ಆಸಿಡಿಟಿ ಇದ್ದವರು ಪುದಿನಾವನ್ನು ಈ ರೀತಿ ಸೇವಿಸಿದರೆ ಒಂದೇ ದಿನದಲ್ಲಿ ಸಿಗುವುದು ಪರಿಹಾರ

Mint leaves for acidity: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಹೊಟ್ಟೆಯನ್ನು ತಂಪಾಗಿಸುತ್ತದೆ. 

Written by - Ranjitha R K | Last Updated : Aug 4, 2022, 02:59 PM IST
  • ನಮ್ಮಲ್ಲಿ ಅನೇಕರನ್ನು ಅಸಿಡಿಟಿ ಸಮಸ್ಯೆ ಕಾಡುತ್ತದೆ.
  • ಪ್ರತಿ ಬಾರಿ ಆಸಿಡಿಟಿಗೆ ಔಷಧಿ ತೆಗೆದುಕೊಳ್ಳುವುದು ಸಾಧ್ಯವಾಗುವುದಿಲ್ಲ
  • ಪುದಿನಾ ಆಸಿಡಿಟಿಗೆ ರಾಮಬಾಣ
 ಆಸಿಡಿಟಿ ಇದ್ದವರು ಪುದಿನಾವನ್ನು ಈ ರೀತಿ ಸೇವಿಸಿದರೆ ಒಂದೇ ದಿನದಲ್ಲಿ ಸಿಗುವುದು ಪರಿಹಾರ  title=
mint benefits in acidity

ಬೆಂಗಳೂರು : Mint leaves for acidity: ನಮ್ಮಲ್ಲಿ ಅನೇಕರನ್ನು ಅಸಿಡಿಟಿ  ಸಮಸ್ಯೆ ಕಾಡುತ್ತದೆ. ಬೇಗ ಬೇಗನೆ ತಿನ್ನುವುದು, ಅಸಮರ್ಪಕ ಆಹಾರ ಮತ್ತು ಕಳಪೆ ಜೀವನಶೈಲಿ ಮುಂತಾದ ನಮ್ಮ ಅಭ್ಯಾಸಗಳೇ ಆಮ್ಲೀಯತೆಗೆ ಕಾರಣವಾಗಿರುತ್ತದೆ. ಪ್ರತಿ ಬಾರಿ ಆಸಿಡಿಟಿಗೆ ಔಷಧಿ  ತೆಗೆದುಕೊಳ್ಳುವ ಬದಲು ಪುದೀನ ಎಲೆಗಳನ್ನು ಸೇವಿಸಬಹುದು.  ಹೌದು, ಔಷಧಿಗಳು ದೇಹದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ಆದರೆ ಪುದೀನಾವನ್ನು ಸೇವಿಸುವುದರಿಂದ ಯಾವುದೇ ಹಾನಿಯಾಗುವುದಿಲ್ಲ. ಹಲವಾರು ವಿಧಗಳಲ್ಲಿ ಪುದೀನ ಎಲೆಗಳನ್ನು ಸೇವಿಸಬಹುದು. ಇದು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿಯೂ ಸಹಾಯಕ.  

 ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಪುದೀನಾ ಎಲೆಗಳನ್ನು ಅಗಿಯಿರಿ :
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಇದು ಅಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಹೊಟ್ಟೆಯನ್ನು ತಂಪಾಗಿಸುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ, ಇದು ಸಾಂಕ್ರಾಮಿಕ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇದಲ್ಲದೆ, ಇದು ಹೊಟ್ಟೆಯ ಹುಳುಗಳನ್ನು ಸಹ ಕೊಲ್ಲುತ್ತದೆ ಮತ್ತು ಹಲ್ಲು ಮತ್ತು ಬಾಯಿಯ ಆರೋಗ್ಯವನ್ನು ಸಹ ಕಾಪಾಡುತ್ತದೆ. ಅಸಿಡಿಟಿ ಸಮಸ್ಯೆ ಇದ್ದರೆ, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪುದೀನಾ ಎಲೆಗಳನ್ನು ಅಗಿಯಬೇಕು.  

