ತಮಗಿಂತ ಹೆಚ್ಚಿನ ವಯಸ್ಸಿನ ಯುವತಿಯರನ್ನೇ ಹುಡುಗರು ಏಕೆ ಇಷ್ಟಪಡ್ತಾರೆ ಗೊತ್ತಾ..! ಓದಿ

Relation tips : ಹುಡುಗರು ಸಾಮಾನ್ಯವಾಗಿ ತಮಗಿಂತ ವಯಸ್ಸಾದ ಹುಡುಗಿಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ರೀತಿಯಲ್ಲಿ ಅನೇಕ ಬಾಲಿವುಡ್‌ ಜೋಡಿಗಳ ಉದಾರಹಣೆ ನಮ್ಮ ಮುಂದೆಯೇ ಇದೆ. ಹಾಗಿದ್ರೆ, ತಮಗಿಂತ ಹೆಚ್ಚು ವಯಸ್ಸಿನ ಯುವತಿಯನ್ನು ಯುವಕರು ಏಕೆ ಇಷ್ಟ ಪಡ್ತಾರೆ ಅಂತ ತಿಳಿದುಕೊಳ್ಳೊಣ ಬನ್ನಿ.

Written by - Krishna N K | Last Updated : May 6, 2023, 08:19 PM IST
  • ಹುಡುಗರು ತಮಗಿಂತ ಹೆಚ್ಚಿನ ವಯಸ್ಸಿನ ಯುವತಿಯರನ್ನೇ ಇಷ್ಟಪಡ್ತಾರೆ.
  • ಸಾಮಾನ್ಯವಾಗಿ ತಮಗಿಂತ ವಯಸ್ಸಾದ ಹುಡುಗಿಯರಿಗೆ ಹೆಚ್ಚು ಆಕರ್ಷಿತರಾಗುತ್ತಾರೆ.
  • ವಯಸ್ಸಿನಲ್ಲಿ ದೊಡ್ಡವರಿರುವ ಯುವತಿಯರನ್ನು ಮದುವೆಯಾಗಲು ಇಷ್ಟಪಡ್ತಾರೆ..
ತಮಗಿಂತ ಹೆಚ್ಚಿನ ವಯಸ್ಸಿನ ಯುವತಿಯರನ್ನೇ ಹುಡುಗರು ಏಕೆ ಇಷ್ಟಪಡ್ತಾರೆ ಗೊತ್ತಾ..! ಓದಿ title=

Relation tips : ಪ್ರೀತಿ ಮಾಯೆ.. ಇದು ಯಾವಾಗ, ಯಾರ ಜೊತೆ, ಯಾರ ಮೇಲೆ ಹುಟ್ಟುತ್ತದೆ ಅಂತ ಅರ್ಥವಾಗುವುದಿಲ್ಲ. ಪ್ರೀತಿಸುವ ವ್ಯಕ್ತಿ ಸಮಾಜವನ್ನಾಗಲಿ ವಯಸ್ಸನ್ನಾಗಲಿ ನೋಡುವುದಿಲ್ಲ. ಪ್ರೀತಿಸುವವರ ವಿರುದ್ಧ ಸಮಾಜ, ಕುಟುಂಬ ಇರುವುದಕ್ಕೆ ಇದೇ ಕಾರಣ. ಸಮಾಜದ ಕಟ್ಟುನಿಟ್ಟಿನ ನಿಯಮಗಳು ಮತ್ತು ಆಲೋಚನೆಗಳ ವಿರುದ್ಧ ತಿರುಗಿ ಬಿಳುವ ಶಕ್ತಿ ಇರುವುದು ಪ್ರೀತಿಗೆ ಮಾತ್ರ. ಅಲ್ಲದೆ, ಹೆಚ್ಚಾಗಿ ಇಂದಿನ ಯುವಕರು ತಮಗಿಂತ ವಯಸ್ಸಿನಲ್ಲಿ ದೊಡ್ಡವರಿರುವ ಯುವತಿಯರನ್ನು ಮದುವೆಯಾಗಲು ಇಷ್ಟಪಡ್ತಾರೆ.. ಅದು ಯಾಕೆ ಅಂತ ನಿಮ್ಗೆ ಗೊತ್ತಾ.. 

