Yuva Movie review : ಎಲ್ಲೆಡೆ ʼಯುವʼ ಹವಾ ಶುರು..! ಫುಲ್ ಮಾಸ್.. ಫುಲ್ ಕ್ಲಾಸ್.. ಮಚ್ಚಾ

Yuva Rajkumar yuva movie review : ಯುವ ನಟನೆ ನೋಡಿದ್ರೆ ಮೊದಲ ಸಿನಿಮಾ ಅಂತ ಅನಿಸೋದೆ ಇಲ್ಲ.. ಯುವ ಆಕ್ಷನ್ ಮಾತ್ರ ಅಬ್ಬಬ್ಬಾ ಅನ್ನೋ ತರನೇ ಇದೆ. ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಯುವನಲ್ಲಿ ಅಡಗಿದ್ದ ಟ್ಯಾಲೆಂಟ್ ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. 

Written by - YASHODHA POOJARI | Edited by - Krishna N K | Last Updated : Mar 29, 2024, 12:23 PM IST
    • ಯುವ ಆಕ್ಷನ್ ಮಾತ್ರ ಅಬ್ಬಬ್ಬಾ ಅನ್ನೋ ತರನೇ ಇದೆ
    • ಫುಲ್ ಮಾಸ್. .ಫುಲ್ ಕ್ಲಾಸ್ ಮಚ್ಚಾ.
    • ಮೊದಲ ಸಿನಿಮಾದಲ್ಲೇ ರೊಚ್ಚಿಗೆದ್ದು ನಟಿಸಿದ ಯುವ
Yuva Movie review : ಎಲ್ಲೆಡೆ ʼಯುವʼ ಹವಾ ಶುರು..! ಫುಲ್ ಮಾಸ್.. ಫುಲ್ ಕ್ಲಾಸ್.. ಮಚ್ಚಾ title=

Yuva Movie Review : ಫುಲ್ ಮಾಸ್. .ಫುಲ್ ಕ್ಲಾಸ್ ಮಚ್ಚಾ. ..ಹೆಂಗೈತೆ ಯುವ ಸಿನಿಮಾ. ..? ಸಖತ್ ಆಗೈತಿ ಕಣ್ರೀ.. ಮಾಡಿದ ಮೊದಲ ಸಿನಿಮಾದಲ್ಲೇ ರೊಚ್ಚಿಗೆದ್ದು ನಟಿಸಿದ ಯುವನಿಗೆ ಭರ್ಜರಿಯಯಾಗಿ ವೆಲ್ಕಮ್ ಸಿಕ್ಕಿದೆ ಸಿನಿಮಾ. ಒಂದೊಂದು ಡೈಲಾಗ್ ಗಳು ಕೂಡ ಸಖತ್ ಆಗಿ ಕಿಕ್ ಮೂಲಕ ಥ್ರಿಲ್ ಕೊಟ್ಟಿದೆ. ಯುವ ಹೊಡೆಯೋ ಒಂದೊಂದು ಡೈಲಾಗ್ ಗೂ ಪ್ರೇಕ್ಷಕಪ್ರಭು ಶಿಳ್ಳೆ ಚಪ್ಪಾಳೆ ಕೊಟ್ಟು ಎಂಜಾಯ್ ಮಾಡಿದ್ದಾರೆ. 

