ನವದೆಹಲಿ : ನಮ್ಮ ದೇಹದ ಬಹುಪಾಲು ನೀರಿನಿಂದ (Water) ಕೂಡಿದೆ. ಅದಕ್ಕಾಗಿಯೇ ಸರಿಯಾದ ಪ್ರಮಾಣದಲ್ಲಿ ಮತ್ತು ನಿಯಮಿತವಾಗಿ ನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಮುಖ್ಯ (Water Benefits) . ಇಲ್ಲದಿದ್ದರೆ ದೇಹವು ನಿರ್ಜಲೀಕರಣಗೊಳ್ಳುತ್ತದೆ ಮತ್ತು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆರೋಗ್ಯವಂತ ವ್ಯಕ್ತಿಯು ದಿನಕ್ಕೆ 3 ರಿಂದ 4 ಲೀಟರ್ ನೀರನ್ನು ಕುಡಿಯಬೇಕು. ಆದರೆ, ರಾತ್ರಿ ನೀರು ಕುಡಿಯಬೇಕೋ ಬೇಡವೋ, ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ.
ರಾತ್ರಿ ನೀರು ಕುಡಿಯಬೇಕೋ ಬೇಡವೋ?
ರಾತ್ರಿ ಮಲಗುವ ಮೊದಲು ನೀರನ್ನು ಕುಡಿಯುವುದು ಅವಶ್ಯಕ ಎಂದು ತಜ್ಞರು ಹೇಳುತ್ತಾರೆ (Drink Water at Night). ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ವಿಟಮಿನ್ ಗಳು ಮತ್ತು ಖನಿಜಗಳು ಸಹ ನೀರಿನೊಂದಿಗೆ ದೇಹ ಸೇರುತ್ತದೆ. ನೀರನ್ನು ಕುಡಿಯುವುದರಿಂದ, ಚಯಾಪಚಯವು ಆರೋಗ್ಯಕರವಾಗಿರುತ್ತದೆ. ತ್ಯಾಜ್ಯವನ್ನು ದೇಹದಿಂದ ಹೊರಹಾಕುವುದು ಕಷ್ಟವಾಗುವುದಿಲ್ಲ.
ಇದನ್ನೂ ಓದಿ : Jaggery & Ghee : ತುಪ್ಪದ ಜೊತೆ ಬೆಲ್ಲ ಸೇವಿಸಿ, ಈ ಆರೋಗ್ಯ ಸಮಸ್ಯೆಗಳಿಂದ ದೂರವಿರಿ
ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು :
ಕಡಿಮೆ ನೀರು ಕುಡಿಯುವ ಜನರ ದೇಹದಲ್ಲಿ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ (Benefits of water). ಹಗಲಿನಲ್ಲಿ ಹೆಚ್ಚು ನೀರು ಕುಡಿಯುವುದು ಮತ್ತು ರಾತ್ರಿ ಮಲಗುವ ಕೆಲವು ಗಂಟೆಗಳ ಮೊದಲು ನೀರನ್ನು ಕುಡಿಯುವುದು ಉತ್ತಮ. ನೀವು ಮಲಗುವ ಸಮಯದಲ್ಲಿ ಹೆಚ್ಚು ನೀರು ಕುಡಿದರೆ, ಅದು ನಿದ್ರೆಗೆ ತೊಂದರೆಯಾಗಬಹುದು.
ಈ ಜನರು ಮಾತ್ರ ಹೆಚ್ಚು ನೀರು ಕುಡಿಯಬಾರದು :
ಮಧುಮೇಹ ರೋಗಿಗಳು (Diabetes) ಮತ್ತು ಹೃದ್ರೋಗದಿಂದ ಬಳಲುತ್ತಿರುವವರು ರಾತ್ರಿಯಲ್ಲಿ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಬೇಕು. ಇವರು ರಾತ್ರಿಯ ವೇಳೆ, ಹೆಚ್ಚು ನೀರು ಕುಡಿದರೆ, ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗಬೇಕಾಗುತ್ತದೆ. ಇದರಿಂದಾಗಿ ಅವರ ನಿದ್ರೆಯು ಸಂಪೂರ್ಣವಾಗಿ ಹಾಳಾಗುತ್ತದೆ.
ಇದನ್ನೂ ಓದಿ : ಹಣೆಗೆ ಬಿಂದಿ ಹಚ್ಚುವುದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ! ಹೇಗೆ ಇಲ್ಲಿ ತಿಳಿಯಿರಿ
ರಾತ್ರಿ ಹೊತ್ತು ನೀರು ಕುಡಿಯುವುದು ಹೇಗೆ?
ನೀರನ್ನು ಕುಡಿಯುವ ಬದಲು, ನಿಂಬೆ ಪಾನಕ, ಗ್ರೀನ್ ಟೀ (Green Tea), ಹರ್ಬಲ್ ಟೀ, ಮತ್ತು ಇತರ ಆರೋಗ್ಯಕರ ಪಾನೀಯಗಳನ್ನು ಕುಡಿಯಬಹುದು. ಹೆಚ್ಚು ನೀರು ಕುಡಿದರೆ ರಾತ್ರಿ ಮೂತ್ರ ವಿಸರ್ಜನೆಗೆ ಆಗಾಗ ಏಳಬೇಕಾಗುತ್ತದೆ. ಇದರಿಂದ ನಿದ್ದೆ ಕೆಡುತ್ತದೆ. ರಾತ್ರಿ ಒಂದು ಅಥವಾ 2 ಗ್ಲಾಸ್ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು.
ರಾತ್ರಿಯಲ್ಲಿ ನೀರು ಕುಡಿಯುವುದು ಏಕೆ ಮುಖ್ಯ?
ರಾತ್ರಿ ಊಟದ ನಂತರ ನೀರು ಕುಡಿಯುವುದರಿಂದ ದೇಹ ನೈಸರ್ಗಿಕವಾಗಿ ಸ್ವಚ್ಛಗೊಳ್ಳಲು ಸಹಾಯವಾಗುತ್ತದೆ. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಸಿಡಿಟಿ (Acidity) ಅಥವಾ ಗ್ಯಾಸ್ ಸಮಸ್ಯೆ ಇರುವವರು ರಾತ್ರಿ ನೀರು ಕುಡಿಯಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.