Samantha: ಸಮಂತಾ ಸಿನಿಮಾಗಳಿಗೆ ಗ್ಯಾಪ್ ಕೊಟ್ಟಿರುವುದು ಗೊತ್ತೇ ಇದೆ. ಸಿನಿಮಾದಿಂದ ದೂರ ಉಳಿದು ತನ್ನ ಆರೋಗ್ಯದ ಕಡೆ ಗಮನ ಹರಿಸಿರುವ ಸ್ಯಾಮ್ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಅನೇಕ ದೇಶಗಳಿಗೆ ಸುತ್ತುತ್ತಿದ್ದಾರೆ.. ಸಮಂತಾ ಇತ್ತೀಚೆಗೆ ಭೂತಾನ್ನಿಂದ ಹೈದರಾಬಾದ್ಗೆ ಹಿಂದಿರುಗಿದ್ದಾರೆ..
ಬಹುದಿನಗಳ ನಂತರ ಸಮಂತಾ ನೆಟಿಜನ್ಗಳೊಂದಿಗೆ ಸಂವಾದ ನಡೆಸಿದ್ದಾರೆ.. ಸಂಡೇ ಸ್ಪೇಷಲ್ ಎನ್ನುವ ಹಾಗೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರಶ್ನೆಗಳನ್ನು ಕೇಳಿದರೆ, ಅದಕ್ಕೆ ಉತ್ತರಿಸುತ್ತೇನೆ ಎಂದು ಬರೆದುಕೊಂಡಿದ್ದರು.. ಇದರೊಂದಿಗೆ ನೆಟಿಜನ್ಗಳು ತಮ್ಮ ಪ್ರಶ್ನೆಗಳನ್ನು ಕೇಳಿದರು ಮತ್ತು ಆ ಪ್ರಶ್ನೆಗಳಿಗೆ ಸ್ಯಾಮ್ ಉತ್ತರಿಸಿದರು. ಆದರೆ ಅದೇ ವೇಳೆ ನೆಟ್ಟಿಗರೊಬ್ಬರು ಸಮಂತಾಗೆ ಮತ್ತೆ ಮದುವೆಯಾಗುವ ಸಾಧ್ಯತೆಗಳಿವೆಯೇ ಎಂದು ಕೇಳಿದ್ದಾರೆ..
ಇದನ್ನೂ ಓದಿ-ಬಿಗ್ ಬಾಸ್ ಮನೆಯಿಂದ ಓಡಿ ಹೋಗೋಣ ಅನಿಸ್ತಿದೆ’: ಕಿಚ್ಚನ ಪಂಚಾಯ್ತಿಯಲ್ಲಿ ಸೇಫ್ ಆದ್ರೂ ಡ್ರೋನ್ ಪ್ರತಾಪ್ ಹೀಗಂದಿದ್ದೇಕೆ?
ಇದಕ್ಕೆ ಉತ್ತರಿಸಿದ ಸಮಂತಾ, ಮರುಮದುವೆ ಕೆಟ್ಟ ಹೂಡಿಕೆ ಎಂದು.. ಕೀ ಡೈವೋರ್ಸ್ ಸ್ಟ್ಯಾಟಿಸ್ಟಿಕ್ಸ್ ಎಂಬ ವರದಿಯನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವರದಿಯಲ್ಲಿ, ಮೊದಲ ಬಾರಿಗೆ ಮದುವೆಯಾಗುವವರಿಗೆ ವಿಚ್ಛೇದನ ಪಡೆಯುವ ಸಾಧ್ಯತೆ 50 ಪ್ರತಿಶತವಿದೆ. ಮರುಮದುವೆಯಾದವರಿಗೆ ವಿಚ್ಛೇದನದ ಸಾಧ್ಯತೆ 67 ಪ್ರತಿಶತ. ಮೂರನೇ ಬಾರಿಗೆ ಮದುವೆಯಾಗುವವರಿಗೆ ವಿಚ್ಛೇದನದ ಸಾಧ್ಯತೆ ಶೇಕಡ 70 ರಷ್ಟು ಇರುತ್ತದೆ ಎಂದು ಹೇಳಲಾಗಿದೆ..
ಈ ಮೂಲಕ ಸಮಂತಾ ಮತ್ತೆ ಮದುವೆಯಾಗುವುದಿಲ್ಲ ಎಂದು ಪರೋಕ್ಷವಾಗಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಮುಂದೆ ಸಮಂತಾ ಮತ್ತೆ ಮದುವೆಯಾಗದೇ ಹೀಗೆ ಇರುತ್ತಾರಾ ನೋಡೋಣ. ಆದರೆ ಇದೀಗ ಸಮಂತಾ ಪೋಸ್ಟ್ ವೈರಲ್ ಆಗಿದೆ.
ಇದನ್ನೂ ಓದಿ-ಉರ್ಫಿ ಮೈ ತುಂಬಾ ಲಿಪ್ಸ್ಟಿಕ್ ಗುರುತು..! ಒತ್ತಿದವರು ಯಾರು..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