Yuva Rajkumar: ಯುವ ರಾಜಕುಮಾರನಿಗೆ ಪಟ್ಟಾಭಿಷೇಕ: ಬಿರುದುಗಾಗಿ ಸೋಶಿಯಲ್‌ ಮಿಡಿಯಾಲ್ಲಿ ಚರ್ಚೆ!

Yuva Rajkumar Title: ಚಂದನವನದ ನಟ ಯುವ‌ ರಾಜ್‌ಕುಮಾರ್ ಮೊದಲ ಸಿನಿಮಾ ರಿಲೀಸ್‌ ಬಳಿಕ ಈ ನಟನಿಗೆ ಪಟ್ಟಾಭಿಷೇಕ ಮಾಡಿ ಬಿರುದನ್ನು ನೀಡಬೇಕು ಎಂದು ಸೋಶಿಯಲ್‌ ಮಿಡಿಯಾದಲ್ಲಿ ಜೋರಾಗಿ ಚರ್ಚೆಯಾಗುತ್ತದೆ. ಹಾಗಿದ್ರೆ ಈ ನಟಿಗೆ ಏನೆಂದು ಬಿರುದನ್ನು ಇಡಬಹುದು? ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Apr 3, 2024, 10:22 AM IST
  • ಯುವ‌ ರಾಜ್‌ಕುಮಾರ್‌ಗೆ ಬಿರುದು ನೀಡಲು ಸೋಶಿಯಲ್‌ ಮಿಡಿಯಾದಲ್ಲಿ ಚರ್ಚೆ ಆರಂಭವಾಗಿದೆ.
  • ಯುವ ರಾಜ್‌ಕುಮಾರ್‌ನ ಖದರ್‌ ನೋಡಿದ ಅಭಿಮಾನಿಗಳು 'ಕಾಲರ್ ಎತ್ತಿಕೊಂಡು ಓಡಾಡಿ', 'ದೊಡ್ಮನೆ ಪರಂಪರೆ' ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.
  • ಇನ್ನು ಕೆಲವರು ಮುದಲ ಚಿತ್ರ ಬಿಡುಗಡೆಯಾಗಿ ವಾರ ಕಳೆದಿಲ್ಲ, ಇಷ್ಟು ಬೇಗ ಬಿರುದು ಬೇಕಾಗಿಲ್ಲ. ಖ್ಯಾತ ನಟರಿಗೂ ಮೊದಲ ಸಿನಿಮಾಗೆ ಬಿರುದು ಸಿಕ್ಕಿಲ್ಲ ಎನ್ನುತ್ತಿದ್ದಾರೆ.
Yuva Rajkumar: ಯುವ ರಾಜಕುಮಾರನಿಗೆ ಪಟ್ಟಾಭಿಷೇಕ: ಬಿರುದುಗಾಗಿ ಸೋಶಿಯಲ್‌ ಮಿಡಿಯಾಲ್ಲಿ ಚರ್ಚೆ! title=

Yuva Rajkumar Title After First Film: ಸ್ಯಾಂಡಲ್‌ವುಡ್‌ ಹೊಸ ಪ್ರತಿಭೆ ನಟ ಯುವ‌ ರಾಜ್‌ಕುಮಾರ್ ಮೊದಲ ಸಿನಿಮಾ ಯುವ ರಿಲೀಸ್‌ ಆಗಿ ಇನ್ನೂ ಒಂದು ವಾರ ಕೂಡ ಆಗಿಲ್ಲ. ಆದರೆ ಈ ನಟ ಬಿರುದು ನೀಡಲು ಸೋಶಿಯಲ್‌  ಮಿಡಿಯಾದಲ್ಲಿ ಚರ್ಚೆ ಆರಂಭವಾಗಿದೆ. ಈ ನಟನ ಆರ್ಭಟ ನೋಡಿದ ಫ್ಯಾನ್ಸ್‌ ಈತನಿಗೆ ಪಟ್ಟಾಭಿಷೇಕ ಮಾಡಬೇಕು, ಒಂದು ಬಿರುದು ಕೊಡಬೇಕು ಎನ್ನುತ್ತಿದ್ದಾರೆ.

