Diabetes Tips: ಚಳಿಗಾಲದ ಈ 5 ತರಕಾರಿಗಳು ಇಡೀ ಋತುವಿನಲ್ಲಿ ನಿಮ್ಮ ಮಧುಮೇಹ ನಿಯಂತ್ರಣದಲ್ಲಿಡುತ್ತವೆ!

Taming Diabetes In Winter: ಚಳಿಗಾಲದಲ್ಲಿ ದೊರೆಯುವ ಐದು ಅಗ್ಗದ ತರಕಾರಿಗಳು ಮಧುಮೇಹ ರೋಗಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿವೆ, ಇವುಗಳ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತವೆ. (Health News In Kannada)  

Written by - Nitin Tabib | Last Updated : Jan 8, 2024, 10:17 PM IST
  • ಚಳಿಗಾಲದಲ್ಲಿ ದೊರೆಯುವ ಕೆಲ ವಸ್ತುಗಳು ಸಕ್ಕರೆಯನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
  • ಚಳಿಗಾಲದಲ್ಲಿ ಅಗ್ಗದ ದರದಲ್ಲಿ ದೊರೆಯುವ ಕೆಲವು ತರಕಾರಿಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.
  • ಬನ್ನಿ ಆ ತರಕಾರಿಗಳು ಯಾವುವು ಎಂಬುದನ್ನೂ ಈ ಲೇಖನದ ಮೂಲಕ ತಿಳಿದುಕೊಳ್ಳೋಣ
Diabetes Tips: ಚಳಿಗಾಲದ ಈ 5 ತರಕಾರಿಗಳು ಇಡೀ ಋತುವಿನಲ್ಲಿ ನಿಮ್ಮ ಮಧುಮೇಹ ನಿಯಂತ್ರಣದಲ್ಲಿಡುತ್ತವೆ! title=

ಬೆಂಗಳೂರು: ಚಳಿಗಾಲದಲ್ಲಿ ನಾವು ಸೇವಿಸುವ ಹೆಚ್ಚಿನ ಆಹಾರಗಳು ಮಧುಮೇಹ ರೋಗಿಗಳ ಆರೋಗ್ಯಕ್ಕೆ ಒಳ್ಳೆಯದಲ್ಲಿ ಎನ್ನಲಾಗುತ್ತದೆ. ಏಕೆಂದರೆ ಚಳಿಗಾಲದಲ್ಲಿ, ಜನರು ಹೆಚ್ಚಾಗಿ ಕೊಬ್ಬಿನ ಅಥವಾ ಹೆಚ್ಚಿನ ಸಕ್ಕರೆಯ ಆಹಾರವನ್ನು ಸೇವಿಸುತ್ತಾರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಚಳಿಗಾಲದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಕೆಲವು ತೊಂದರೆಗಳು ಉಂಟಾಗಬಹುದು. ಆದಾಗ್ಯೂ, ಚಳಿಗಾಲದಲ್ಲಿ ದೊರೆಯುವ ಕೆಲ ವಸ್ತುಗಳು ಸಕ್ಕರೆಯನ್ನು ಹೆಚ್ಚಿಸುವ ಬದಲು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಚಳಿಗಾಲದಲ್ಲಿ ಅಗ್ಗದ ದರದಲ್ಲಿ ದೊರೆಯುವ ಕೆಲವು ತರಕಾರಿಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಈ ಲೇಖನದಲ್ಲಿ ನಾವು ನಿಮಗೆ ಕೇವಲ 20 ರೂಪಾಯಿಗೆ ಲಭ್ಯವಿರುವ ಕೆಲ ತರಕಾರಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. (Health News In Kannada)

1. ಹಸಿ ಬಟಾಣಿ ಕಾಳುಗಳು
ಚಳಿಗಾಲದಲ್ಲಿ ಅಗ್ಗದ ದರದಲ್ಲಿ ದೊರೆಯುವ ತರಕಾರಿಗಳಲ್ಲಿ ಹಸಿ ಬಟಾಣಿ ಕಾಳುಗಳು ಕೂಡ ಒಂದು, ಇವು ಮಧುಮೇಹ ರೋಗಿಗಳಿಗೆ ಉತ್ತಮ ಆಯ್ಕೆಯಾಗಿವೆ. ಆದಾಗ್ಯೂ, ಬಟಾಣಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಕೆಲವರು ಭಾವಿಸುತ್ತಾರೆ, ಆದರೆ ಅದರಲ್ಲಿ ಅನೇಕ ವಿಶೇಷ ಅಂಶಗಳು ಕಂಡುಬರುತ್ತವೆ, ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

