Eating raw Onion : ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆಯೇ ಗೊತ್ತಾ..!

Onion Health tips : ಪ್ರತಿದಿನ ಈರುಳ್ಳಿ ತಿನ್ನುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಈರುಳ್ಳಿಯನ್ನು ಮಧುಮೇಹಕ್ಕೆ ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರ ಹೊರತಾಗಿ ಈರುಳ್ಳಿ ಇನ್ನೂ ಕೆಲವು ಪ್ರಯೋಜನಗಳನ್ನು ಹೊಂದಿದೆ,

Written by - Krishna N K | Last Updated : Mar 18, 2023, 03:59 PM IST
  • ಭಾರತೀಯ ಆಹಾರ ಪದ್ಧತಿಯಲ್ಲಿ ಈರುಳ್ಳಿಗೆ ಪ್ರಮುಖ ಪಾತ್ರವಿದೆ.
  • ಅತ್ಯುತ್ತಮ ಮಸಾಲೆಗಳಲ್ಲಿ ಒಂದಾಗಿರುವ ಉಳ್ಳಾಗಡ್ಡಿ ಆಹಾರಕ್ಕೆ ಪರಿಮಳವನ್ನು ನೀಡುತ್ತದೆ.
  • ಅಲ್ಲದೆ, ಅನೇಕ ಔಷಧಿ ಗುಣಗಳನ್ನು ಈರುಳ್ಳಿ ಹೊಂದಿದೆ.
Eating raw Onion : ಪ್ರತಿದಿನ ಹಸಿ ಈರುಳ್ಳಿ ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆಯೇ ಗೊತ್ತಾ..! title=

Onion Health benefits : ಭಾರತೀಯ ಆಹಾರ ಪದ್ಧತಿಯಲ್ಲಿ ಈರುಳ್ಳಿಗೆ ಪ್ರಮುಖ ಪಾತ್ರವಿದೆ. ಈರುಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡೇ ಸಾಕಷ್ಟು ಆಹಾರಗಳನ್ನು ತಯಾರಿಸಲಾಗುತ್ತದೆ. ಅತ್ಯುತ್ತಮ ಮಸಾಲೆಗಳಲ್ಲಿ ಒಂದಾಗಿರುವ ಉಳ್ಳಾಗಡ್ಡಿ(ಈರುಳ್ಳಿ) ಆಹಾರಕ್ಕೆ ಪರಿಮಳವನ್ನು ನೀಡುತ್ತದೆ. ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಕಡಿಮೆ ಕೊಬ್ಬಿನಂಶವಿದೆ. ಈರುಳ್ಳಿಯನ್ನು ಹಸಿ ಅಥವಾ ಬೇಯಿಸಿ ತಿನ್ನಬಹುದು, ನೀವು ಯಾವುದೇ ರೀತಿಯಲ್ಲಿ ತಿಂದರೂ ದೇಹಕ್ಕೆ ಪ್ರಯೋಜನಕಾರಿ. ಸಾಮಾನ್ಯವಾಗಿ ಈರುಳ್ಳಿ ತೂಕ ಇಳಿಸುವುದರ ಜೊತೆಗೆ ದೇಹವನ್ನು ತಂಪಾಗಿರಿಸುತ್ತದೆ. ಅಲ್ಲದೆ, ಅನೇಕ ಔಷಧಿ ಗುಣಗಳನ್ನು ಈರುಳ್ಳಿ ಹೊಂದಿದೆ.

ಈರುಳ್ಳಿ ಇನ್ಸುಲಿನ್ ಉತ್ಪಾದನೆಯನ್ನು ವೇಗಗೊಳಿಸುವ ಪ್ರಮುಖ ಅಂಶವನ್ನು ಹೊಂದಿದೆ, ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಹೀಗಾಗಿ ಈರುಳ್ಳಿಯನ್ನು ಮಧುಮೇಹಕ್ಕೆ ಅತ್ಯುತ್ತಮ ಆಹಾರವೆಂದು ಪರಿಗಣಿಸಲಾಗಿದೆ. ಹಸಿರು ಈರುಳ್ಳಿ ತಿನ್ನುವುದರಿಂದ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳನ್ನು ಸುಧಾರಿಸಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Workout ಬಳಿಕ ತಕ್ಷಣವೇ ನೀರು ಕುಡಿಯಬೇಕೇ ಅಥವಾ ಬೇಡವೇ?

ಇದರ ಹೊರತಾಗಿ ಈರುಳ್ಳಿ ಇನ್ನೂ ಕೆಲವು ಪ್ರಯೋಜನಗಳನ್ನು ಹೊಂದಿದೆ, ಈರುಳ್ಳಿ ತಿನ್ನುವುದರಿಂದ ಶೀತ ಮತ್ತು ಜ್ವರದಂತಹ ಕಾಯಿಲೆಗಳನ್ನು ಗುಣಪಡಿಸಬಹುದು. ಈರುಳ್ಳಿಯ ಆರೋಗ್ಯ ಪ್ರಯೋಜನಗಳ ಹೊರತಾಗಿಯೂ, ಹಸಿ ಈರುಳ್ಳಿಯನ್ನು ತಿನ್ನುವುದು ಹೊಟ್ಟೆಯ ಆಮ್ಲೀಯತೆಗೆ ಕಾರಣವಾಗಬಹುದು. ಅಲ್ಲದೆ, ಹಸಿ ಈರುಳ್ಳಿಯನ್ನು ತಿನ್ನುವಾಗ ಬಾಯಿಯಿಂದ ಬರುವ ವಾಸನೆ ಅನೇಕರಿಗೆ ಅಸಹ್ಯಕರವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News