ಬೆಂಗಳೂರು: ಬೇಸಿಗೆಯಲ್ಲಿ ಎಳನೀರು ಕುಡಿಯುವುದರ ಲಾಭಗಳ ಬಗ್ಗೆ ನೀವು ತುಂಬಾ ಕೇಳಿದ್ದೀರಿ. ನಿಮ್ಮ ಬೆಳಿಗ್ಗೆಯನ್ನು ಏಳನೀರಿನಿಂದ ಪ್ರಾರಂಭಿಸಿದರೆ, ಇದು ನಿಮ್ಮ ದೇಹವನ್ನು ದಿನವಿಡೀ ಶಕ್ತಿಯುತವಾಗಿಸುತ್ತದೆ ಮತ್ತು ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸುತ್ತದೆ. ಅನೇಕ ಜನರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ಎಳನೀರನ್ನು ಬಳಸುತ್ತಾರೆ. ನಮ್ಮ ದೇಹಕ್ಕೆ ಅಗತ್ಯವಿರುವ ಹೆಚ್ಚು ಅಂಶಗಳನ್ನು ಎಳನೀರು ಒಳಗೊಂಡಿರುತ್ತದೆ. ಪ್ರತಿ ತೆಂಗಿನಕಾಯಿಯಲ್ಲಿ 200ಮಿಲಿ ಅಥವಾ ಅದಕ್ಕಿಂತ ಹೆಚ್ಚು ಎಳನೀರನ್ನು ಹೊಂದಿದೆ. ಇದು ಕಡಿಮೆ ಕ್ಯಾಲೋರಿಯ ಪಾನೀಯವಾಗಿದೆ. ಎಳನೀರು ರೋಗನಿರೋಧಕಗಳು, ಅಮೈನೋ ಆಮ್ಲಗು, ಕಿಣ್ವಗಳು, ಬಿ-ಜೀವಸತ್ವಗಳು, ವಿಟಮಿನ್ ಸಿ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಎಳನೀರು ಉತ್ತಮ ಕಾರ್ಬೋಹೈಡ್ರೇಟ್ನ ಮೂಲ ಕೂಡ ಹೌದು. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಎಳನೀರನ್ನು ಕುಡಿಯುವುದರ ಬಗ್ಗೆ ನಿಮಗೆ ತಿಳಿದಿರದ ಕೆಲವು ಪ್ರಯೋಜನಗಳ ಬಗ್ಗೆ ಮತ್ತಷ್ಟು ಮಾಹಿತಿ.
ಎಳನೀರು ನಮ್ಮನ್ನು ನಿರ್ಜಲೀಕರಣ(Dehydration)ದಿಂದ ರಕ್ಷಣೆ
ಎಳನೀರು ಕಾರ್ಬೋಹೈಡ್ರೇಟ್ನ ಉತ್ತಮ ಮೂಲವಾಗಿದೆ, ಇದು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇತರ ಹೊಟ್ಟೆಯ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಎಳನೀರಿಗೆ ನಿಂಬೆ ರಸ ಸೇರಿಸಿ ಸೇವಿಸುವುದರಿಂದ Dehydration ಸಮಸ್ಯೆಯಿಂದ ದೂರವಿರಬಹುದು.
ತೂಕ ನಷ್ಟ ಮಾಡಲು ಸಹಾಯಕ
ಬೆಳಗಿನ ವ್ಯಾಯಾಮದ ನಂತರ ಎಳನೀರು ಸೇವನೆ ಪ್ರಯೋಜನಕಾರಿಯಾಗಿದೆ. ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಜೊತೆಗೆ ಇದರಲ್ಲಿರುವ ಜೈವಿಕ ಕಿಣ್ವಗಳು ದೇಹದಲ್ಲಿ ಬೇಡವಾದ ಕೊಬ್ಬನ್ನು ಕರಗಿಸುತ್ತದೆ. ಹಾಗಾಗಿ ಇದು ತೂಕ ಕಡಿಮೆ ಮಾಡಲು ಸಹಾಯಕವಾಗಿದೆ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು
ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಎಳನೀರನ್ನು ಬಳಸಲಾಗುತ್ತದೆ. ಇದು ಒಳಗೊಂಡಿರುವ ವಿಟಮಿನ್ ಸಿ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ಗಳು ರಕ್ತದಲ್ಲಿನ ಒತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕವಾಗಿವೆ.
ತಲೆನೋವಿಗೆ ಪರಿಹಾರ
ಹೆಚ್ಚಿನ ತಲೆನೋವು ಅಥವಾ ಮೈಗ್ರೇನ್ಗೆ ಸಂಬಂಧಿಸಿದ ತೊಂದರೆಗಳು ನಿರ್ಜಲೀಕರಣದ ಕಾರಣದಿಂದಾಗಿರುತ್ತವೆ. ಈ ಸಮಯದಲ್ಲಿ, ಎಳನೀರು ದೇಹಕ್ಕೆ ಅಗತ್ಯವಿರುವ ಎಲೆಕ್ತ್ರೋಲೈಟ್ಸ್ ಅನ್ನು ಪೂರೈಸುತ್ತದೆ ಮತ್ತು ದೇಹದಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಎಳನೀರಿನಲ್ಲಿ ಸಾಕಷ್ಟು ಮೆಗ್ನೀಸಿಯಂ ಕಂಡುಬರುತ್ತದೆ. ಮೆಗ್ನೀಸಿಯಂ ಕೊರತೆ ಮೈಗ್ರೇನ್ ತಲೆನೋವಿಗೆ ಕಾರಣವಾಗಿದ್ದು, ದೇಹದಲ್ಲಿ ಮೆಗ್ನೀಸಿಯಂ ಮಟ್ಟವನ್ನು ಸುಧಾರಿಸಲು ಎಳನೀರು ಸಹಾಯಕವಾಗುತ್ತದೆ. ಇದರಿಂದ ತಲೆನೋವಿನ ಸಮಸ್ಯೆ ಕಡಿಮೆಯಾಗುತ್ತದೆ.
ಇದೆಲ್ಲದರ ಜೊತೆಗೆ ಎಳನೀರು ಸೇವನೆಯಿಂದ ದೇಹದ ಆಯಾಸ ಕಡಿಮೆಯಾಗುತ್ತದೆ.