ಕೋಟಿಗಳ ಒಡೆಯನಾಗಿದ್ದರೂ 1BHK ಮನೆಯಲ್ಲಿಯೇ ವಾಸಿಸುವ ಸಲ್ಮಾನ್ ಖಾನ್

 ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿರುವ ಸಲ್ಮಾನ್  1BHK ಮನೆಯಲ್ಲಿ ವಾಸಿಸುತ್ತಿರುವ ವಿಚಾರ ಶೋನಲ್ಲಿ ಪ್ರಸ್ತಾಪವಾಗಿದೆ..  

Written by - Ranjitha R K | Last Updated : Nov 20, 2021, 06:13 PM IST
  • ಚಿತ್ರದ ಪ್ರಚಾರ ಕಾರ್ಯದಲ್ಲಿ ಸಲ್ಮಾನ್, ಆಯುಷ್ ಬ್ಯುಸಿ
  • ಕಪಿಲ್ ಶರ್ಮಾ ಶೋದಲ್ಲಿ ಕಾಣಿಸಿಕೊಳ್ಳಲಿರುವ ಜೋಡಿ
  • ಅರ್ಚನಾ ಪೂರನ್ ಸಿಂಗ್ ಜೊತೆ ಸಲ್ಮಾನ್ ಡ್ಯಾನ್ಸ್
ಕೋಟಿಗಳ ಒಡೆಯನಾಗಿದ್ದರೂ 1BHK ಮನೆಯಲ್ಲಿಯೇ ವಾಸಿಸುವ ಸಲ್ಮಾನ್ ಖಾನ್  title=
Salman khan (file photo)

ನವದೆಹಲಿ : ಸಲ್ಮಾನ್ ಖಾನ್ (Salman Khan) ಮತ್ತು ಅವರ ಭಾಮೈದ ಆಯುಷ್ ಶರ್ಮಾ (Ayush Sharma) ಅವರ ಹೊಸ ಚಿತ್ರ 'ಆಂಟಿಮ್ ದಿ ಫೈನಲ್ ಟ್ರುತ್' ಬಿಡುಗಡೆಗೆ ಸಿದ್ಧವಾಗಿದೆ. ಬಿಡುಗಡೆಗೂ ಮುನ್ನ ಇಬ್ಬರೂ ಸ್ಟಾರ್‌ಗಳು ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಇಬ್ಬರೂ ಕಪಿಲ್ ಶರ್ಮಾ ಶೋ' (Kapil Sharma Show)ಗೂ ಆಗಮಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಲ್ಮಾನ್ ಜೊತೆಗೆ ಆಯುಷ್ ಶರ್ಮಾ, ಮಹಿಮಾ ಮಕ್ವಾನಾ ಮತ್ತು ನಿರ್ದೇಶಕ ಮಹೇಶ್ ಮಂಜ್ರೇಕರ್ ಕೂಡ ಕಾಣಿಸಿಕೊಂಡಿದ್ದಾರೆ. ಕೋಟಿಗಟ್ಟಲೆ ಆಸ್ತಿಯನ್ನು ಹೊಂದಿರುವ ಸಲ್ಮಾನ್  1BHK ಮನೆಯಲ್ಲಿ ವಾಸಿಸುತ್ತಿರುವ ವಿಚಾರ ಶೋನಲ್ಲಿ ಪ್ರಸ್ತಾಪವಾಗಿದೆ.
  
ಸಲ್ಮಾನ್ ಎಷ್ಟು ಖರ್ಚು ಮಾಡುತ್ತಾರೆ?
ಕಾರ್ಯಕ್ರಮದಲ್ಲಿ, ಕಪಿಲ್ ಶರ್ಮ (Kapil Sharma), ಸಲ್ಮಾನ್ ಖಾನ್ ಬಳಿ ಅವರ  1BHK  ಮನೆಯ ಬಗ್ಗೆ ಪ್ರಶ್ನಿಸುತ್ತಾರೆ. ಒನ್ ಬಿಹೆಚ್ ಕೆ ಮನೆಯಲ್ಲಿ ವಾಸಿಸುವುದು ಯಾಕೆ? ತಮ್ಮ ಮೇಲೆ ಸಲ್ಮಾನ್ (Salman Khan)ಹಣ ವ್ಯಯಿಸುವುದಿಲ್ಲವೇ ಎಂದು ಪ್ರಶ್ಮಿಸಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, 'ಕೆಲವೊಮ್ಮೆ ಕೆಲ ಕೆಲಸಗಳಿಗಾಗಿ ಪದೇ ಪದೇ ಖರ್ಚು ಮಾಡಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂಥಹ ಖರ್ಚು ಮಾಡುವುದು ತುಂಬಾ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಈ ಮೂಲಕ ತಾನು ಹೆಚ್ಚು ಹಣ ಖರ್ಚು ಮಾಡಲು ಇಷ್ಟಪಡುವುದಿಲ್ಲ ಎನ್ನುವುದನ್ನು ಸಲ್ಮಾನ್ ಪರೋಕ್ಷವಾಗಿ ಹೇಳಿದ್ದಾರೆ. 

