Omicron ಆತಂಕದ ನಡುವೆಯೇ ಸಿಹಿ ಸುದ್ದಿ, ಕರೋನ ಔಷಧಿ Molnupiravir ಮತ್ತು ಲಸಿಕೆ CORBEVAX, COVOVA ಗೆ ಅನುಮೋದನೆ

COVID-19 ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ, CDSCO, ಆರೋಗ್ಯ ಸಚಿವಾಲಯವು CORBEVAX ಲಸಿಕೆ, COVOVAX ಮತ್ತು ಆಂಟಿ-ವೈರಲ್ ಡ್ರಗ್ Molnupiravirಗೆ  ತುರ್ತು ಬಳಕೆಗೆ ಅನುಮೋದನೆ ನೀಡಿದೆ.   

Written by - Ranjitha R K | Last Updated : Dec 28, 2021, 12:24 PM IST
  • ಒಂದು ಔಷಧ ಮತ್ತು ಎರಡು ಹೊಸ ಕರೋನಾ ಲಸಿಕೆಗಳಿಗೆ ಅನುಮೋದನೆ
  • ಟ್ವೀಟ್ ಮಾಡುವ ಮೂಲಕ ಭಾರತಕ್ಕೆ ಅಭಿನಂದನೆ ಸಲ್ಲಿಸಿದ ಮನ್ಸುಖ್ ಮಾಂಡವಿಯಾ
  • ಹೈದರಾಬಾದ್ ಮೂಲದ ಜೈವಿಕ-ಇ ಸಂಸ್ಥೆಯಿಂದ ಔಷಧಿ ತಯಾರಿ
Omicron  ಆತಂಕದ ನಡುವೆಯೇ ಸಿಹಿ ಸುದ್ದಿ, ಕರೋನ ಔಷಧಿ Molnupiravir ಮತ್ತು ಲಸಿಕೆ CORBEVAX, COVOVA ಗೆ  ಅನುಮೋದನೆ title=
ಒಂದು ಔಷಧ ಮತ್ತು ಎರಡು ಹೊಸ ಕರೋನಾ ಲಸಿಕೆಗಳಿಗೆ ಅನುಮೋದನೆ (file photo)

 ನವದೆಹಲಿ : ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣಗಳು ಮತ್ತು ಒಮಿಕ್ರಾನ್ ಬಿಕ್ಕಟ್ಟಿನ ಮಧ್ಯೆ, ಕೇಂದ್ರ ಆರೋಗ್ಯ ಸಚಿವಾಲಯವು ಒಂದು ಔಷಧ ಮತ್ತು ಎರಡು ಹೊಸ ಕರೋನಾ ಲಸಿಕೆಗಳನ್ನು ಅನುಮೋದಿಸಿದೆ. CORBEVAX ಮತ್ತು COVOVAX ಲಸಿಕೆಗಳನ್ನು ಭಾರತದಲ್ಲಿ ಅನುಮೋದಿಸಲಾಗಿದೆ. ಇದಲ್ಲದೆ, ಕೇಂದ್ರ ಆರೋಗ್ಯ ಸಚಿವಾಲಯವು ಕರೋನಾ ಔಷಧಿ Molnupiravir ಅನ್ನು ಸಹ ಅನುಮೋದಿಸಿದೆ.

ಈ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಟ್ವೀಟ್ ಮಾಡುವ ಮೂಲಕ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. COVID-19 ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ, CDSCO, ಆರೋಗ್ಯ ಸಚಿವಾಲಯವು CORBEVAX ಲಸಿಕೆ, COVOVAX ಮತ್ತು ಆಂಟಿ-ವೈರಲ್ ಡ್ರಗ್ Molnupiravirಗೆ  ತುರ್ತು ಬಳಕೆಗೆ ಅನುಮೋದನೆ ನೀಡಿದೆ. 

 

ಇದನ್ನೂ ಓದಿ : Omicron Variant: ಮಧುಮೇಹ ರೋಗಿಗಳು ಓಮಿಕ್ರಾನ್ ರೂಪಾಂತರದಿಂದ ಪಾರಾಗುವುದು ಹೇಗೆ?

CORBEVAX ಲಸಿಕೆಯು, ಕೋವಿಡ್ -19 ವಿರುದ್ಧ ಭಾರತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೊದಲ RBD ಪ್ರೋಟೀನ್ ಸಬ್ ಯುನಿಟ್  ಲಸಿಕೆಯಾಗಿದೆ ಎಂದು, ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಇದನ್ನು ಹೈದರಾಬಾದ್ ಮೂಲದ  ಜೈವಿಕ-ಇ ಸಂಸ್ಥೆ ತಯಾರಿಸಿದೆ.  ಈಗ ಭಾರತದಲ್ಲಿ ಮೂರನೇ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅವರೂ ಟ್ವೀಟ್ ಮೂಲಕ ಹೇಳಿದ್ದಾರೆ. ಅಲ್ಲದೆ, ನ್ಯಾನೊಪರ್ಟಿಕಲ್ ಲಸಿಕೆ, COVOVAX ಅನ್ನು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (Serum institute of india) ತಯಾರಿಸುತ್ತದೆ ಎಂದು ಹೇಳಿದ್ದಾರೆ. 

 

ಕೋವಿಡ್ -19 ರ ವಯಸ್ಕ ರೋಗಿಗಳಿಗೆ ಮತ್ತು ರೋಗದಿಂದ ಹೆಚ್ಚಿನ ಅಪಾಯದಲ್ಲಿರುವವರ ಚಿಕಿತ್ಸೆಗಾಗಿ ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ ಆಂಟಿವೈರಲ್ ಔಷಧವಾದ ಮೊಲ್ನುಪಿರವಿರ್ (Molnupiravir) ಅನ್ನು ತಯಾರಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಈಗ ದೇಶದ 13 ಕಂಪನಿಗಳು ಈ ಔಷಧಿಯನ್ನು ತಯಾರಿಸುತ್ತಿದೆ ಎಂದು ಹೇಳಿದ್ದಾರೆ. 

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೇ ಮುಂದಾಳತ್ವ ವಹಿಸಿದ್ದಾರೆ ಎಂದು ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿದ್ದಾರೆ. ಈ ಎಲ್ಲಾ ಅನುಮೋದನೆಗಳು ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧ ಜಾಗತಿಕ ಹೋರಾಟವನ್ನು ಬಲಪಡಿಸುತ್ತದೆ. ನಮ್ಮ ಫಾರ್ಮಾ ಉದ್ಯಮಗಳು ಇಡೀ ಪ್ರಪಂಚದ ಆಸ್ತಿಗಳಾಗಿವೆ. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ ಎಂದಿದ್ದಾರೆ. 

 

ಇದನ್ನೂ ಓದಿ : Omicron Vs Delta: ಡೆಲ್ಟಾಗಿಂತ ಭಿನ್ನವಾಗಿರುವ ಓಮಿಕ್ರಾನ್‌ನ ನಾಲ್ಕು ಲಕ್ಷಣಗಳು

Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.Twitterನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
https://apple.co/3hEw2hyApple Link - 
https://bit.ly/3hDyh4GAndroid Link - 
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News