Alert ! ಚಮಚೆ ಬಳಸಿ ಊಟ ಮಾಡುವವರಿಗೊಂದು ಎಚ್ಚರಿಕೆ! ಈ ಅಪಾಯ ಕಟ್ಟಿಟ್ಟ ಬುತ್ತಿ

Benefits Of Eating Food With Hands: ಭಾರತವಲ್ಲದೆ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳ ಜನರು ಕೂಡ ಊಟಮಾಡಲು ತಮ್ಮ ಕೈಗಳನ್ನು ಬಳಸುತ್ತಾರೆ. ಇದೇ ವೇಳೆ ನಿರಂತರವಾಗಿ ಚಮಚದೊಂದಿಗೆ ಆಹಾರವನ್ನು ತಿನ್ನುವವರ ಪಾಲಿಗೆ ಅಹಿತಕರ ಸುದ್ದಿಯೊಂದು ಪ್ರಕಟವಾಗಿದೆ.  

Written by - Nitin Tabib | Last Updated : May 6, 2023, 08:58 PM IST
  • ಆಯುರ್ವೇದ ಮತ್ತು ಹಳೆಯ ಭಾರತೀಯ ಸಂಪ್ರದಾಯಗಳಲ್ಲಿ ಕೈಯಿಂದ ಆಹಾರವನ್ನು ತಿನ್ನುವ ಉಲ್ಲೇಖವಿದೆ.
  • 5 ಬೆರಳುಗಳು ಐದು ಅಂಶಗಳನ್ನು ಪ್ರತಿನಿಧಿಸುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ,
  • ಅದರಲ್ಲಿ ಹೆಬ್ಬೆರಳು ಬೆಂಕಿ, ತೋರುಬೆರಳು ಗಾಳಿ, ಮಧ್ಯದ ಬೆರಳು ಆಕಾಶ, ಉಂಗುರ ಬೆರಳು ಭೂಮಿ ಮತ್ತು ಕಿರುಬೆರಳು ನೀರು ಪ್ರತಿನಿಡಿಸುತ್ತದೆ.
Alert ! ಚಮಚೆ ಬಳಸಿ ಊಟ ಮಾಡುವವರಿಗೊಂದು ಎಚ್ಚರಿಕೆ! ಈ ಅಪಾಯ ಕಟ್ಟಿಟ್ಟ ಬುತ್ತಿ title=
ಚಮಚೆಯಿಂದ ಊಟಮಾಡುವುದರ ಅನಾನುಕೂಲತೆಗಳು!

Benefits Of Eating Food With Hands: ವೇಗವಾಗಿ ಬದಲಾಗುತ್ತಿರುವ ಇಂದಿನ ಸಂಸ್ಕೃತಿ ಹಾಗೂ ಜೀವನಶೈಲಿಯಿಂದ ನಮ್ಮ ದಿನನಿತ್ಯದ ಹಲವಾರು ಅಭ್ಯಾಸಗಳು ಬದಲಾಗುತ್ತಿವೆ. ಇದನ್ನು ಒಂದು ಸಣ್ಣ ಉದಾಹರಣೆಯೊಂದಿಗೆ ನಾವು ವಿವರಿಸಬಹುದು, ಹಿಂದಿನ ಕಾಲದಲ್ಲಿ ಅಷ್ಟೇ ಯಾಕೆ ಇತ್ತೀಚಿನ ಕೆಲ ವರ್ಷಗಳ ಹಿಂದೆ ಮತ್ತು ಇಂದಿಗೂ ಕೂಡ ಕೆಲ ಜನರು ಆಹಾರವನ್ನು ಕೈಯಿಂದ ತಿನ್ನುತ್ತಾರೆ.  ಆದರೆ ಇದು ಬಹುತೇಕರ ಮನೆಯಲ್ಲಿ ಚಮಚವು ಕೈಯ ಸ್ಥಾನವನ್ನು ಸ್ಥಾನವನ್ನು ಪಡೆದುಕೊಂಡಿದೆ. ಚಮಚದೊಂದಿಗೆ ಆಹಾರವನ್ನು ತಿನ್ನುವಲ್ಲಿ ಮತ್ತು ಕೈಗಳಿಂದ ಆಹಾರವನ್ನು ತಿನ್ನುವಲ್ಲಿ ಯಾವ ವಿಧಾನವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬ ಅಂಶದ ಬಗ್ಗೆ ಆಗಾಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಕೈಯಿಂದ ಆಹಾರ ತಿನ್ನಲು ಆಗುವುದಿಲ್ಲ ಎಂಬ ಬದಲಾವಣೆ ಚಮಚದಲ್ಲಿ ತಿನ್ನುವ ಅನೇಕ ಜನರ ರೂಢಿಗೆ ಬಂದಿದೆ.

