ಕೈ ಕಾಲುಗಳೆಲ್ಲಾ ತೆಳ್ಳಗಿದ್ದು ಹೊಟ್ಟೆಯ ಭಾಗದಲ್ಲಿ ಮಾತ್ರ ಕೊಬ್ಬು ಅಡಗಿದೆಯೇ? ಹಾಗಿದ್ದರೆ ಈ ಪಾನೀಯ ಸೇವಿಸಿ

Belly fat reducing tips:ಈ ಆರೋಗ್ಯ ಸಲಹೆಗಳು ನೇರವಾಗಿ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ. ಇವುಗಳನ್ನು ಬಳಸುವುದರಿಂದ ಖಂಡಿತವಾಗಿಯೂ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕಡಿಮೆಗೊಳಿಸುವುದು ಸಾಧ್ಯವಾಗುತ್ತದೆ. ಅಲ್ಲದೆ ಇವುಗಳ ಸೇವನೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಉಂಟು ಮಾಡುವುದಿಲ್ಲ.

Written by - Ranjitha R K | Last Updated : May 18, 2023, 09:22 AM IST
  • ಇತ್ತಿಚೀನ ದಿನಗಳಲ್ಲಿ ಬಹುತೇಕ ಮಂದಿಯದ್ದು ಒಂದೇ ಸಮಸ್ಯೆ.
  • ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಕೂಡಾ ಮಾಡಲಾಗುತ್ತದೆ.
  • ಹೊಟ್ಟೆಯ ಭಾಗದ ಕೊಬ್ಬು ಮಾತ್ರ ಅಂದುಕೊಂಡಷ್ಟು ಸುಲಭವಾಗಿ ಕರಗುವುದಿಲ್ಲ
ಕೈ ಕಾಲುಗಳೆಲ್ಲಾ ತೆಳ್ಳಗಿದ್ದು ಹೊಟ್ಟೆಯ ಭಾಗದಲ್ಲಿ ಮಾತ್ರ ಕೊಬ್ಬು ಅಡಗಿದೆಯೇ? ಹಾಗಿದ್ದರೆ ಈ ಪಾನೀಯ ಸೇವಿಸಿ  title=

Belly fat reducing tips : ಇತ್ತಿಚೀನ ದಿನಗಳಲ್ಲಿ ಬಹುತೇಕ ಮಂದಿಯದ್ದು ಒಂದೇ ಸಮಸ್ಯೆ. ಹೆಚ್ಚುತ್ತಿರುವ ದೇಹ ತೂಕ. ದೇಹ ತೂಕ ಇಳಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳನ್ನು ಕೂಡಾ ಮಾಡಲಾಗುತ್ತದೆ. ಆದರೆ ಅನೇಕ ಬಾರಿ ದೇಹದ ಎಲ್ಲಾ ಭಾಗಗಳ ಕೊಬ್ಬು ಕರಗಿದರೂ ಹೊಟ್ಟೆಯ ಭಾಗದ ಕೊಬ್ಬು ಮಾತ್ರ ಅಂದುಕೊಂಡಷ್ಟು ಸುಲಭವಾಗಿ ಕರಗುವುದಿಲ್ಲ. ಕೆಲವೊಮ್ಮೆ ಕೊಬ್ಬು ಕರಗಿಸಲು ಮಾಡುವ ಎಲ್ಲಾ ಪ್ರಯತ್ನಗಳೂ ವ್ಯರ್ಥ ಎಂದೆನಿಸಲು ಆರಂಭವಾಗುತ್ತದೆ. ಆದರೆ ವ್ಯಾಯಾಮದ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹ ಕೊಬ್ಬನ್ನು  ಸುಲಭವಾಗಿ ಕಳೆದುಕೊಳ್ಳಬಹುದು.  

