Benefits of Falsa: ಬೇಸಿಗೆ ಕಾಲದಲ್ಲಿ ಸುಡು ಬಿಸಿಲಿದ್ದರೂ, ಈ ಸಂದರ್ಭದಲ್ಲಿ ದೊರಕುವಷ್ಟು ರುಚಿಕರವಾದ ಹಣ್ಣುಗಳು ಬೇರಾವ ಋತುವಿನಲ್ಲೂ ಸಿಗುವುದು ಕಡಿಮೆ. ಅಂತಹದ್ದೇ ಹಣ್ಣುಗಳಲ್ಲಿ ಫಾಲ್ಸಾ ಕೂಡ ಒಂದು. ಇದನ್ನು ಫುಲ್ಶಾ ಎಂದೂ ಸಹ ಕರೆಯುತ್ತಾರೆ, ಈ ಹಣ್ಣು ಆರೋಗ್ಯಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತದೆ.
ಇದನ್ನೂ ಓದಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ F34 5G ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್!
ಇದರ ವೈಜ್ಞಾನಿಕ ಹೆಸರು ಗ್ರೆವಿಯಾ ಏಷ್ಯಾಟಿಕಾ. ಇದು ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 1, ವಿಟಮಿನ್ ಬಿ 2, ವಿಟಮಿನ್ ಬಿ 3 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
ದೇಹಕ್ಕೆ ತಂಪು: ಬೇಸಿಗೆಯಲ್ಲಿ ಸಿಗುವ ಈ ಹಣ್ಣು ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ತಲೆತಿರುಗುವಿಕೆ, ವಾಕರಿಕೆ ಸಮಸ್ಯೆ ಇರುವುದಿಲ್ಲ. ಬೇಕಿದ್ದರೆ ಹಾಗೆಯೇ ತಿನ್ನಬಹುದು ಅಥವಾ ಅದರ ರಸ ತೆಗೆದು ಕುಡಿಯಬಹುದು.
ರಕ್ತ ಹೀನತೆ: ರಕ್ತಹೀನತೆಯಿಂದ ಬಳಲುತ್ತಿರುವ ಜನರಿಗೆ, ಫಾಲ್ಸಾ ಸೇವನೆಯು ಗಿಡಮೂಲಿಕೆಗಿಂತ ಕಡಿಮೆಯಿಲ್ಲ. ಇದನ್ನು ತಿನ್ನುವುದರಿಂದ ದೇಹದಲ್ಲಿನ ಕಬ್ಬಿಣಾಂಶದ ಕೊರತೆ ದೂರವಾಗುತ್ತದೆ. ಸುಸ್ತು, ತಲೆನೋವು, ತಲೆಸುತ್ತು ಮುಂತಾದ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ.
ಬ್ಲಡ್ ಶುಗರ್ ನಿಯಂತ್ರಣ: ಫಾಲ್ಸಾ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದು ಹೇರಳವಾದ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ, ಇದು ಹೆಚ್ಚಿದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣಕ್ಕೆ ತರುತ್ತದೆ.
ಹೃದಯಕ್ಕೆ ಪ್ರಯೋಜನಕಾರಿ: ಫಾಲ್ಸಾದಲ್ಲಿರುವ ಆಂಟಿ-ಆಕ್ಸಿಡೆಂಟ್’ಗಳು ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸಲು ಬಹಳ ಸಹಾಯಕವಾಗಿದೆ. ಇದರ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದಲ್ಲದೆ ಒಟ್ಟಾರೆ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕೂಡ ಕಂಡುಬರುತ್ತದೆ.
ಅತಿಸಾರ: ಫಾಲ್ಸಾವು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿರುವ ಕಾರಣ, ಇದು ಅತಿಸಾರದ ಸಮಸ್ಯೆಯಿಂದ ರಕ್ಷಿಸುತ್ತದೆ ಮಾತ್ರವಲ್ಲದೆ ಅದರಿಂದ ಪರಿಹಾರವನ್ನು ನೀಡುತ್ತದೆ. ಮಕ್ಕಳಾಗಲಿ, ದೊಡ್ಡವರಾಗಲಿ ಎಲ್ಲರೂ ಬೇಸಿಗೆಯಲ್ಲಿ ಈ ಹಣ್ಣನ್ನು ಸೇವಿಸಬಹುದು.
ಇದನ್ನೂ ಓದಿ: ಈ ಕ್ರಿಕೆಟಿಗನೇ ಟಿ20 ಕ್ರಿಕೆಟ್’ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ!
ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.