ಈ ದೇಶಗಳಲ್ಲಿ ಜನರು ಕೈಯಿಂದ ತಿನ್ನುತ್ತಾರೆ
ಭಾರತವಲ್ಲದೆ, ನೇಪಾಳ, ಶ್ರೀಲಂಕಾ, ಪಾಕಿಸ್ತಾನ, ಮಲೇಷ್ಯಾ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ಜನರು ತಮ್ಮ ಕೈಗಳಿಂದ ಆಹಾರವನ್ನು ಸೇವಿಸುತ್ತಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಕೈಯಿಂದ ಆಹಾರವನ್ನು ತಿನ್ನುವ ತನಕ, ಆಹಾರದ ರುಚಿ ಬರುವುದಿಲ್ಲ ಎಂದು ಹಲವರು ಹೇಳುವುದನ್ನು ನೀವು ಕೇಳಿರಬಹುದು. ಯಾರು ಚಮಚದಲ್ಲಿ ಆಹಾರ ಸೇವಿಸಲು ಇಷ್ಟಪಡುತ್ತಾರೋ ಅಂತಹವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಹದಗೆಡುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದಲ್ಲದೆ, ಅವರಲ್ಲಿ ಟೈಪ್ 2 ಮಧುಮೇಹದ ಅಪಾಯವೂ ಹೆಚ್ಚಾಗುತ್ತದೆ ಎಂಬುದು ಅವರ ಅಭಿಮತ.

ಯಾವ ವಿಧಾನವು ಹೆಚ್ಚು ಪ್ರಯೋಜನಕಾರಿಯಾಗಿದೆ?
ಆಯುರ್ವೇದ ಮತ್ತು ಹಳೆಯ ಭಾರತೀಯ ಸಂಪ್ರದಾಯಗಳಲ್ಲಿ ಕೈಯಿಂದ ಆಹಾರವನ್ನು ತಿನ್ನುವ ಉಲ್ಲೇಖವಿದೆ. 5 ಬೆರಳುಗಳು ಐದು ಅಂಶಗಳನ್ನು ಪ್ರತಿನಿಧಿಸುತ್ತವೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ, ಅದರಲ್ಲಿ ಹೆಬ್ಬೆರಳು ಬೆಂಕಿ, ತೋರುಬೆರಳು ಗಾಳಿ, ಮಧ್ಯದ ಬೆರಳು ಆಕಾಶ, ಉಂಗುರ ಬೆರಳು ಭೂಮಿ ಮತ್ತು ಕಿರುಬೆರಳು ನೀರು ಪ್ರತಿನಿಡಿಸುತ್ತದೆ. ನಾವು ನಮ್ಮ ಕೈಯಾರೆ ಆಹಾರವನ್ನು ಸೇವಿಸಿದಾಗ, ನಾವು ಹೆಚ್ಚು ಆಹಾರವನ್ನು ತಿನ್ನುವುದಿಲ್ಲ ಮತ್ತು ನಾವು ನಿಯಂತ್ರಿತ ಪ್ರಮಾಣದಲ್ಲಿ ತಿನ್ನುತ್ತೇವೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ನಾವು ಅತಿಯಾಗಿ ತಿನ್ನುವುದನ್ನು ತಪ್ಪಿಸುತ್ತೇವೆ.

ಇದನ್ನೂ ಓದಿ-Diabetes: ಮಧುಮೇಹಿಗಳಿಗೆ ಔಷಧೀಯ ಕೆಲಸ ಮಾಡುತ್ತದೆ ಹಸಿ ಶುಂಠಿ!

ಇನ್ನೂ ಹಲವು ಪ್ರಯೋಜನಗಳಿವೆ
ಕೈಯಾರೆ ಆಹಾರ ತಿನ್ನುವುದು ಕೂಡ ತನ್ನದೇ ಆದ ಕಲೆಯಾಗಿದೆ. ನಾವು ಆಹಾರವನ್ನು ನಮ್ಮ ಕೈಯಿಂದ ಸೇವಿಸುವಾಗ, ನಾವು ನಮ್ಮ ಬೆರಳುಗಳನ್ನು ನಮ್ಮ ಬಾಯಿಯಲ್ಲಿ ಇಡಬೇಕಾಗಿಲ್ಲ, ಬದಲಿಗೆ ನಾವು ಆಹಾರವನ್ನು ನಮ್ಮ ಬಾಯಿಗೆ ತಳ್ಳಬೇಕು. ಆಹಾರವನ್ನು ತಿನ್ನುವ ಮೊದಲು ಕೈಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬೇಕು. ನಾವು ನಮ್ಮ ಕೈಯಿಂದ ಆಹಾರವನ್ನು ಸೇವಿಸಿದಾಗ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ನಾವು ಸಂಪರ್ಕ ಹೊಂದುತ್ತೇವೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ಕೈಗಳಿಂದ ಆಹಾರವನ್ನು ತಿನ್ನುವಾಗ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತದೆ. ಕೈಯಿಂದ ಆಹಾರವನ್ನು ಸೇವಿಸುವುದರಿಂದ ರಕ್ತ ಪರಿಚಲನೆ ಸರಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ-Weight Loss: ವೇಗವಾಗಿ ತೂಕ ಇಳಿಕೆಗೆ ಸಹಾಯ ಮಾಡುತ್ತೆ ಈ ಬೇಳೆ, ಈ ರೀತಿ ಸೇವಿಸಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News