ಈ ಭಾಗದ ಕೊಬನ್ನು ಕರಗಿಸಬೇಕೆ? : 
ಸ್ಥೂಲಕಾಯದ ವಿಷಯಕ್ಕೆ ಬಂದರೆ, ಅನೇಕರಿಗೆ ವಿಚಿತ್ರವಾದ ಸಮಸ್ಯೆ ಇರುತ್ತದೆ. ಅಂದರೆ, ಅನೇಕ ಜನರಲ್ಲಿ ದೇಹದ ಇತರ ಭಾಗಗಳು ತೆಳ್ಳಗೆ ಇರುತ್ತವೆ. ಆದರೆ, ಹೊಟ್ಟೆ ಮತ್ತು ಸೊಂಟದ ಭಾಗ ಮಾತ್ರ ವಿಚಿತ್ರವಾಗಿ ದಪ್ಪಗಿರುತ್ತದೆ. ಅನಾರೋಗ್ಯಕರ ಆಹಾರ ಸೇವನೆ ಕೂಡಾ ಇದಕ್ಕೆ ಕಾರಣವಾಗಿದೆ. ಇನ್ಸ್ಟಂಟ್ ಆಹಾರ ಸೇವನೆಯಿಂದ  ಹೊಟ್ಟೆಯ ಭಾಗ ದಪ್ಪಾಗಾಗಲು ಆರಂಭವಾಗುತ್ತದೆ. ಒಮ್ಮೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ. 

ಇದನ್ನೂ ಓದಿ : ನೀವು ಜಿಮ್‌ಗೆ ಹೋಗ್ತೀರಾ..? ಹಾಗಿದ್ರೆ, ನಿಮಗೆ ಈ 7 ಪ್ರಮುಖ ಅಂಶಗಳು ತಿಳಿದಿರಲೇಬೇಕು..!

ಇಲ್ಲಿ ಹೇಳಲಾದ ಕೆಲವು ಮನೆಮದ್ದುಗಳು ನಿಮ್ಮ ಹೊಟ್ಟೆಯಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಆರೋಗ್ಯ ಸಲಹೆಗಳು ನೇರವಾಗಿ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತವೆ. ಇವುಗಳನ್ನು ಬಳಸುವುದರಿಂದ ಖಂಡಿತವಾಗಿಯೂ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕಡಿಮೆಗೊಳಿಸುವುದು ಸಾಧ್ಯವಾಗುತ್ತದೆ. ಅಲ್ಲದೆ ಇವುಗಳ ಸೇವನೆ ಯಾವುದೇ ರೀತಿಯ ಅಡ್ಡ ಪರಿಣಾಮವನ್ನು ಉಂಟು ಮಾಡುವುದಿಲ್ಲ. ಹಾಗಿದ್ದರೆ ಈ ಕೊಬ್ಬು ನಷ್ಟಕ್ಕಾಗಿ ಇರುವ ಸಲಹೆಗಳು ಯಾವುವು? ಇವುಗಳನ್ನು ಬಳಸುವುದು ಹೇಗೆ ನೋಡೋಣ. 

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮನೆಮದ್ದುಗಳು:
ನೆಲ್ಲಿಕಾಯಿ ರಸ:
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೆಲ್ಲಿಕಾಯಿ ರಸವು ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ನೆಲ್ಲಿಕಾಯಿ ರಸವು ಹೊಟ್ಟೆಯ ಕೊಬ್ಬನ್ನು ಉತ್ತಮ ರೀತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ ರಸವನ್ನು ಹೊರತುಪಡಿಸಿ, ಅದರ ಉಪ್ಪಿನಕಾಯಿ ಕೂಡಾ ತೂಕ ನಷ್ಟಕ್ಕೆ ಅದ್ಭುತ ಆಯ್ಕೆಯಾಗಿದೆ.  

ಇದನ್ನೂ ಓದಿ : ಈ 3 ವಸ್ತುಗಳು ʼಸನ್ ಟ್ಯಾನಿಂಗ್ʼನ್ನು ತೆಗೆದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ..!