ಇದನ್ನೂ ಓದಿ : Kangana Ranaut Latest Statement: ಮಾಜಿ ಪ್ರಧಾನಿ Indira Gandhi ಸ್ಮರಿಸುತ್ತ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕಂಗನಾ ರಣಾವತ್

ಆಯುಷ್‌ ಶರ್ಮಾ ಹೇಳಿದ ವಿಷಯ : 
ಸಲ್ಮಾನ್ ಮತ್ತು ಆಯುಷ್ (Ayush Sharma) ಇಬ್ಬರೂ ಸಂಬಂಧಿಕರಾಗಿದ್ದು, ಮನೆಯಲ್ಲಿ ಭೇಟಿಯಾಗುವುದಕ್ಕೂ ಸೆಟ್ ನಲ್ಲಿ ಭೇಟಿಯಾಗುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ ಎಂದು ಕಪಿಲ್ ಪ್ರಶ್ನಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಷ್  ಶರ್ಮಾ, ಹೌದು ಸೆಟ್ ನಲ್ಲಿ ಭೇಟಿಯಾಗುವುದಕ್ಕೆ ಬಹಳ ವ್ಯತ್ಯಾಸವಿದೆ ಎಂದಿದ್ದಾರೆ. ಇದೇ ವೇಳೆ, ತಾನು ಸಲ್ಮಾನ್ ಮನೆಗೆ ಭೇಟಿ ನೀಡಿದ ವೇಳೆ, ಸಲ್ಮಾನ್ ತನ್ನನ್ನು ಪ್ರಶ್ನಿಸಿರುವ ಬಗ್ಗೆ ಆಯುಷ್ ಶರ್ಮಾ ಮೆಲುಕು ಹಾಕಿದ್ದಾರೆ.  ತಾನು ಒಮ್ಮೆ ಸಲ್ಮಾನ್ (Salman Khan) ಮನೆಗೆ ಹೋದಾಗ, ನೀನು ಬಹಳ ವಿಚಿತ್ರ ಮನುಷ್ಯ, ಪದೇ ಪದೇ ಯಾಕೆ ಇಲ್ಲಿಗೆ ಬರುತ್ತಿರುವುದು ಎಂದು ಸಲ್ಮಾನ್ ಪ್ರಶ್ನಿಸಿದ್ದರು ಎಂದು ಆಯುಷ್ ಹೇಳಿದ್ದಾರೆ. ಇನ್ನು ಶೋನಲ್ಲಿ ಸಲ್ಮಾನ್ ಖಾನ್ 'ಪೆಹ್ಲಾ-ಪೆಹ್ಲಾ ಪ್ಯಾರ್ ಹೈ' ಹಾಡಿಗೆ ಅರ್ಚನಾ ಪೂರನ್ ಸಿಂಗ್ ಜೊತೆ ಹೆಜ್ಜೆ ಹಾಕಿದ್ದಾರೆ. 

ಈ ದಿನ ಬಿಡುಗಡೆಯಾಗಲಿದೆ ಚಿತ್ರ :
'ಆಂಟಿಮ್: ದಿ ಫೈನಲ್ ಟ್ರುತ್' ಚಿತ್ರದಲ್ಲಿ ಸಲ್ಮಾನ್ ಖಾನ್  ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಯುಷ್ ಶರ್ಮಾ ದರೋಡೆಕೋರನ ಪಾತ್ರವನ್ನು ನಿರ್ವಹಿಸಿದ್ದಾರೆ. ಸಲ್ಮಾನ್ ಖಾನ್ ಮತ್ತು ಆಯುಷ್ ಶರ್ಮಾ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ಈ ಚಿತ್ರವನ್ನು ಮಹೇಶ್ ಮಂಜ್ರೇಕರ್ ನಿರ್ದೇಶಿಸಿದ್ದು, ನವೆಂಬರ್ 26 ರಂದು ಸಿನೆಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ : Viral Video: ಸಪ್ನಾ ಚೌಧರಿಗೆ ಪೈಪೋಟಿ ನೀಡುವಂತಿದೆ ಪುಟ್ಟ ಪೋರಿಯ ಡ್ಯಾನ್ಸ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News