ಹಲ್ಲುಗಳ ಮೇಲೆ ಅಂಟಿ ಕುಳಿತಿರುವ ಹಳದಿ ಕಲೆಗಳನ್ನು ಹೋಗಲಾಡಿಸಬೇಕೇ ? ಈ ಹಣ್ಣುಗಳನ್ನು ಪ್ರಯತ್ನಿಸಿ

 ನೈಸರ್ಗಿಕವಾಗಿ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯಬೇಕೆಂದರೆ ನಿಮ್ಮ ಆಹಾರದಲ್ಲಿ ಈ ಕೆಳಗಿನ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು.

Written by - Ranjitha R K | Last Updated : Oct 12, 2023, 10:04 AM IST
  • ಹಳದಿ ಹಲ್ಲುಗಳು ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ.
  • ಹಳದಿ ಹಲ್ಲುಗಳನ್ನು ಬಿಳುಪುಗೊಳಿಸುವುದು ಹೇಗೆ?
  • ಹಲ್ಲುಗಳು ಮುತ್ತಿನಂತೆ ಹೊಳೆಯಬೇಕೆಂದರೆ ಈ ಹಣ್ಣುಗಳನ್ನು ಸೇವಿಸಿ
ಹಲ್ಲುಗಳ ಮೇಲೆ ಅಂಟಿ ಕುಳಿತಿರುವ ಹಳದಿ ಕಲೆಗಳನ್ನು ಹೋಗಲಾಡಿಸಬೇಕೇ ?  ಈ ಹಣ್ಣುಗಳನ್ನು ಪ್ರಯತ್ನಿಸಿ  title=

ಬೆಂಗಳೂರು : ಹಳದಿ ಹಲ್ಲುಗಳು  ಎಲ್ಲರೂ ಎದುರಿಸುವ ಸಾಮಾನ್ಯ ಸಮಸ್ಯೆಯಾಗಿದೆ.ಹಳದಿ ಹಲ್ಲುಗಳು ಖಂಡಿತವಾಗಿಯೂ ನಮ್ಮನ್ನು ಮುಜುಗರಕ್ಕೆ ಒಳಪಡಿಸುತ್ತದೆ.  ಹಲ್ಲುಗಳ ಮೇಲೆ ಈ ಹಳದಿ ಬಣ್ಣದ ಕಲೆಗಳು ದೀರ್ಘಕಾಲದವರೆಗೆ ಶೇಖರಣೆಯಾದರೆ ಹಲ್ಲು ಮತ್ತು ಒಸಡುಗಳಿಗೆ ಸಂಬಂಧಿಸಿದ ಅನೇಕ ರೋಗಗಳು ನಮ್ಮನ್ನು ಕಾಡಲು ಆರಂಭಿಸುತ್ತವೆ.  ಇನ್ನು ನಾವು ತಿನ್ನುವ ಆಹಾರ ಕೂಡಾ ಹಲ್ಲುಗಳ ಈ ಸಮಸ್ಯೆಗೆ ಕಾರಣವಾಗುತ್ತದೆ. 

ಹಳದಿ ಹಲ್ಲುಗಳನ್ನು ಬಿಳುಪುಗೊಳಿಸುವುದು ಹೇಗೆ? :
ಮಾರುಕಟ್ಟೆಯಲ್ಲಿ ಅನೇಕ ರೀತಿಯ ಟೂತ್‌ಪೇಸ್ಟ್‌ಗಳು ಮತ್ತು ಹಲ್ಲುಗಳನ್ನು ಬಿಳುಪುಗೊಳಿಸುವ ಉತ್ಪನ್ನಗಳು ಇವೆ. ಆದರೆ ಇವು ತುಂಬಾ ದುಬಾರಿಯಾಗಿರುತ್ತವೆ ಎನ್ನುವುದು ಕೂಡಾ ಸುಳ್ಳಲ್ಲ. ಇದರ ಜೊತೆ ಇವುಗಳು ಕೆಲವು ಅಡ್ಡಪರಿಣಾಮಗಳಿಗೂ ಕಾರಣವಾಗಬಹುದು. ಅವುಗಳು ನಿಮ್ಮ ಹಲ್ಲುಗಳು ಮತ್ತು ಒಸಡುಗಳನ್ನು ಗಂಭೀರವಾಗಿ ಹಾನಿಗೊಳಿಸುವಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ.

