Diabetes: ಮಳೆಗಾಲದಲ್ಲಿ ಸಿಗುವ ಈ ಹಣ್ಣುಗಳನ್ನು ಡಯಾಬಿಟಿಸ್ ರೋಗಿಗಳು ಸೇವಿಸಬಹುದೇ?

Can Diabetes Patient Eat Fruits in Monsoon: ಡಯಾಬಿಟಿಸ್ ರೋಗಿಗಳಿಗೆ ಹಣ್ಣುಗಳ ಸೇವನೆ ತುಂಬಾ ಲಾಭಕಾರಿಯಗಿದೆ. ಹೀಗಿರುವಾಗ ಮಳೆಗಾಲದ ಋತುವಿನಲ್ಲಿ ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Jun 28, 2022, 07:24 PM IST
  • ಡಯಾಬಿಟಿಸ್ ರೋಗಿಗಳಿಗೆ ಹಣ್ಣುಗಳ ಸೇವನೆ ತುಂಬಾ ಲಾಭಕಾರಿಯಗಿದೆ.
  • ಹೀಗಿರುವಾಗ ಮಳೆಗಾಲದ ಋತುವಿನಲ್ಲಿ ಮಧುಮೇಹಿಗಳು ಯಾವ ಹಣ್ಣುಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
Diabetes: ಮಳೆಗಾಲದಲ್ಲಿ ಸಿಗುವ ಈ ಹಣ್ಣುಗಳನ್ನು ಡಯಾಬಿಟಿಸ್ ರೋಗಿಗಳು ಸೇವಿಸಬಹುದೇ? title=
Can Diabetes Patients Eat Monsoon Fruits

Can Diabetes Patient Eat Fruits in Monsoon: ಇತ್ತೀಚಿನ ದಿನಗಳಲ್ಲಿ ಮಧುಮೇಹ ಒಂದು ಸಾಮಾನ್ಯ ಕಾಯಿಲೆಯಾಗಿ ಪರಿಣಮಿಸಿದೆ. ಹೀಗಿರುವಾಗ ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಬೇಕು ಎಂಬ ಸಲಹೆ ನೀಡಲಾಗುತ್ತದೆ. ಸಕ್ಕರೆ, ಸಿಹಿ ಮತ್ತು ಅನಾರೋಗ್ಯಕರ ಆಹಾರಗಳನ್ನು ತ್ಯಜಿಸಲು ಅವರಿಗೆ ಸಲಹೆ ನೀಡಲಾಗುತ್ತದೆ. ಆದರೆ, ಇದೀಗ ದೇಶದ ಬಹುತೇಕ ಭಾಗಗಳಲ್ಲಿ ಮಾನ್ಸೂನ್ ಕದ ತಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಗಾಲದಲ್ಲಿ ಸಿಗುವ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಹುದೇ ಎಂಬ ಪ್ರಶ್ನೆಗಳು ಮಧುಮೇಹಿಗಳ ಮನದಲ್ಲಿ ಮೂಡುವುದು ಸಹಜ. ಮಳೆಗಾಲದಲ್ಲಿ ಅವರು ಯಾವ ಹಣ್ಣುಗಳನ್ನು ತಿನ್ನಬಹುದು ಮತ್ತು ಯಾವುದನ್ನು ತಿನ್ನಬಾರದು? ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಮಳೆಗಾಲದಲ್ಲಿ ಮಧುಮೇಹಿಗಳು ಯಾವ ಹಣ್ಣುಗಳನ್ನು ತಿನ್ನಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಮಧುಮೇಹಿಗಳು ಮಳೆಗಾಲದಲ್ಲಿ ಹಣ್ಣುಗಳನ್ನು ತಿನ್ನಬಹುದೇ?
ಪಿಯರ್ಸ್ ಹಣ್ಣು -
ಪೀಯರ್ಸ್ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳು ಕೂಡ ಪಿಯರ್ಸ್ ಹಣ್ಣುಗಳನ್ನು ಸೇವಿಸಬಹುದು. ಪೀಯರ್ಸ್ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಇರುತ್ತದೆ ಮತ್ತು 40 ಕ್ಕಿಂತ ಕಡಿಮೆ GI ಅನ್ನು ಹೊಂದಿರುತ್ತದೆ. ಆದ್ದರಿಂದ, ಪಿಯರ್ಸ್ ರೋಗಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಆಪಲ್ ಹಣ್ಣು - ನಿತ್ಯ ಸೇಬು ತಿನ್ನುವ ಮೂಲಕ ನೀವು ಯಾವಾಗಲೂ ನಿರೋಗಿಯಾಗಿರಬಹುದು. ಆದರೆ, ಸೇಬುಹಣ್ಣು ಪ್ರತಿ ಋತುವಿನಲ್ಲಿ ಕಂಡುಬರುವ ಒಂದು ಹಣ್ಣಾಗಿದೆ, ಸೇಬುಹಣ್ಣು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ, ಇದು ಸಕ್ಕರೆ ರೋಗಿಗಳ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಇದನ್ನು ಪ್ರತಿದಿನ ಸೇವಿಸಬಹುದು.

ಇದನ್ನೂ ಓದಿ-Tea: ಚಹಾ ಸೇವನೆಯಿಂದ ತೂಕ ಹೆಚ್ಚಾಗುತ್ತದೆಯೇ? ಇದರ ಹಿಂದಿನ ನಿಜಾಂಶ ಏನು?

ಚೆರ್ರಿ ಹಣ್ಣು - ಚೆರ್ರಿ ಮಳೆಗಾಲದಲ್ಲಿ ಸಿಗುವ ಒಂದು ರುಚಿಕಟ್ಟಾದ ಹಣ್ಣು. ಇದು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದ್ದರಿಂದ ಇದು ಎಲ್ಲರಿಗೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಮತ್ತೊಂದೆಡೆ, ಸಕ್ಕರೆ ರೋಗಿಗಳು ಚೆರ್ರಿಗಳನ್ನು ಸಹ ಸೇವಿಸಬಹುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದನ್ನೂ ಓದಿ-Lung Cancer: ದೇಹದಲ್ಲಿ ಈ ಬದಲಾವಣೆಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News