Best Health Tips: ಕೂದಲು ಸೇರಿ ದೇಹದ ಅನೇಕ ಸಮಸ್ಯೆಗೆ ರಾಮಬಾಣ ಈ ಮುಳ್ಳುಹಣ್ಣಿನ ಎಣ್ಣೆ

Health Benefits Of Castor Oil: ಕ್ಯಾಸ್ಟರ್ ಆಯಿಲ್ ಕೂದಲಿನ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ. ಕೂದಲು ಉದುರುವಿಕೆ ಅಥವಾ ಬೋಳು ತಲೆಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಎಣ್ಣೆಯನ್ನು ತಮ್ಮ ನೆತ್ತಿಯ ಮೇಲೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಬಹುದು. ಇದು ಬೇರುಗಳಿಗೆ ಪೋಷಣೆಯನ್ನು ಒದಗಿಸುತ್ತದೆ ಜೊತೆಗೆ ಕೂದಲನ್ನು ಬಲಪಡಿಸಿ, ಬೆಳವಣಿಗೆಯನ್ನು ಸುಧಾರಿಸುತ್ತದೆ.

Written by - Bhavishya Shetty | Last Updated : Jan 14, 2023, 01:33 PM IST
    • ಕ್ಯಾಸ್ಟರ್ ಎಣ್ಣೆಯು ಮಾನವ ದೇಹಕ್ಕೆ ಬಹಳ ಪ್ರಯೋಜನಕಾರಿ
    • ಸಾಮಾನ್ಯವಾಗಿ ಕೂದಲು ಮಸಾಜ್‌ಗೆ ಬಳಸಲಾಗುತ್ತದೆ
    • ಆಯುರ್ವೇದದ ಕೊಡುಗೆ ಎಂದು ಕರೆದರೆ ಬಹುಶಃ ಅದು ತಪ್ಪಾಗುವುದಿಲ್ಲ
Best Health Tips: ಕೂದಲು ಸೇರಿ ದೇಹದ ಅನೇಕ ಸಮಸ್ಯೆಗೆ ರಾಮಬಾಣ ಈ ಮುಳ್ಳುಹಣ್ಣಿನ ಎಣ್ಣೆ title=
castor oil

Health Benefits Of Castor Oil: ಕ್ಯಾಸ್ಟರ್ ಬೀಜಗಳಿಂದ ತೆಗೆದ ಎಣ್ಣೆಯು ಮಾನವ ದೇಹಕ್ಕೆ ಬಹಳ ಪ್ರಯೋಜನಕಾರಿ. ಇದನ್ನು ಕ್ಯಾಸ್ಟರ್ ಆಯಿಲ್ ಎಂದೂ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಕೂದಲು ಮಸಾಜ್‌ಗೆ ಬಳಸಲಾಗುತ್ತದೆ. ಇದನ್ನು ಆಯುರ್ವೇದದ ಕೊಡುಗೆ ಎಂದು ಕರೆದರೆ ಬಹುಶಃ ಅದು ತಪ್ಪಾಗುವುದಿಲ್ಲ. ಕ್ಯಾಲ್ಸಿಯಂ, ಪ್ರೋಟೀನ್, ಕಾರ್ಬೋಹೈಡ್ರೇಟ್, ಕೊಬ್ಬಿನಾಮ್ಲ, ರಿಸಿನೋಲಿಕ್ ಆಮ್ಲ ಮತ್ತು ಲಿನೋಲಿಕ್ ಆಮ್ಲಗಳು ಇದರಲ್ಲಿ ಕಂಡುಬರುತ್ತವೆ. ಕ್ಯಾಸ್ಟರ್ ಆಯಿಲ್ ನಿಮಗೆ ಹೇಗೆ ಪ್ರಯೋಜನಕಾರಿ ಎಂದು ಈ ವರದಿು ಮೂಲಕ ತಿಳಿದುಕೊಳ್ಳೋಣ.

 ಇದನ್ನೂ ಓದಿ: Sperm Count : ಪುರುಷರೇ ನಿಮ್ಮ ವೀರ್ಯ ಸಂಖ್ಯೆ ಹೆಚ್ಚಳಕ್ಕೆ ಸೇವಿಸಿ ಖರ್ಜೂರ!