ಮೆಂತ್ಯೆ  :
ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಫೈಬರ್‌ನಲ್ಲಿ ಸಮೃದ್ಧವಾಗಿರುವ ಮೆಂತ್ಯೆಯನ್ನು ಖಂಡಿತವಾಗಿ ಸೇರಿಸಿಕೊಳ್ಳಬಹುದು. ಮೆಂತ್ಯೆಯನ್ನು  ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಈ ನೀರನ್ನು ಬಿಸಿ ಮಾಡಿ  ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಪ್ರತಿದಿನ ಈ ನೀರನ್ನು ಕುಡಿಯುತ್ತಾ ಬಂದರೆ ಹೊಟ್ಟೆ ಭಾಗದ ಕೊಬ್ಬು ಸುಲಭವಾಗಿ ಕರಗುವುದು. ಮಧುಮೇಹದಿಂದ ಬಳಲುತ್ತಿರುವವರಿಗೆ ಕೂಡಾ ಇದು ಪ್ರಯೋಜನಕಾರಿಯಾಗಿದೆ.

ನಿಂಬೆ ರಸ : 
ನಿಂಬೆ ರಸವನ್ನು ಸೇವಿಸುವುದು ಉಬ್ಬಿರುವ ಹೊಟ್ಟೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ನಿಂಬೆ ರಸವು ಚಯಾಪಚಯವನ್ನು ಸುಧಾರಿಸುತ್ತದೆ. ಕೊಬ್ಬನ್ನು ಕರಗಿಸುತ್ತದೆ. ಅದರಲ್ಲೂ ಹೊಟ್ಟೆಯ ಭಾಗದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ತ್ವರಿತ ಪರಿಣಾಮವನ್ನು  ಬೀರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಜೇನುತುಪ್ಪ ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯಿರಿ.  ಜೇನು ತುಪ್ಪ ಬೇಡ ಎಂದಾದರೆ ಕೇವಲ ನಿಂಬೆ ರಸವನ್ನು ಕೂಡಾ ಕುಡಿಯಬಹುದು. ತೂಕ ಇಳಿಸುವ ಪ್ರಯತ್ನಗಳಲ್ಲಿ ನಿಂಬೆ ರಸವು ಅತ್ಯಂತ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ : High Cholesterol ಅನ್ನು ಒಂದೇ ವಾರದಲ್ಲಿ ನಿಯಂತ್ರಿಸುತ್ತೆ ಈ ಆಹಾರಗಳು

 ಓಮ ಕಾಳಿನ ನೀರು :  
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಓಮ ಕಾಳಿನ ನೀರನ್ನು ತಯಾರಿಸಿ ಕುಡಿಯುತ್ತಿದ್ದರೆ, ಹೊಟ್ಟೆಯ ಗಾತ್ರದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಒಂದು ಚಮಚ ಓಮ ಕಾಳನ್ನು 3 ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರು 3 ಲೋಟದಿಂದ 2 ಲೋಟಕ್ಕೆ ಇಳಿಯುವವರೆಗೆ ಕುದಿಸಬೇಕು. ರಾತ್ರಿ ಊಟವಾದ ಅರ್ಧ ಗಂಟೆಯ ನಂತರ ಈ ನೀರನ್ನು ಕುಡಿಯಿರಿ ಮತ್ತು ಮರುದಿನ ಬೆಳಿಗ್ಗೆ ಉಳಿದ ನೀರನ್ನು ಕುಡಿಯಿರಿ.

ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ವ್ಯತ್ಯಾಸ ಕಾಣುವುದು. ಓಮ ಕಾಳಿನ ನೀರು ದೇಹದಲ್ಲಿ ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಕೊಬ್ಬನ್ನು ಕರಗಿಸುತ್ತದೆ ಮತ್ತು ದೇಹದ ತೂಕವನ್ನು ತ್ವರಿತವಾಗಿ ಮತ್ತು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಕಡಿಮೆ ಮಾಡುತ್ತದೆ. 

( ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.   )

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News