Alert! Corona ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಈ ಹೊಸ ಕಾಯಿಲೆಯ ಅಪಾಯ ಹೆಚ್ಚಾಗುತ್ತಿದೆ

Deafness In Corona Recovered Patients - ಕೋರೋನಾದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಶ್ರವಣದೋಷದ ಅಪಾಯ ಹೆಚ್ಚಾಗತೊಡಗಿದೆ. ಕೇವಲ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಇಂತಹ 15  ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯರು, ಕೆಲ ಆಯ್ದ ಲಕ್ಷಣಗಳು ಕಂಡುಬಂದ 72 ಗಂಟೆಗಳೊಳಗೆ ಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದ್ದಾರೆ.

Written by - Nitin Tabib | Last Updated : Jun 11, 2021, 07:48 PM IST
  • ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಕಿವುಡುತನ
  • ದೋಷ ಕಂಡುಬಂದ 72 ಗಂಟೆಯೊಳಗೆ ಮಾತ್ರ ಚಿಕಿತ್ಸೆ ಸಾಧ್ಯ.
  • ದೀರ್ಘಕಾಲದವರೆಗೆ ನಿರ್ಲಕ್ಷಿಸಿದರೆ ಚಿಕಿತ್ಸೆ ಅಸಾಧ್ಯ ಎಂದ ವೈದ್ಯರು.
Alert! Corona ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಈ ಹೊಸ ಕಾಯಿಲೆಯ ಅಪಾಯ ಹೆಚ್ಚಾಗುತ್ತಿದೆ title=
Deafness In Corona Recovered Patients (File Photo)

ನವದೆಹಲಿ: Deafness In Corona Recovered Patients - ನಿಮ್ಮ ಶ್ರವಣ ಶಕ್ತಿಯೂ ಕೂಡ ಕಡಿಮೆಯಾಗಿದೆಯೇ? ನಿಮ್ಮ ಕಿವಿಯಲ್ಲಿಯೂ ಕೂಡ ಶಿಳ್ಳೆ ಹೊಡೆದ ಸದ್ದು ಬರುತ್ತಿದೆಯೇ? ಒಂದು ವೇಳೆ ಕೊರೊನಾ ವೈರಸ್ ನಿಂದ ನೀವೂ ಕೂಡ ಚೇತರಿಸಿಕೊಂಡಿದ್ದರೆ (Corona Recovered Patients), ಇದು ನಿಮಗೆ ಎಚ್ಚರಿಕೆಯ ಕರೆಗಂಟೆಯಾಗಿದೆ. ಕರೋನಾ ವೈರಸ್‌ನಿಂದ (Coronavirus) ಚೇತರಿಸಿಕೊಳ್ಳುತ್ತಿರುವ ಅನೇಕ ರೋಗಿಗಳಲ್ಲಿ ಶ್ರವಣ ದೋಷ (Deffness) ಕಂಡುಬರುತ್ತಿದೆ ಮತ್ತು ಕೆಲವರಲ್ಲಿ ಇದು ಚಿಕಿತ್ಸೆ ನೀಡಿದ ಬಳಿಕವೂ ಕೂಡ ಪರಿಹರಿಸುತ್ತಿಲ್ಲ. ಅಂದರೆ, ನಿಮಗೆ ಮೊದಲಿನಂತೆ ಕೇಳಲು ಸಾಧ್ಯವಾಗುವುದಿಲ್ಲ.  ದೆಹಲಿಯ ಸರ್ಕಾರಿ ಆಸ್ಪತ್ರೆಯ ENT ವಿಭಾಗಕ್ಕೆ (ENT Department) ಇಂತಹ 15 ರೋಗಿಗಳು ಭೇಟಿ ನೀಡಿದ್ದಾರೆ.

ಕೊರೊನಾದಿಂದ ಶ್ರವಣದೋಷ ಉಂಟಾಗುತ್ತಿದೆ
ದೆಹಲಿಯ ವೈದ್ಯರಾಗಿರುವ ಡಾ. ಸೌರಭ್ ನಾರಾಯಣ್ ಕಳೆದ ವರ್ಷ ಕೊರೊನಾ ಸೋಂಕಿಗೆ (Corona Infection) ಗುರಿಯಾಗಿದ್ದರು. ಈ ಹಿನ್ನೆಲೆ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ 21 ದಿನ ಕಾಲ ಕಳೆಯಬೇಕಾದ ಸ್ಥಿತಿ ಬಂದೊದಗಿತ್ತು. ಬಳಿಕ ಅವರು ಚೇತರಿಸಿಕೊಂಡಿದ್ದರು. ಆದರೆ, ಅದಾದ ಬಳಿಕ ಅವರಿಗೆ ಮೊದಲಿನಂತೆ ಕೇಳಲು ಬರುತ್ತಿಲ್ಲ. ಈ ಸಂಗತಿ ಅವರಿಗೆ ಎಷ್ಟೊಂದು ತಡವಾಗಿ ತಿಳಿದು ಬಂತೆಂದರೆ, ಸದ್ಯ ಕೇಳುವ ಉಪಕರಣದ (Hearing Aid) ಸಹಾಯವಿಲ್ಲದೆ ಅವರಿಗೆ ಕೇಳಲು ಬರುತ್ತಿಲ್ಲ (Hearing Problem). ಅಂದರೆ ಇನ್ಮುಂದೆ ಅವರು ಮೊದಲಿನಂತೆ ಕೇಳಲು ಸಾಧ್ಯವೇ ಇಲ್ಲ. ಅವರು ತಮ್ಮ ಬಲ ಕಿವಿಯ ಶಕ್ತಿಯನ್ನು ಸಂಪೂರ್ಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ-Donkey Export In Pakistan: China ಜನರಿಗಾಗಿ ಕತ್ತೆಗಳನ್ನು ಸಾಕುತ್ತಿದೆ ಪಾಕಿಸ್ತಾನ, ಕಾರಣ ಗೊತ್ತಾ?