ಕ್ಯಾಸ್ಟರ್ ಆಯಿಲ್ ಪ್ರಯೋಜನಗಳು:

ಕ್ಯಾಸ್ಟರ್ ಆಯಿಲ್ ಕೂದಲಿನ ಬೆಳವಣಿಗೆಗೆ ಅತ್ಯಂತ ಪ್ರಯೋಜನಕಾರಿ. ಕೂದಲು ಉದುರುವಿಕೆ ಅಥವಾ ಬೋಳು ತಲೆಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಈ ಎಣ್ಣೆಯನ್ನು ತಮ್ಮ ನೆತ್ತಿಯ ಮೇಲೆ ಹಚ್ಚಿದರೆ ಕೆಲವೇ ದಿನಗಳಲ್ಲಿ ಫಲಿತಾಂಶ ಪಡೆಯಬಹುದು. ಇದು ಬೇರುಗಳಿಗೆ ಪೋಷಣೆಯನ್ನು ಒದಗಿಸುತ್ತದೆ ಜೊತೆಗೆ ಕೂದಲನ್ನು ಬಲಪಡಿಸಿ, ಬೆಳವಣಿಗೆಯನ್ನು ಸುಧಾರಿಸುತ್ತದೆ.

ಕೂದಲಿನಂತೆ, ಕ್ಯಾಸ್ಟರ್ ಆಯಿಲ್ ಚರ್ಮಕ್ಕೆ ಸಮಾನವಾಗಿ ಪ್ರಯೋಜನಕಾರಿಯಾಗಿದೆ. ಚರ್ಮದ ಕಾಯಿಲೆಗಳ ವಿರುದ್ಧ ಹೋರಾಡಲು ಕ್ಯಾಸ್ಟರ್ ಆಯಿಲ್ ತುಂಬಾ ಪರಿಣಾಮಕಾರಿಯಾಗಿದೆ. ಇದು ಚರ್ಮದ ಮೇಲಿರುವ ಕಲೆಗಳು, ಮೊಡವೆಗಳು ಮತ್ತು ಶುಷ್ಕತೆಯನ್ನು ತೊಡೆದು ಹಾಕುತ್ತದೆ. ಮಾತ್ರವಲ್ಲದೆ, ಚರ್ಮದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ಕ್ಯಾಸ್ಟರ್ ಆಯಿಲ್ ಸಹಾಯದಿಂದ ಮಲಬದ್ಧತೆಯಂತಹ ಹೊಟ್ಟೆಯ ಸಮಸ್ಯೆಗಳನ್ನು ತೆಗೆದುಹಾಕಬಹುದು. ಹೊಟ್ಟೆಯಲ್ಲಿ ತೊಂದರೆ ಉಂಟಾದಾಗ, ನೀವು ಆಯುರ್ವೇದ ವೈದ್ಯರ ಸಲಹೆಯ ಮೇರೆಗೆ ಈ ಎಣ್ಣೆಯನ್ನು ಕೊಂಚ ಕುಡಿಯಬಹುದು.

ಕ್ಯಾಸ್ಟರ್ ಆಯಿಲ್ ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ. ಕ್ಯಾಸ್ಟರ್ ಬೀಜಗಳಲ್ಲಿ ಇರುವ ರಿಸಿನೋಲಿಕ್ ಆಮ್ಲವು ಮುಟ್ಟಿನ ಸಮಯದಲ್ಲಿ ಪರಿಹಾರವನ್ನು ನೀಡುತ್ತದೆ. ಆದರೆ ತಜ್ಞರ ಸಲಹೆಯ ನಂತರವೇ ಅದನ್ನು ಬಳಸಿ.

 ಇದನ್ನೂ ಓದಿ:Cholesterol : ಕೊಲೆಸ್ಟ್ರಾಲ್ ಕರಗಿಸಲು ಪ್ರತಿದಿನ ಬೆಳಿಗ್ಗೆ ಈ ಹಣ್ಣು ಸೇವಿಸಿ!

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News