2. ಮೂಲಂಗಿ
ಚಳಿಗಾಲದಲ್ಲಿ ಬೆಳೆದ ಮೂಲಂಗಿಯು ಈ ಋತುವಿನಲ್ಲಿ ಉತ್ತಮ ಬೆಲೆಯಲ್ಲಿ ಲಭ್ಯವಿರುತ್ತದೆ ಮತ್ತು ಮಧುಮೇಹ ರೋಗಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಚಳಿಗಾಲದಲ್ಲಿ ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಸೇವಿಸಬಹುದು, ಇದು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

3. ಕ್ಯಾರೆಟ್
ಮಧುಮೇಹಿಗಳಿಗೆ ಕ್ಯಾರೆಟ್ ಸೇವನೆ ಒಳ್ಳೆಯದಲ್ಲ ಎಂದು ಹೆಚ್ಚಿನವರು ಭಾವಿಸುತ್ತಾರೆ, ಆದರೆ ಅದು ಹಾಗಲ್ಲ. ಮಧುಮೇಹ ರೋಗಿಗಳು ಕ್ಯಾರೆಟ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಬಹುದು, ಇದು ಮಧುಮೇಹದಿಂದ ಉಂಟಾಗುವ ಅನೇಕ ಅಡೆತಡೆ ನಿವಾರಿಸಲು ಸಹಾಯ ಮಾಡುತ್ತದೆ.

4. ಮೆಂತ್ಯ
ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮೆಂತ್ಯವನ್ನು ಯಾವುದೇ ಔಷಧಿಗಿಂತ ಕಡಿಮೆಯಿಲ್ಲ ಎಂದು ಪರಿಗಣಿಸಲಾಗುತ್ತದೆ. ಮೆಂತ್ಯ ಬೀಜಗಳು ಅಥವಾ ಎಲೆಗಳು, ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ. ಮೆಂತ್ಯವನ್ನು ಚಳಿಗಾಲದಲ್ಲಿ ಬೆಳೆಯಲಾಗುತ್ತದೆ ಮತ್ತು ಈ ಋತುವಿನಲ್ಲಿ ಅದರ ಬೆಲೆ ಕಡಿಮೆ ಇರುತ್ತದೆ. ಮಧುಮೇಹಿಗಳು ಕೇವಲ 20 ರೂಪಾಯಿ ಮೌಲ್ಯದ ಹಸಿರು ಮೆಂತ್ಯವನ್ನು ಎರಡು ದಿನಗಳ ಕಾಲ ಸೇವಿಸಬಹುದು. 

ಇದನ್ನೂ ಓದಿ-Diabetes Control Juice: ಕೇವಲ 12 ಗಂಟೆಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ತರುತ್ತೆ ಈ ತರಕಾರಿ, ಈ ರೀತಿ ಸೇವಿಸಿ!

5. ಪಾಲಕ
ಸಾಮಾನ್ಯವಾಗಿ ನೀವು ಪಾಲಕ ಸೊಪ್ಪನ್ನು ಯಾವುದೇ ಋತುವಿನಲ್ಲಿ ಸೇವಿಸಬಹುದು. ಆದರೆ ಭಾರತದಲ್ಲಿ ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ಬೆಳೆಯಲಾಗುತ್ತದೆ ಮತ್ತು ಆದ್ದರಿಂದ ಈ ಋತುವಿನಲ್ಲಿ ಅದರ ಬೆಲೆ ಕೂಡ ಕಡಿಮೆಯಾಗುತ್ತದೆ. ಪಾಲಕ್ ಸೊಪ್ಪನ್ನು ಸಲಾಡ್ ರೂಪದಲ್ಲಿ ಸೇವಿಸುವುದು ಅಥವಾ ಯಾವುದೇ ತರಕಾರಿ ಅಥವಾ ಬೇಳೆಕಾಳುಗಳಿಗೆ ಸೇರಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ-Bad Cholesterol Tips: ಈ ಡ್ರೈಫ್ರೂಟ್ ಅನ್ನು ಈ ರೀತಿ ಸೇವಿಸಿದರೆ, ರಕ್ತ ನಾಳಗಳಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಂಗಮಾಯ ಗ್ಯಾರಂಟಿ!(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News