Diabetes Control Tips : ಮಧುಮೇಹದಿಂದ ಅನೇಕ ಜನರು ಬಳಲುತ್ತಿದ್ದಾರೆ. ಅದರಲ್ಲೂ ಹಲವು ದೀರ್ಘಕಾಲದ ಕಾಯಿಲೆಗಳು ಮಧುಮೇಹದಿಂದ ಬರುತ್ತವೆ. ಮಧುಮೇಹದಿಂದ ಬಳಲುತ್ತಿರುವವರು ಹಲವಾರು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಜೊತೆಗೆ, ಆಹಾರ ಸೇವನೆ ಕಡೆ ವಿಶೇಷ ಗಮನ ನೀಡಬೇಕು. ಆಹಾರ ಪದ್ಧತಿಯನ್ನು ಸಹ ಪಾಲಿಸಬೇಕು. ಚಿಕ್ಕವಯಸ್ಸಿನಲ್ಲಿ ಮಧುಮೇಹ ಬಂದರೆ ಕೊಲೆಸ್ಟ್ರಾಲ್, ರಕ್ತದೊತ್ತಡ, ಹೃದಯಾಘಾತ, ಕಿಡ್ನಿ ಕಾಯಿಲೆಗಳು ಬರುವ ಸಾಧ್ಯತೆಗಳೂ ಇವೆ. ಹಾಗಾಗಿ ಆಯುರ್ವೇದ ತಜ್ಞರು ಸೂಚಿಸಿದ ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಬೇಕಾಗುತ್ತದೆ.
ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚಾದರೆ ದೀರ್ಘಕಾಲದ ಕಾಯಿಲೆಗಳು ಬರಲು ಆರಂಭಿಸುತ್ತವೆ. ಹಾಗಾಗಿ ಅವುಗಳನ್ನು ನಿಯಂತ್ರಿಸಲು ಈರುಳ್ಳಿ ರಸವನ್ನು ಸೇವಿಸುವುದು ಉತ್ತಮ ಪರಿಹಾರ. ಇದರ ಗುಣಲಕ್ಷಣಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.
ಇದನ್ನೂ ಓದಿ : Diabetes Control Tips: ಮಧುಮೇಹಿಗಳು ಈ ಹಣ್ಣಿನ ಎಲೆ ಸೇವಿಸಿ.. ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗಲ್ಲ!
ಮಧುಮೇಹವನ್ನು ನಿಯಂತ್ರಿಸಲು ಮತ್ತು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಈರುಳ್ಳಿ ರಸವನ್ನು ಪ್ರತಿದಿನ ಸೇವಿಸಬೇಕು. ಇದನ್ನು ಪ್ರತಿದಿನ ಕುಡಿಯುವುದರಿಂದ ಟೈಪ್-1 ಮತ್ತು ಟೈಪ್-2 ರೋಗಿಗಳಿಗೆ ಪರಿಹಾರ ಸಿಗುತ್ತದೆ. ಈರುಳ್ಳಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಈ ಕಾರಣದಿಂದಾಗಿ, ಜೀರ್ಣಕಾರಿ ಸಮಸ್ಯೆಗಳು ಸಹ ದೂರವಾಗುತ್ತವೆ.
ಈರುಳ್ಳಿಯನ್ನು ಹಲವು ವಿಧಗಳಲ್ಲಿ ತಿನ್ನಲಾಗುತ್ತದೆ. ಈರುಳ್ಳಿಯನ್ನು ಆಹಾರ ಪದಾರ್ಥಗಳ ಸುವಾಸನೆಗಾಗಿ ಬಳಸಬೇಕು. ಇದರ ಗುಣಲಕ್ಷಣಗಳು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಆದರೆ ಪ್ರತಿದಿನ ಇದರ ಜ್ಯೂಸ್ ಕುಡಿಯುವುದರಿಂದ ಕೂದಲಿನ ಸಮಸ್ಯೆ ಕಡಿಮೆಯಾಗುವುದಲ್ಲದೆ ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ.
ಇದನ್ನೂ ಓದಿ : ನಿಂಬೆ ರಸವನ್ನು ಬೆರೆಸಿದ ನೀರನ್ನು ಕುಡಿಯುವುದರಿಂದಾಗುವ ಪ್ರಯೋಜನಗಳೇನು ಗೊತ್ತಾ..?
ಈರುಳ್ಳಿಯನ್ನು ಕುದಿಸಿ ಅದರ ರಸವನ್ನು ಕುಡಿದರೆ ದೇಹಕ್ಕೆ ಡಿಟಾಕ್ಸ್ ಡ್ರಿಂಕ್ ನಂತೆ ಕೆಲಸ ಮಾಡುತ್ತದೆ. ಈ ಮನೆಮದ್ದು ದೇಹದಲ್ಲಿನ ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ. ಮಧುಮೇಹ ರೋಗಿಗಳಿಗೂ ಪ್ರಯೋಜನಕಾರಿ.
ಈರುಳ್ಳಿ ರಸ ತಯಾರಿಸುವ ವಿಧಾನ :
2 ಮಧ್ಯಮ ಗಾತ್ರದ ಈರುಳ್ಳಿಯನ್ನು ಕತ್ತರಿಸಬೇಕು. ಮಿಕ್ಸರ್ ಗ್ರೈಂಡರ್ನಲ್ಲಿ 1 ಕಪ್ ನೀರು, ಚಿಟಿಕೆ ಕಪ್ಪು ಉಪ್ಪು ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ, ರುಬ್ಬಿ. ಈಗ ಜ್ಯೂಸ್ ರೆಯಾಗಿದೆ. ದಿನಕ್ಕೆ ಒಂದು ಲೋಟ ಜ್ಯೂಸ್ ಕುಡಿದರೆ ದೇಹಕ್ಕೆ ನಾರಿನಂಶ ಮತ್ತು ಪೋಷಕಾಂಶಗಳು ಸಿಗುತ್ತವೆ. ಇದಲ್ಲದೆ, ದೇಹದಲ್ಲಿನ ಸಕ್ಕರೆ ಮಟ್ಟ ಸಹ ನಿಯಂತ್ರಣದಲ್ಲಿರುತ್ತದೆ.
Disclaimer: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.