ಇದನ್ನೂ ಓದಿ : ಖಾಲಿ ಹೊಟ್ಟೆಯಲ್ಲಿ ನಿತ್ಯ ಒಂದು ಏಲಕ್ಕಿ ತಿಂದರೆ ಈ 4 ಆರೋಗ್ಯ ಸಮಸ್ಯೆಗಳಿಗೆ ಸಿಗುತ್ತೆ ಶಾಶ್ವತ ಪರಿಹಾರ

ಹಳದಿ ಹಲ್ಲುಗಳನ್ನು ಕ್ಲೀನ್ ಮಾಡಿ ಬಿಳುಪುಗೊಳಿಸಲು ದಂತವೈದ್ಯರ ಬಳಿಗೆ ಹೋಗಬಹುದು. ಆದರೆ ಅವರ ಶುಲ್ಕಗಳು ಬಹಳ ದುಬಾರಿಯಾಗಿರುತ್ತವೆ.  ಹಾಗಾಗಿ ನೈಸರ್ಗಿಕವಾಗಿ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯಬೇಕೆಂದರೆ ನಿಮ್ಮ ಆಹಾರದಲ್ಲಿ ಈ ಕೆಳಗಿನ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು.

ಸ್ಟ್ರಾಬೆರಿಗಳು :
NCBI ಯಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ಸ್ಟ್ರಾಬೆರಿಗಳು ಮ್ಯಾಲಿಕ್ ಆಮ್ಲವನ್ನು ಹೊಂದಿರುತ್ತವೆ. ಈ ಆಮ್ಲವು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದೆ ಎನ್ನಲಾಗಿದೆ.  ಇದು ಹಲ್ಲುಗಳ ಮೇಲೆ ಅಂಟಿಕೊಂಡಿರುವ ಈ ಹಳದಿ ಪದರವನ್ನು ಸಡಿಲಗೊಳಿಸುತ್ತದೆ. ಇನ್ನು,  ಮ್ಯಾಲಿಕ್ ಆಮ್ಲವು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಲಾಲಾರಸವು ಹಲ್ಲುಗಳ ಮೇಲಿನ ಆಹಾರ ಮತ್ತು ಪಾನೀಯಗಳ ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಅವುಗಳನ್ನು ಕೊಳೆಯದಂತೆ ರಕ್ಷಿಸುತ್ತದೆ.

ಕಲ್ಲಂಗಡಿ : 
ಕಲ್ಲಂಗಡಿ ಸ್ಟ್ರಾಬೆರಿಗಳಿಗಿಂತ ಹೆಚ್ಚು ಮ್ಯಾಲಿಕ್ ಆಮ್ಲವನ್ನು ಹೊಂದಿರುತ್ತದೆ. ಈ ಅಂಶವು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ- ಯೋಗಕ್ಷೇಮ ಕಾಪಾಡುವಲ್ಲಿ ಶಾಲೆಗಳ ಪಾತ್ರ

ಅನಾನಸ್:
ಹಳದಿ ಹಲ್ಲುಗಳನ್ನು ಮುತ್ತುಗಳಂತೆ ಹೊಳೆಯುವಂತೆ ಮಾಡಲು, ಅನಾನಸ್ ತಿನ್ನಬೇಕು. ಈ ಹಣ್ಣು ಹಲ್ಲುಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಇದು ಬ್ರೋಮೆಲೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವವನ್ನು ಹೊಂದಿರುತ್ತದೆ. ಇದು ಹಲ್ಲುಗಳ ಹಳದಿ ಪದರವನ್ನು ಒಡೆಯುವ ಕೆಲಸ ಮಾಡುತ್ತದೆ.

ಪಪ್ಪಾಯ:
ಅನಾನಸ್ ನಂತಹ ಪ್ರೋಟಿಯೋಲೈಟಿಕ್ ಕಿಣ್ವ ಹೊಂದಿರುವ ಪಪ್ಪಾಯ ಕೂಡಾ ಹಲ್ಲುಗಳಿಗೆ ಅತ್ಯುತ್ತಮ ಹಣ್ಣು. ಪಪ್ಪಾಯಿಯಲ್ಲಿರುವ ಕಿಣ್ವವನ್ನು ಪಪೈನ್ ಎಂದು ಕರೆಯಲಾಗುತ್ತದೆ. ಇದು ಹಲ್ಲುಗಳಿಗೆ ಹಾನಿ ಮಾಡುವ ಪ್ರೋಟೀನ್ ಅನ್ನು ತೆಗೆದುಹಾಕುತ್ತದೆ.

ಸೇಬು:
ಆಪಲ್ ಹಲ್ಲುಗಳನ್ನು ಸ್ವಚ್ಛಗೊಳಿಸುವುದು ಮತ್ತು ಬಲಪಡಿಸುವುದು ಸೇರಿದಂತೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ಹೊಂದಿದೆ. ಇದು ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತದೆ. ಇದು ಬಾಯಿಯಲ್ಲಿ ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಇದನ್ನೂ ಓದಿ : ಜೇನು ತುಪ್ಪದ ಜೊತೆ ಎರಡು ಲವಂಗವನ್ನು ಈ ರೀತಿ ಸೇವಿಸಿ ! ಒಣ ಕೆಮ್ಮು ತಕ್ಷಣ ಮಾಯವಾಗುವುದು

ಕಿತ್ತಳೆ:
ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ. ಇದು ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. 

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News