ಕಾಲೇಜು ಲೈಫ್ ಅಂದ್ರೆ ಹಾಗೇ ಓದೋ ಬದಲು ಮನಸ್ಸು ಬೇರೆ ಕಡೆಗೆ ಟರ್ನ್ ಆಗುಬಿಡುತ್ತೆ. ಅಂತೆಯೇ ಇಲ್ಲಿ ತಂದೆ ಮಗ ಬುದ್ದಿ ಕಲಿಲಿ ಅಂತ ಮಂಗಳೂರಿನಲ್ಲಿ ಓದಿಗೆ ಅಂತ ಕಳಿಸುತ್ತಾರೆ ಆದ್ರೆ ಮಗ ಗೊತ್ತೋ ಗೊತ್ತಿಲ್ಲದೇ ಗ್ಯಾಂಗ್ಸ್ಟರ್ ಆಗಿ ಇಡೀ ಕಾಲೇಜು ಲೈಫ್ ನ ಸೀರಿಯಸ್ ಆಗಿ ತಗೊಳೋದಿಲ್ಲ.. ಅಪ್ಪ ಮಗ ನನ್ನ ಕನಸು ನುಚ್ಚುನೂರು ಮಾಡಿದ ಅಂತ ನೋವಿನಲ್ಲೆ ಮಗ ಯುವನ ಬಿಟ್ಟು ಮಗಳ ಮದುವೆ ಮಡ್ತಾರೆ.  ಆಮೇಲೆ ಸಿನಿಮಾದಲ್ಲಿ ರೋಚಕ ತಿರುವುಗಳಿವೆ.. 

ಇದನ್ನೂ ಓದಿ:ರಾಘವ್ ಚಡ್ಡಾ ಅವರ ಪತ್ನಿ ಪರಿಣಿತಿ ಚೋಪ್ರಾ ಗರ್ಭಿಣಿಯೇ? ಪ್ರೆಗ್ನೆನ್ಸಿ ವದಂತಿಗೆ ಪ್ರತಿಕ್ರಿಯಿಸಿದ ನಟಿ!!

ಹಾಡುಗಳನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋದೇ ಥ್ರಿಲ್ ಬಿಡಿ. ಯುವಗೆ ನಾಯಕಿಯಾಗಿ ಸಪ್ತಮಿಗೌಡ ಕಾಣಿಸಿಕೊಂಡಿದ್ದಾರೆ. ಯುವ ಸಿನಿಮಾದಲ್ಲಿ ನೆಗೆಟಿವ್ ಶೇಡ್ ನಲ್ಲಿ ರಣವ್ ಅಂತೂ ಥ್ರಿಲ್ ಕೊಡೊ ಲೆವೆಲ್ಲಿಗೆ ರಂಜಿಸಿದ್ದಾರೆ. ಯುವ ನಟನೆ ನೋಡಿದ್ರೆ ಮೊದಲ ಸಿನಿಮಾ ಅಂತ ಅನಿಸೋದೆ ಇಲ್ಲ.. ಯುವ ಆಕ್ಷನ್ ಮಾತ್ರ ಅಬ್ಬಬ್ಬಾ ಅನ್ನೋ ತರನೇ ಇದೆ.  

ಇನ್ನೂ ಸ್ಟಾರ್ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಯುವನಲ್ಲಿ ಅಡಗಿದ್ದ ಟ್ಯಾಲೆಂಟ್ ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಂತೋಷ್ ಆನಂದ್ ರಾಮ್ ಡೈರೆಕ್ಷನ್ ಅಂದ್ರೇನೇ ಹಾಗೇ ಒಳ್ಳೆ ಸಂದೇಶವಂತೂ ಸಿನಿಮಾದಲ್ಲಿ ಇದ್ದೇ ಇರುತ್ತೆ. ಇಡೀ ಯುವ ಸಿನಿಮಾ ನಿಮ್ಮನ್ನ ಕೊನೆವರೆಗೂ ಎಂಗೇಜ್ ಮಾಡಿ ಕೂರಿಸುತ್ತೆ. 

ಇಂಡಸ್ಟ್ರಿಗೆ ಒಳ್ಳೆ ನಾಯಕ ಸಿಕ್ಕಾಯ್ತು ಹೊಡಿರಿ ಚಪ್ಪಾಳೆ. ಅಪ್ಪುನ ಯುವನಲ್ಲಿ ನೋಡಿ ಖುಷಿ ಪಡೋ ಸಮಯ ಕೂಡ ಬಂದಾಯ್ತು. .! ಬನ್ನಿ ಎಲ್ಲಾ ಯುವ ಸಿನಿಮಾ ನೋಡಿ ಎಂಜಾಯ್ ಮಾಡಿ. ಕನ್ನಡ ಸಿನಿಮಾ ಉಳಿಸಿ ಬೆಳೆಸಿ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News