ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದಲೇ ಒತ್ತಡ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ

ಬಿಡುವಿಲ್ಲದ ಜೀವನ ಶೈಲಿಯಲ್ಲಿ ಒತ್ತಡವು ಬಹುತೇಕ ಜನರ ಜೀವನದ ಭಾಗವಾಗಿಬಿಟ್ಟಿದೆ. ಆದರೆ, ಇದನ್ನು ನಿಯಂತ್ರಿಸದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಬಹುದು. ಇದನ್ನು ತಪ್ಪಿಸಲು ನಿಮ್ಮ ಆಹಾರ ಪದ್ದತಿಯ ಬಗ್ಗೆ ಸರಿಯಾದ ಗಮನಹರಿಸುವುದು ಬಹಳ ಮುಖ್ಯ. 

Written by - Yashaswini V | Last Updated : Mar 6, 2023, 12:08 PM IST
  • ಆಹಾರ ಎಂಬುದು ಕೇವಲ ನಮ್ಮ ದೇಹಕ್ಕೆ ಅಗತ್ಯ ಪೌಷ್ಠಿಕಾಂಶವನ್ನು ಒದಗಿಸುವ ಮೂಲವಲ್ಲ.
  • ಇದು ನಮ್ಮ ಮನಸ್ಸು, ಭಾವನೆಗಳ ಮೇಲೂ ಕೂಡ ನೇರವಾಗಿ ಪರಿಣಾಮ ಬೀರುತ್ತದೆ.
  • ದಿನ ನಿತ್ಯ ತಪ್ಪಾದ ಆಹಾರಗಳ ಸೇವನೆಯು ಒತ್ತಡ, ಆತಂಕವನ್ನು ಉಂಟುಮಾಡಬಹುದು.
ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದಲೇ ಒತ್ತಡ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ  title=
ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದಲೇ ಒತ್ತಡ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ

ಬೆಂಗಳೂರು: ಪ್ರಸ್ತುತ, ಬಿಡುವಿಲ್ಲದ ಜೀವನಶೈಲಿಯಿಂದಾಗಿ ಉಂಟಾಗುವ ಒತ್ತಡದಿಂದ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಒತ್ತಡಕ್ಕೆ ಹಲವು ಕಾರಣಗಳಿದ್ದರೂ ಕೂಡ ನಾವು ಸೇವಿಸುವ ಆಹಾರವು ನಮ್ಮ ಒತ್ತಡವನ್ನು ನಿಯಂತ್ರಿಸಬಲ್ಲದು. ತಜ್ಞರ ಪ್ರಕಾರ, ಕೆಲವು ಆಹಾರಗಳನ್ನು ತ್ಯಜಿಸುವುದರಿಂದ ಒತ್ತಡ, ಬಿಪಿಯಂತಹ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.

ತಜ್ಞರ ಪ್ರಕಾರ, ಆಹಾರ ಎಂಬುದು ಕೇವಲ ನಮ್ಮ ದೇಹಕ್ಕೆ ಅಗತ್ಯ ಪೌಷ್ಠಿಕಾಂಶವನ್ನು ಒದಗಿಸುವ ಮೂಲವಲ್ಲ. ಇದು ನಮ್ಮ ಮನಸ್ಸು, ಭಾವನೆಗಳ ಮೇಲೂ ಕೂಡ ನೇರವಾಗಿ ಪರಿಣಾಮ ಬೀರುತ್ತದೆ. ದಿನ ನಿತ್ಯ ತಪ್ಪಾದ ಆಹಾರಗಳ ಸೇವನೆಯು ಒತ್ತಡ, ಆತಂಕವನ್ನು ಉಂಟುಮಾಡಬಹುದು. ಮಾತ್ರವಲ್ಲ, ಇದು ಮಾನಸಿಕ ಅಶಾಂತಿಗೂ ಕಾರಣವಾಗಬಹುದು. ಕಳಪೆ ಆಹಾರ ಪದ್ದತಿಯಿಂದಲೇ ಕೆಲವರು ಎಷ್ಟೇ ಪ್ರಯತ್ನಿಸಿದರೂ ಕೂಡ ಬಿಪಿ, ಒತ್ತಡದಂತಹ ಸಮಸ್ಯೆಗಳನ್ನು ನಿಯಂತ್ರಿಸಲಾಗದೆ ಪರಿತಪಿಸುತ್ತಾರೆ. ನಿಮಗೂ ಈ ಸಮಸ್ಯೆ ಕಾಡುತ್ತಿದ್ದರೆ ಉಪ್ಪು ಸೇರಿದಂತೆ ಕೆಲವು ಆಹಾರಗಳಿಂದ ದೂರ ಉಳಿಯುವುದು ತುಂಬಾ ಅವಶ್ಯಕ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...

