ಕಿಡ್ನಿ ಸಮಸ್ಯೆ ಇರುವವರಿಗೆ ರಾಮಬಾಣ ಈ ಸೋರೆಕಾಯಿ ಜ್ಯೂಸ್

Bottle Gourd Juice: ನಾರಿನಾಂಶಯುಕ್ತ ಸೋರೆಕಾಯಿಯಲ್ಲಿ ಕಬ್ಬಿಣ, ರಂಜಕ, ಪ್ರೊಟೀನ್, ಮೆಗ್ನೀಸಿಯಮ್ ಸೇರಿದಂತೆ ಇನ್ನೂ ಹಲವು ಪೋಷಕಾಂಶಗಳು ಸಮೃದ್ಧವಾಗಿದೆ. ಇದರ ಸೇವನೆಯು ಕಿಡ್ನಿಗಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಗಿದೆ. 

Written by - Yashaswini V | Last Updated : Sep 5, 2023, 03:51 PM IST
  • ಸೋರೆಕಾಯಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಇದು ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ.
  • ಅದರಲ್ಲೂ ಕಿಡ್ನಿ ಆರೋಗ್ಯಕ್ಕೆ ಬಾಟಲ್ ಸೋರೆಕಾಯಿ ಜ್ಯೂಸ್ ತುಂಬಾ ಪ್ರಯೋಜನಕಾರಿ ಆಗಿದ್ದು, ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ...
ಕಿಡ್ನಿ ಸಮಸ್ಯೆ ಇರುವವರಿಗೆ ರಾಮಬಾಣ ಈ ಸೋರೆಕಾಯಿ ಜ್ಯೂಸ್  title=

Bottle Gourd Juice: ಆರೋಗ್ಯವಂತರಾಗಿರಲು ದೇಹದ ಪ್ರತಿ ಅಂಗವೂ ಬಹಳ ಮುಖ್ಯ. ಅದರಲ್ಲೂ ಕಿಡ್ನಿ ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಅಂಗವಾಗಿದ್ದು ಆರೋಗ್ಯವಂತರಾಗಿರಲು ಕಿಡ್ನಿಗಳು ಆರೋಗ್ಯವಾಗಿರುವಂತೆ ಹೆಚ್ಚಿನ ಗಮನ ಹರಿಸಬೇಕು. ಇದಕ್ಕಾಗಿ ಕೆಲವು ಸೊಪ್ಪು, ತರಕಾರಿ, ಹಣ್ಣುಗಳು ಕೂಡ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ಅವುಗಳಲ್ಲಿ ಸೋರೆಕಾಯಿ ಕೂಡ ಒಂದು. 

ತಜ್ಞರ ಪ್ರಕಾರ, ಸೋರೆಕಾಯಿ ಜ್ಯೂಸ್ ತಯಾರಿಸಿ ಕುಡಿಯುವುದರಿಂದ  ಇದು ಮೂತ್ರಪಿಂಡವನ್ನು ಆರೋಗ್ಯಕರವಾಗಿಡಲು ಉಪಯುಕ್ತವಾಗಿದೆ ಎಂದು ಹೇಳಲಾಗುತ್ತದೆ. ಅದರಲ್ಲೂ ಕಿಡ್ನಿ ಆರೋಗ್ಯಕ್ಕೆ ಬಾಟಲ್ ಸೋರೆಕಾಯಿ ಜ್ಯೂಸ್ ತುಂಬಾ ಪ್ರಯೋಜನಕಾರಿ ಆಗಿದ್ದು, ಇದರ ಪ್ರಯೋಜನಗಳ ಬಗ್ಗೆ ತಿಳಿಯೋಣ... 

ಇದನ್ನೂ ಓದಿ- ಪಿರಿಯಡ್ಸ್ ಸಮಯದಲ್ಲಿ ಈ 3 ತರಕಾರಿ ತಿನ್ನಿ , ನೋವು ಬಾಧಿಸುವುದೇ ಇಲ್ಲ !

ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು: 
* ಆರೋಗ್ಯ ತಜ್ಞರ ಪ್ರಕಾರ, ನಿಯಮಿತವಾಗಿ ಬಾಟಲ್ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಬಹುದು. ಅರ್ಥಾತ್, ದೇಹವನ್ನು ನಿರ್ವಿಷಗೊಳಿಸಲು ಸೋರೆಕಾಯಿ ಜ್ಯೂ ತುಂಬಾ ಪ್ರಯೋಜನಕಾರಿ. 
*  ಸೋರೆಕಾಯಿ ರಸವು ಜೀರ್ಣಾಂಗ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. 
* ನಿಯಮಿತವಾಗಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಮಲಬದ್ಧತೆ, ಗ್ಯಾಸ್, ಅಸಿಡಿಟಿಯಂತಹ ಹಲವು ಸಮಸ್ಯೆಗಳಿಂದ ದೂರ ಉಳಿಯಬಹುದು. 

ಇದನ್ನೂ ಓದಿ- ದೇಹದಲ್ಲಿ ಈ ವಿಟಮಿನ್ ಕಡಿಮೆಯಾದರೆ ದೃಷ್ಟಿ ಕೂಡಾ ಮಂದವಾಗುವುದು !

* ಮೂತ್ರ ಪಿಂಡಗಳಿಗೆ ಸಂಬಂಧಿಸಿದಂತೆ ಸಮಸ್ಯೆ ಇರುವವರಿಗೂ ಸಹ ಸೋರೆಕಾಯಿ ಜ್ಯೂಸ್ ರಾಮಬಾಣವಿದ್ದಂತೆ ಎಂದು ಹೇಳಲಾಗುತ್ತದೆ. ನಿತ್ಯ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಇದು ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. 
* ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಈ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. 
* ಅಷ್ಟೇ ಅಲ್ಲ, ನಿಯಮಿತವಾಗಿ ಸೋರೆಕಾಯಿ ಜ್ಯೂಸ್ ಕುಡಿಯುವುದರಿಂದ ಮಧುಮೇಹವನ್ನು ಸಹ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News