇದನ್ನೂ ಓದಿ:  Health Tips: ವಯಸ್ಸಿಗೆ ಅನುಗುಣವಾಗಿ ನಿಮ್ಮ ತೂಕ ಹೇಗಿರಬೇಕು..?

ಪ್ರೋಟೀನ್ ಭರಿತ ಆಹಾರ ನೀಡಿ: ನಿಮ್ಮ ಮಗುವಿನ ಆಹಾರದಲ್ಲಿ ಪನೀರ್, ಚಿಕನ್, ಸೋಯಾ, ಕಡಲೆ ಮತ್ತು ಹಾಲನ್ನು ಸೇರಿಸಲು ಪ್ರಯತ್ನಿಸಿ. ಆಹಾರದಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಇರುವುದನ್ನು ಖಚಿತಪಡಿಸಿಕೊಳ್ಳಿ. ಇದು ಸ್ನಾಯುಗಳ ಬೆಳವಣಿಗೆ ಮತ್ತು ಗಾಯಗಳು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News