ಭಾರತದಲ್ಲಿ ಕರೋನಾ ನಾಲ್ಕನೇ ಅಲೆ..! ಒಂದೇ ದಿನ 17 ಸಾವಿರ ಮಂದಿಯಲ್ಲಿ ಸೋಂಕು ಪತ್ತೆ ..!

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗೆ ದೇಶದಲ್ಲಿ ಒಟ್ಟು 4,33,62,294 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ.  ಗುರುವಾರ ದೇಶದಲ್ಲಿ 13,313 ಕೊರೊನಾ ಪ್ರಕರಣಗಳು ವರದಿಯಾಗಿವೆ. 

Written by - Ranjitha R K | Last Updated : Jun 24, 2022, 11:26 AM IST
  • ಮತ್ತೆ ಹೆಚ್ಚುತ್ತಿದೆ ಕರೋನಾ ಕೇಸ್
  • ಸೋಂಕಿತರ ಸಂಖ್ಯೆಯಲ್ಲಿ 30.2 ಪ್ರತಿಶತದಷ್ಟು ಹೆಚ್ಚಳ
  • ಚೇತರಿಕೆ ಪ್ರಮಾಣ 98.59 ಪ್ರತಿಶತ
ಭಾರತದಲ್ಲಿ ಕರೋನಾ ನಾಲ್ಕನೇ ಅಲೆ..!  ಒಂದೇ ದಿನ 17 ಸಾವಿರ ಮಂದಿಯಲ್ಲಿ ಸೋಂಕು ಪತ್ತೆ ..! title=
Coronavirus update (file photo)

ಬೆಂಗಳೂರು : ದೇಶದಲ್ಲಿ ಮತ್ತೊಮ್ಮೆ ಕೊರೊನಾವೈರಸ್ ಪ್ರಕರಣ ಹೆಚ್ಚಾಗತೊಡಗಿದೆ. ಕಳೆದ 24 ಗಂಟೆಗಳಲ್ಲಿ 17,336 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 13 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ದೇಶದಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 88,284 ಕ್ಕೆ ಏರಿದೆ.

ಸೋಂಕಿತರ ಸಂಖ್ಯೆಯಲ್ಲಿ 30.2 ಪ್ರತಿಶತದಷ್ಟು ಹೆಚ್ಚಳ :  
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಇದುವರೆಗೆ ದೇಶದಲ್ಲಿ ಒಟ್ಟು 4,33,62,294 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಗುರುವಾರ ದೇಶದಲ್ಲಿ 13,313 ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೋವಿಡ್ ಪ್ರಕರಣಗಳಲ್ಲಿ ಶೇಕಡಾ 30.2 ರಷ್ಟು ಏರಿಕೆಯಾಗಿದೆ. ಇಲ್ಲಿಯವರೆಗೆ, ದೇಶದಲ್ಲಿ ಒಟ್ಟು 5 ಲಕ್ಷ 24 ಸಾವಿರದ 954 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಕೋವಿಡ್‌ ಸಾವಿನ ಪ್ರಮಾಣವೂ ಈಗ ಶೇಕಡಾ 1.21 ಕ್ಕೆ ಏರಿದೆ.

ಇದನ್ನೂ ಓದಿ : Weight Loss Fruit: ಈ ಒಂದು ಹಣ್ಣು ಸೇವನೆಯಿಂದ ಕಡಿಮೆ ಆಗುತ್ತಂತೆ ತೂಕ!

ಚೇತರಿಕೆ ಪ್ರಮಾಣ 98.59 ಪ್ರತಿಶತ :
ಆರೋಗ್ಯ ಸಚಿವಾಲಯದ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಒಟ್ಟು 13,029 ರೋಗಿಗಳು ಗುಣಮುಖರಾಗಿದ್ದಾರೆ. ಪ್ರಸ್ತುತ, ದೇಶದಲ್ಲಿ ಚೇತರಿಕೆ ದರವು 98.59 ಪ್ರತಿಶತದಷ್ಟಿದೆ. ದೇಶದಲ್ಲಿ ದಿನನಿತ್ಯದ ಪಾಸಿಟಿವಿಟಿ ದರವು 4.32 ಪ್ರತಿಶತಕ್ಕೆ ಏರಿದೆ.  

ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಕರಣಗಳು : 
ದೇಶದಲ್ಲಿ ಗರಿಷ್ಠ ಸಂಖ್ಯೆಯ ಕೋವಿಡ್ ಪ್ರಕರಣಗಳು ಮಹಾರಾಷ್ಟ್ರದಿಂದ ಬರುತ್ತಿವೆ. ಗುರುವಾರ, ಮಹಾರಾಷ್ಟ್ರದಲ್ಲಿ 5,218 ಹೊಸ ಕರೋನವೈರಸ್ ಪ್ರಕರಣಗಳು ವರದಿಯಾಗಿದ್ದು, ಸಾಂಕ್ರಾಮಿಕ ರೋಗದಿಂದಾಗಿ  ಒಬ್ಬ ರೋಗಿ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಇದುವರೆಗೆ ಕೋವಿಡ್-19 ಸೋಂಕಿತರ ಸಂಖ್ಯೆ 79,50,240 ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 1,47,893 ಕ್ಕೆ ಏರಿದೆ.

ಇದನ್ನೂ ಓದಿ : ಡಯಾಬಿಟೀಸ್ ರೋಗಿಗಳಿಗೆ ವರದಾನವಿದ್ದಂತೆ ಈ ಒಂದು ತರಕಾರಿ..!

ಫೆಬ್ರವರಿ 4 ರ ನಂತರ ದೆಹಲಿಯಲ್ಲಿ ಅತಿ ಹೆಚ್ಚು ಪ್ರಕರಣಗಳು :
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ 1,934 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಸೋಂಕಿನ ಪ್ರಮಾಣವು ಶೇಕಡಾ 8.10 ರಷ್ಟಿದೆ. ದೆಹಲಿಯಲ್ಲಿ ಸಾಂಕ್ರಾಮಿಕ ರೋಗದಿಂದ ಯಾರೂ ಸಾವನ್ನಪ್ಪಿದ ಪ್ರಕರಣಗಳು ವರದಿಯಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News