ಈಗಾಗಾಲೇ ಸಾಮಾಜಿಕ ಜಾಲತಾಣದಲ್ಲಿ ಯುವ ರಾಜ್‌ಕುಮಾರ್‌ನ ಖದರ್‌ ನೋಡಿದ ಅಭಿಮಾನಿಗಳು 'ಕಾಲರ್ ಎತ್ತಿಕೊಂಡು ಓಡಾಡಿ', 'ದೊಡ್ಮನೆ ಪರಂಪರೆ' ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ. ಹಲವು ಫ್ಯಾನ್ಸ್‌ ಯುವ ರಾಜ್‌ಕುಮಾರನಲ್ಲಿ ಪುನೀತ್ ರಾಜ್‌ಕುಮಾರ್  ನೋಡುತ್ತಿರುವುದರಿಂದ ಜ್ಯೂನಿಯರ್ ಪವರ್‌ ಸ್ಟಾರ್  ಅಂತ ಕರೆಯಲಿ ಶುರು ಮಾಡಿದ್ದಾರೆ. ಈ ನಟನಿಗೆ ಪಟ್ಟಾಭಿಷೇಕ ನಡೆಯಬೇಕು, ಬಿರುದು ಕೊಡಬೇಕು ಅಂತ ಚರ್ಚಿಸುವುದರ ಜೊತಗೆ ಅಭಿಮಾನಿಗಳು ಕೆಲವು ಇಂಟ್ರೆಸ್ಟಿಂಗ್ ಬಿರುದುಗಳನ್ನು ಸಹ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ನಟಿ ರಾಧಿಕಾ ಕುಮಾರಸ್ವಾಮಿ ಮೊದಲ ಪತಿ ಇವರೇ... ಅತ್ತೆ ಮನೆಯಲ್ಲಿ ಹಿಂಸೆ, ಮುರಿದುಬಿದ್ದ ಎರಡನೇ ಮದುವೆ!!

ಯುವ ರಾಜ್‌ಕುಮಾರ್‌ನಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಿನ್ಸ್, ಉಸ್ತಾದ್, ಮೆಗಾ ಪವರ್ ಸ್ಟಾರ್, ಯಂಗ್ ಟೈಗರ್, ಪವರ್ ಪ್ರಿನ್ಸ್, ಜ್ಯೂ. ಪವರ್ ಸ್ಟಾರ್ ಹೀಗೆ ಸಾಕಷ್ಟು ಬಿರುದುಗಳಲ್ಲಿ ಯಾವುದಾದರೂ ಇಡಬೇಕು ಎಂಬುದು ಕೇಳಿ ಬರುತ್ತಿದೆ. ಆದರೆ ಇನ್ನು ಕೆಲವರು ಮುದಲ ಚಿತ್ರ ಬಿಡುಗಡೆಯಾಗಿ ವಾರ ಕಳೆದಿಲ್ಲ, ಇಷ್ಟು ಬೇಗ ಬಿರುದು ಬೇಕಾಗಿಲ್ಲ. ಖ್ಯಾತ ನಟರಿಗೂ ಮೊದಲ ಸಿನಿಮಾಗೆ ಬಿರುದು ಸಿಕ್ಕಿಲ್ಲ ಎನ್ನುತ್ತಿದ್ದಾರೆ.

ಒಟ್ಟಾರೆಯಾಗಿ ನಟ ಯುವ ರಾಜ್‌ಕುಮಾರ್ ತಮ್ಮ ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನ ಗೆದ್ದದ್ದಾರೆ. ಅಭಿಮಾನಿಗಳು ಈ ನಟನ ಮೇಲೆ ಇಟ್ಟ ನಿರೀಕ್ಷೆಯನ್ನು ಸುಳ್ಳು ಮಾಡದೆ ಅದನ್ನು ತಲುಪಿದ್ದಾರೆ. ಈಗಾಗಲೇ ಈ ನಟ ಮುಂದೆ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಲಿರುವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನುವ ಗುಸು ಗುಸು ತುಂಬಾ ಹಿಂದೆಯೇ ಆಗಿತ್ತು. ಸದ್ಯಕ್ಕೆ ಫ್ಯಾನ್ಸ್‌ಗೆ ದೊಡ್ಮನೆ ಕುಡಿಯ ಎರಡನೇ ಚಿತ್ರ ಯಾವುದೆಂಬ ಕುತೂಹಲ ಮೂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

  

Trending News