Dry Coconut Benefits : ರಾತ್ರಿ ಮಲಗುವ ಮುನ್ನ 1 ತುಂಡು ಒಣ ಕೊಬ್ಬರಿ ತಿನ್ನಿ : ಇದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು!

ರಾತ್ರಿ ಮಲಗುವ ಮುನ್ನ ಕೊಬ್ಬರಿ  ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

Written by - Channabasava A Kashinakunti | Last Updated : Jan 29, 2022, 04:38 PM IST
  • ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ.
  • ತೂಕ ಇಳಿಸಲು ಸಹಾಯ ಮಾಡುತ್ತದೆ.
  • ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ.
Dry Coconut Benefits : ರಾತ್ರಿ ಮಲಗುವ ಮುನ್ನ 1 ತುಂಡು ಒಣ ಕೊಬ್ಬರಿ ತಿನ್ನಿ : ಇದರಿಂದ ಆರೋಗ್ಯಕ್ಕಿದೆ ಅದ್ಭುತ ಪ್ರಯೋಜನಗಳು! title=

ನವದೆಹಲಿ : ಕೊಬ್ಬರಿ ಸೇವನೆಯಿಂದ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರ ಮಾಡಬಹುದು. ಪ್ರೋಟೀನ್ ಮತ್ತು ವಿಟಮಿನ್ ಸಿ ಜೊತೆಗೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಅನೇಕ ಖನಿಜಗಳನ್ನು ಹೊಂದಿರುತ್ತದೆ. ರಾತ್ರಿ ಮಲಗುವ ಮುನ್ನ ಕೊಬ್ಬರಿ  ತಿನ್ನುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೊತೆಗೆ ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ ಬಲವಾಗಿರುತ್ತದೆ

ಕೊಬ್ಬರಿ ಆರೋಗ್ಯಕರ ಕೊಬ್ಬುಗಳು, ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್ ಗುಣಗಳನ್ನು ಸಹ ಹೊಂದಿದೆ. ಇದರ ನಿಯಮಿತ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿಯೂ ಉತ್ತಮಗೊಳ್ಳುತ್ತದೆ.

ಇದನ್ನೂ ಓದಿ : Health Tips: ತೂಕ ನಷ್ಟಕ್ಕೆ ಈ ಕಷಾಯವನ್ನು ಕುಡಿಯಿರಿ, ಪರಿಣಾಮಕಾರಿ ದಿವ್ಯೌಷಧ

ತೂಕ ಇಳಿಕೆಗೆ ಸಹಾಯಕ

ಕೊಬ್ಬರಿ ಜೀವಸತ್ವಗಳು, ಖನಿಜಗಳು, ಕಾರ್ಬೋಹೈಡ್ರೇಟ್ಗಳು ಮತ್ತು ಪ್ರೋಟೀನ್ಗಳಲ್ಲಿ ಸಮೃದ್ಧವಾಗಿದೆ. ಮಲಗುವ ಮುನ್ನ ಕೊಬ್ಬರಿ ತಿನ್ನಿರಿ. ಇದರಲ್ಲಿರುವ ಫೈಬರ್ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಿಂದ ಹೊಟ್ಟೆಯ ಕೊಬ್ಬು ಕೂಡ ಕಡಿಮೆಯಾಗುತ್ತದೆ. ತೂಕವನ್ನು ಕಳೆದುಕೊಳ್ಳಲು ಕೊಬ್ಬರಿಯನ್ನು ನಿಯಮಿತವಾಗಿ ಸೇವಿಸಿ.

ಹೃದಯದ ಆರೋಗ್ಯಕ್ಕಾಗಿ

ರಾತ್ರಿ ಮಲಗುವ ಮುನ್ನ ಕೊಬ್ಬರಿ ತಿನ್ನುವುದು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದರಲ್ಲಿರುವ ಕೊಬ್ಬು ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಅನ್ನು ಸುಧಾರಿಸುತ್ತದೆ. ಇದು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಚೆನ್ನಾಗಿ ನಿದ್ದೆ ಬರಲು

ಮಲಗುವ ಮುನ್ನ ಹಸಿ ಕೊಬ್ಬರಿಯನ್ನು ಸೇವಿಸುವುದರಿಂದ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳೂ ದೂರವಾಗುತ್ತವೆ. ಇದು ಮಲಬದ್ಧತೆ ಸಮಸ್ಯೆಯನ್ನೂ ದೂರ ಮಾಡುತ್ತದೆ. ಕೊಬ್ಬರಿಯಲ್ಲಿರುವ ಹೆಚ್ಚಿನ ಫೈಬರ್ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.

ಇದನ್ನೂ ಓದಿ : Health Tips: ಸದಾ ‘ಯಂಗ್ ಅಂಡ್ ಎನರ್ಜಿಟಿಕ್’ ಆಗಿರಲು ಈ 5 ಆಹಾರ ಸೇವಿಸಿರಿ

ರಕ್ತ ಕಡಿಮೆಯಾಗುವುದನ್ನು ತಡೆಯುತ್ತದೆ

ರಕ್ತದ ಕೊರತೆಯಿಂದ ದೇಹದಲ್ಲಿನ ರಕ್ತಹೀನತೆಯ ಸಮಸ್ಯೆಯಲ್ಲೂ ಕೊಬ್ಬರಿ ಸೇವನೆಯು ನಿಮಗೆ ಪ್ರಯೋಜನವನ್ನು ನೀಡುತ್ತದೆ. ಒಣಗಿದ ಕೊಬ್ಬರಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News