ಕಳೆದ ಎರಡು ತಿಂಗಳಿನಲ್ಲಿ ದೆಹಲಿಯಲ್ಲಿ 15 ಪ್ರಕರಣಗಳು ಪತ್ತೆ
ಅಂಕಿ-ಸಂಖ್ಯೆಗಳನ್ನು ಗಮನಿಸುವುದಾದರೆ, ದೆಹಲಿಯ ಸರ್ಕಾರಿ ಆಸ್ಪತ್ರೆಯಾಗಿರುವ ಅಂಬೇಡ್ಕರ್ ಆಸ್ಪತ್ರೆಯಲ್ಲಿ (Ambedkar Hospital) ಕಳೆದ 2 ತಿಂಗಳಿನಲ್ಲಿ ಇಂತಹ 15 ಪ್ರಕರಣಗಳು ಪತ್ತೆಯಾಗಿವೆ. ಕೆಲ ರೋಗಿಗಳಲ್ಲಿ ಕಿವಿನೋವಿನ ಸಮಸ್ಯೆ ಇದ್ದರೆ, ಕೆಲವರಲ್ಲಿ ಸಂಪೂರ್ಣ ಶ್ರವಣದೋಷ ಉಂಟಾಗಿದೆ. ಈ ಎಲ್ಲಾ ರೋಗಿಗಳು ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಹೆಚ್ಚುವರಿ ಪ್ರಕರಣಗಳಲ್ಲಿ ರೋಗಿಗಳು ವೈದ್ಯರ ಬಳಿ ತುಂಬಾ ತಡವಾಗಿ ತಲುಪಿದ್ದು, ಅವರ ಶ್ರವಣಶಕ್ತಿ (Hearing Power) ವಾಪಸ್ ಬರುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

ಇದನ್ನೂ ಓದಿ- BIG Discovery: ಬಾಹ್ಯಾಕಾಶದಲ್ಲಿ ದೊರೆತ ಭೂಮಿಯ ಪರ್ಯಾಯ ಆಯ್ಕೆ!

ಈ ಸಮಸ್ಯೆ ಕಾಣಿಸಿಕೊಂಡ 72 ಗಂಟೆಗಳಲ್ಲಿ ಚಿಕಿತ್ಸೆ ಪಡೆಯುವುದು ಅವಶ್ಯಕ
ಅಂಬೇಡ್ಕರ್ ಆಸ್ಪತ್ರೆಯ ENT ವಿಭಾಗದ ತಜ್ಞ ಡಾ. ಪಂಕಜ್ ಕುಮಾರ್ (Dr. Pankaj Kumar) ಪ್ರಕಾರ, ಒಂದು ವೇಳೆ ಕಿವಿಯಲ್ಲಿ ನೋವು, ಜಡತ್ವ ಎದುರಾದಲ್ಲಿ, ಅಂತಹ ರೋಗಿಗಳು 72 ಗಂಟೆಗಳೊಳಗೆ ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯ ಎಂದಿದ್ದಾರೆ. ಆರಂಭಿಕ ಹಂತದಲ್ಲಿನ ಇಂತಹ ಶ್ರವಣದೋಷವನ್ನು ತಡೆಯಬಹುದು. ಆದರೆ ಒಂದು ವೇಳೆ ದೀರ್ಘಕಾಲದವರೆಗೆ ಇದನ್ನು ನಿರ್ಲಕ್ಷಿಸಿದರೆ, ಅದರಿಂದ ಚೇತರಿಸಿಕೊಳ್ಳುವುದು ಸಾಧ್ಯವೇ ಇಲ್ಲ.

ಇದನ್ನೂ ಓದಿ-ಕೊರೊನಾ ಪ್ರಕೋಪದ ನಡುವೆ ತಲೆ ಎತ್ತುತ್ತಿದೆ ಈ ಹೊಸ ಕಾಯಿಲೆ, 100ರಲ್ಲಿ 10 ಜನರ ಸಾವಿನ ಅಪಾಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News