ಉತ್ತಮ ಆರೋಗ್ಯಕ್ಕಾಗಿ ಇಂದಿನಿಂದಲೇ ಒತ್ತಡ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ:-
* ಕೆಫೀನ್ ಉತ್ಪನ್ನಗಳು:

ಕೆಫೀನ್ ಉತ್ಪನ್ನಗಳಾದ  ಕಾಫಿ, ಟೀ, ಚಾಕೊಲೇಟ್ ಮತ್ತು ಕೆಲವು ತಂಪು ಪಾನೀಯಗಳು ಆ ಕ್ಷಣಕ್ಕೆ ಆಹ್ಲಾದಕರ ಅನುಭವವನ್ನು ನೀಡುತ್ತವೆ. ಆದರೂ, ಇವು ಬೆವರುವಿಕೆ ಮತ್ತು ನಡುಗುವಿಕೆಯಂತಹ ಒತ್ತಡದ ದೈಹಿಕ ಲಕ್ಷಣಗಳನ್ನು ಹೆಚ್ಚಿಸುತ್ತದೆ. ಕಾಲಾನಂತರದಲ್ಲಿ ಇದು ನಿದ್ರಾಹೀನತೆ ಸಮಸ್ಯೆಗೂ ಕೂಡ ಕಾರಣವಾಗಬಹುದು. 

ಇದನ್ನೂ ಓದಿ- ಬೇಸಿಗೆಯಲ್ಲಿ ಹೊಟ್ಟೆಯ ಕೊಬ್ಬನ್ನು ಕರಗಿಸಬಲ್ಲ 7 ಚಮತ್ಕಾರಿ ಪಾನೀಯಗಳಿವು

* ಪಾಶ್ಚರೀಕರಿಸಿದ ಆಹಾರ:
ಈ ಬಿಡುವಿಲ್ಲದ ಜೀವನಶೈಲಿಯಲ್ಲಿ ಕೆಲವರಲ್ಲಿ ತಾಜಾ ಆಹಾರ ತಯಾರಿಸುವಷ್ಟು ಕೂಡ ತಾಳ್ಮೆ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಹೆಚ್ಚು ಹೆಚ್ಚು ಪಾಶ್ಚರೀಕರಿಸಿದ ಅಂದರೆ ಪ್ಯಾಕ್ ಮಾಡಿದ ಆಹಾರಗಳ ಮೊರೆ ಹೋಗುತ್ತಾರೆ. ಇಂತಹ ಆಹಾರಗಳಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳು ಹೆಚ್ಚಾಗಿ ಕಂಡು ಬರುವುದರಿಂದ ಇವು ತೂಕ ಹೆಚ್ಚಳದ ಜೊತೆಗೆ ರಕ್ತದೊತ್ತಡ, ಹೃದ್ರೋಗ ಮತ್ತು ಮಧುಮೇಹದಂತಹ ಸಮಸ್ಯೆಗಳನ್ನು ಕೂಡ ಹೆಚ್ಚಿಸಬಹುದು. ಹಾಗಾಗಿ, ಇಂತಹ ಆಹಾರಗಳಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಿ.

* ಡೈರಿ ಉತ್ಪನ್ನಗಳು:
ಉತ್ತಮ ಆರೋಗ್ಯಕ್ಕೆ ಡೈರಿ ಉತ್ಪನ್ನಗಳು ಸಹ ಅಗತ್ಯ. ಆದರೆ, ಇವುಗಳ ಅತಿಯಾದ ಸೇವನೆಯು ಜೀರ್ಣಕಾರಿ ಸಮಸ್ಯೆಗಳು, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಾತ್ರವಲ್ಲ, ಇಡುವ ಒತ್ತಡ ಮತ್ತು ಆತಂಕದ ಭಾವನೆಗಳಿಗೆ ಕೂಡ ಕಾರಣವಾಗಬಹುದು. ಇದನ್ನು ತಪ್ಪಿಸಲು ಅತಿಯಾದ ಡೈರಿ ಉತ್ಪನ್ನಗಳ ಬಳಕೆಯನ್ನು ತಪ್ಪಿಸಿ.

ಇದನ್ನೂ ಓದಿ- ಬೇಸಿಗೆಯಲ್ಲಿ ಉದರದ ಆರೋಗ್ಯ ವೃದ್ದಿಗೆ ಈ ಪಾನೀಯಗಳನ್ನು ಸೇವಿಸಿ

* ಸಿಹಿ ಆಹಾರಗಳು:
ಒತ್ತಡದಲ್ಲಿದ್ದಾಗ, ನಮ್ಮ ದೇಹವು ಹಾರ್ಮೋನ್ ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇಂತಹ ಸಂದರ್ಭದಲ್ಲಿ ಸಿಹಿ ಆಹಾರಗಳನ್ನು ಸೇವಿಸುವುದರಿಂದ ಬ್ಲಡ್ ಶುಗರ್ ಲೆವೆಲ್ ಕೂಡ ಹೆಚ್ಚಾಗಬಹುದು. ಹಾಗಾಗಿ ಒತ್ತಡ ಹೆಚ್ಚಿರುವವರು ಸಿಹಿ ಪದಾರ್ಥಗಳ ಸೇವನೆಯನ್ನು ತ್ಯಜಿಸಿದರೆ ಒಳಿತು ಎನ್ನುತ್ತಾರೆ ತಜ್ಞರು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News