ಬೆಂಗಳೂರು : ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಅದು ಹಾಗೆಯೇ ನಮ್ಮ ಗಮನಕ್ಕೆ ಬರುವುದಿಲ್ಲ.ಇದಕ್ಕಾಗಿ ರಕ್ತ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.ಆರಂಭದಲ್ಲಿಯೇ ಮಧುಮೇಹ ಇರುವುದು ಗೊತ್ತಾದರೆ ಅದರ ನಿಯಂತ್ರಣ ಸುಲಭ. ಇಲ್ಲವಾದರೆ ಎಲ್ಲಾ ರೀತಿಯ ಪಥ್ಯ ಮಾಡಬೇಕಾಗುತ್ತದೆ. ಇನ್ನು ಮಧುಮೇಹ ಇದ್ದಾಗ ಆಹಾರ ಪದಾರ್ಥಗಳ ಪಥ್ಯ ಮಾಡದೇ ಹೋದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಜಾಸ್ತಿಯಾಗುತ್ತಾ ಹೋಗುತ್ತದೆ. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ದೇಹ ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ.ನಾವು ಅದನ್ನು ಗಮನಿಸಬೇಕು ಅಷ್ಟೇ. ನಿರ್ಲಕ್ಷ್ಯ ತೋರಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಮಧುಮೇಹ ಇದ್ದಾಗ ಕಾಣಿಸಿಕೊಳ್ಳುವ ಲಕ್ಷಣಗಳು :
ಚರ್ಮದ ಕಪ್ಪಾಗುವುದು :
ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ, ಇನ್ಸುಲಿನ್ ಪ್ರತಿರೋಧದಿಂದಾಗಿ ದೇಹದ ಅನೇಕ ಭಾಗಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅದರಲ್ಲಿಯೂ ಕುತ್ತಿಗೆಯ ಸುತ್ತ, ಕಣ್ಣುಗಳ ಕೆಳಗೆ ಮತ್ತು ತೋಳುಗಳ ಕೆಳಗೆ ಕಡು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಾದಾಗ ಅಸಡ್ಡೆ ತೋರುವುದು ಸರಿಯಲ್ಲ.
ಇದನ್ನೂ ಓದಿ :Diabetes ರೋಗಿಗಳ ಗಾಯ ವಾಸಿಯಾಗಲು ಏಕೆ ಸಮಯ ಬೇಕಾಗುತ್ತದೆ? ಹೇಗೆ ತಪ್ಪಿಸಿಕೊಳ್ಳಬೇಕು?
ಕಣ್ಣಿನ ದೃಷ್ಟಿ ಮಂದವಾಗುತ್ತದೆ :
ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಅದರ ನೇರ ಪರಿಣಾಮ ಕಣ್ಣುಗಳ ಮೇಲೆ ಬೀಳುತ್ತದೆ. ಅಂದರೆ ದೃಷ್ಟಿ ಮಂಜಾಗುತ್ತದೆ. ಎಲ್ಲವೂ ಮಬ್ಬು ಮಬ್ಬಾಗಿ ಕಾಣಿಸುತ್ತದೆ.
ಕೈ ಕಾಲುಗಳು ಜುಮ್ಮೆನ್ನುವುದು :
ಕೈ ಕಾಲುಗಳ ಮರಗಟ್ಟುವುದು, ಇದ್ದಕ್ಕಿದ್ದಂತೆ ಬಲ ಇಲ್ಲದ ಹಾಗೆ ಆಗುವುದು ಮಧುಮೇಹದ ಆರಂಭಿಕ ಲಕ್ಷಣವಾಗಿದೆ. ಏಕೆಂದರೆ ಈ ಕಾಯಿಲೆಯಲ್ಲಿ ದೇಹದ ನರಗಳು ದುರ್ಬಲಗೊಳ್ಳುತ್ತವೆ. ರಕ್ತವು ರಕ್ತನಾಳಗಳ ಮೂಲಕ ದೇಹದ ಭಾಗಗಳಿಗೆ ಸರಿಯಾಗಿ ಹರಿಯದಿದ್ದಾಗ ಕೈ ಕಾಲು ಮರಗಟ್ಟಲು ಆರಂಭವಾಗುತ್ತದೆ.
ಇದನ್ನೂ ಓದಿ : ಮಧುಮೇಹ ನಿಯಂತ್ರಣಕ್ಕೆ ಈ ಪುಟ್ಟ ಹಣ್ಣು ಸಾಕು ! ಯಾವ ಹೊತ್ತಾಲ್ಲಾದರೂ ಸರಿ ದಿನಕ್ಕೊಮ್ಮೆ ಸೇವಿಸಿ !
ಮೂತ್ರಪಿಂಡದ ತೊಂದರೆಗಳು:
ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಮಧುಮೇಹವೂ ಪ್ರಮುಖ ಕಾರಣವಾಗಿದೆ.ಹೆಚ್ಚಿನ ಸಕ್ಕರೆಯಿಂದಾಗಿ, ಮೂತ್ರಪಿಂಡದ ಕಾರ್ಯವು ಹದಗೆಡುತ್ತದೆ.ಇದರ ಪರಿಣಾಮ ಪದೇ ಪದೇ ಮೂತ್ರವಿಸರ್ಜನೆ, ಪಾದದಲ್ಲಿ ಊತ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗಬಹುದು.
ಒಸಡುಗಳಲ್ಲಿ ರಕ್ತಸ್ರಾವ :
ಮಧುಮೇಹದ ಆರಂಭಿಕ ರೋಗಲಕ್ಷಣಗಳಲ್ಲಿ ಒಸಡುಗಳಲ್ಲಿ ರಕ್ತಸ್ರಾವ, ಬಾಯಿಯ ದುರ್ವಾಸನೆ, ಸಡಿಲವಾದ ಹಲ್ಲುಗಳು ಹೀಗೆ ಒರಲ್ ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು.
ಇದನ್ನೂ ಓದಿ : ಈ ಆಹಾರಗಳನ್ನು ಫ್ರಿಜ್ ನಲ್ಲಿಟ್ಟರೆಯೇ ಕೆಡುತ್ತದೆ ! ನೀವೂ ಈ ವಸ್ತುಗಳಿಗಾಗಿ ರೆಫ್ರಿಜರೇಟರ್ ಬಳಸುತ್ತೀರಾ ?
ಗಾಯ ತಡವಾಗಿ ಗುಣವಾಗುವುದು :
ನಿಮ್ಮ ದೇಹದಲ್ಲಿ ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ, ಗಾಯಗಳು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.ಈ ಸೂಚನೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಏಕೆಂದರೆ ಇದು ಗಾಯವನ್ನು ಇನ್ನಷ್ಟು ಹದಗೆಡಿಸಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಇವುಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. Zee KANNADA NEWS ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