ಇದನ್ನೂ ಓದಿ : White Hair: ಬಿಪಿ ಜಾಸ್ತಿ ಇರುವವರ ತಲೆ ಕೂದಲು ಬೇಗನೆ ಬೆಳ್ಳಗಾಗುತ್ತವೆಯೇ? ಏನಿದೆ ಇದರ ನಡುವಿನ ಕನೆಕ್ಷನ್

2. ಪುದೀನಾ ಟೀ :
ಪುದೀನ ಎಲೆಗಳ ಚಹಾವು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ವಾಸ್ತವವಾಗಿ, ಪುದೀನಾ ಮೆಂಥಾಲ್ ಅನ್ನು ಹೊಂದಿರುತ್ತದೆ, ಇದು ಹೊಟ್ಟೆಯನ್ನು ತಂಪಾಗಿರಿಸುತ್ತದೆ ಮತ್ತು ದೇಹದ pH ಅನ್ನು ಸಮತೋಲನಗೊಳಿಸುತ್ತದೆ. ಇದಲ್ಲದೆ, ಪುದೀನ ಚಹಾವು ಚಯಾಪಚಯ ದರವನ್ನು ವೇಗಗೊಳಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಸಿಡಿಟಿ ಸಮಸ್ಯೆ ಇದ್ದರೆ, ಹಾಲಿನ ಚಹಾದ ಬದಲಿಗೆ, ಬೆಳಿಗ್ಗೆ ಪುದೀನ ಚಹಾ ಸೇವಿಸುವುದು ಒಳ್ಳೆಯದು. 

3. ಮಿಂಟ್ ಡ್ರಿಂಕ್ :
 ಆಸಿಡಿಟಿ ಇದ್ದಾಗ ಪುದೀನಾ ಪಾನೀಯವನ್ನು ಸೇವಿಸಬೇಕು.  ಪುದೀನಾ ಪಾನೀಯದ ಮೆಂಥಾಲ್ ತಕ್ಷಣವೇ ಆಮ್ಲೀಯತೆಯನ್ನು ಶಾಂತಗೊಳಿಸುತ್ತದೆ ಮತ್ತು ಎದೆಯುರಿ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೇ ಪುದೀನಾ ಪಾನೀಯವು ತೂಕ ಇಳಿಕೆಗೆ ಸಹಕಾರಿಯಾಗಿದೆ.  
 
 ಇದನ್ನೂ ಓದಿ : Dangerous Cooking Oils: ಈ ಎಣ್ಣೆಗಳ ಸೇವನೆಯಿಂದ ಕ್ಯಾನ್ಸರ್ ಬರುತ್ತೆ... ಇಂದೇ ಅಂತರ ಕಾಯ್ದುಕೊಳ್ಳಿ

4. ಪುದೀನಾ ಮಜ್ಜಿಗೆ :
ಪುದೀನ ಮಜ್ಜಿಗೆ ಆಮ್ಲೀಯತೆ ಮತ್ತು ತೂಕ ನಷ್ಟ ಎರಡಕ್ಕೂ ಪ್ರಯೋಜನಕಾರಿಯಾಗಿದೆ. ಪುದೀನಾ ಮಜ್ಜಿಗೆ ಮೊದಲು ಹೊಟ್ಟೆಯನ್ನು ತಂಪಾಗಿಸುತ್ತದೆ, ನಂತರ ಅದು ಆಮ್ಲೀಯತೆಯನ್ನು ತೆಗೆದುಹಾಕುತ್ತದೆ. ಪುದಿನಾ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ದವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು  ಸಹಾಯ ಮಾಡುತ್ತದೆ. 

5. ಪುದಿನಾ  ಒಮಕಾಳು ಚಟ್ನಿ:
ಪುದೀನಾ ಮತ್ತು ಒಮಕಾಳು ಚಟ್ನಿ ಜೀರ್ಣಕ್ರಿಯೆಗೆ ಸಹಕಾರಿ. ಇವು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ ಮತ್ತು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪುದೀನದ ವಿಶೇಷವೆಂದರೆ ಅದು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಚಯಾಪಚಯ ದರವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಆದ್ದರಿಂದ, ಗ್ಯಾಸ್ ಮತ್ತು ಅಜೀರ್ಣದ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ.  

 

 (ಸೂಚನೆ :ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News