ಹೌದು.. ಈ ರೀತಿಯ ಘಟನೆಗಳು ಸಿನಿ ರಂಗದಲ್ಲಿ ಹೆಚ್ಚಾಗಿ ನಡೆದಿವೆ. ಅನೇಕ ಚಲನಚಿತ್ರ ಮತ್ತು ಟಿವಿ ತಾರೆಯರು ತಮಗಿಂತ ದೊಡ್ಡವರನ್ನು ಮದುವೆಯಾಗಿದ್ದು ಎಲ್ಲಿರಿಗೂ ತಿಳಿದಿದೆ. ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ-ನಟ ನಿಕ್ ಜೋನಾಸ್ ಹೊರತುಪಡಿಸಿ, ಮಲೈಕಾ ಅರೋರಾ-ಅರ್ಜುನ್ ಕಪೂರ್, ಐಶ್ವರ್ಯ ರೈ-ಅಭಿಷೇಕ್ ಬಚ್ಚನ್, ಬಿಪಾಶಾ ಬಸು-ಕರಣ್ ಸಿಂಗ್ ಗ್ರೋವರ್ ಮುಂತಾದ ಹೀಗೆ ಸಾಕಷ್ಟು ಬಾಲಿವುಡ್ ತಾರೆಯರ ಉದಾರಹಣೆಗಳು ನಮ್ಮ ಮುಂದೆ ಇವೆ. ಇದೀಗ ಇದಕ್ಕೆ ಕಾರಣ ಏನು ಎಂಬುವುದನ್ನು ತಿಳಿಯೋಣ.

ಇದನ್ನೂ ಓದಿ:Health Tips: ಯಾವುದೇ ಮುನ್ನೆಚ್ಚರಿಕೆ ನೀಡದೆ ಪ್ರಾಣ ತೆಗೆಯುತ್ತೇ ಈ ಕಾಯಿಲೆ, ಈ ರೀತಿ ಸುಲಭವಾಗಿ ನಿಯಂತ್ರಿಸಿ!

ಅನುಭವ : ವಯಸ್ಸಾದ ಮಹಿಳೆಯರಿಗೆ ಪ್ರೀತಿ ಮತ್ತು ಪ್ರಣಯದ ವಿಷಯಗಳಲ್ಲಿ ಹೆಚ್ಚಿನ ಅನುಭವವಿರುತ್ತದೆ. ಅವರು ಸಂಬಂಧ ಮತ್ತು ಪರಿಸ್ಥಿಯನ್ನು ಬಹು ಬೇಗ ಅರ್ಥ ಮಾಡಿಕೊಳ್ಳುತ್ತಾರೆ. ಒಂಟಿಯಾಗಿರುವ ಭಯ ಅವರಲ್ಲಿ ಇರುವುದಿಲ್ಲ. ಅಲ್ಲದೆ, ಸಂಬಂಧದಲ್ಲಿ ತಮ್ಮ ಸ್ವಾಭಿಮಾನವನ್ನು ಕಳೆದುಕೊಳ್ಳದೆ ತಮ್ಮ ಸಂಗಾತಿಯನ್ನು ಹೇಗೆ ಸಂತೋಷವಾಗಿರಿಸಿಕೊಳ್ಳಬೇಕೆಂದು ಅವರಿಗೆ ತಿಳಿದಿರುತ್ತದೆ.

ಜೀವನದ ಅರಿವು : ಹಿರಿಯ ಮಹಿಳೆಗೆ ಪ್ರಪಂಚದ ಬಗ್ಗೆ ಸ್ವಲ್ಪ ತಿಳುವಳಿಕೆ ಇರುತ್ತದೆ. ತಪ್ಪು ಒಪ್ಪುಗಳನ್ನ ಅರಿತವರಿರುತ್ತಾರೆ. ಸಂಗಾತಿಯನ್ನು ಚೆನ್ನಾಗಿ ಅರ್ಥಮಾಡಿಕೊಂಡು ಹೋಗುತ್ತಾರೆ.  ಪ್ರಪಂಚದ ಬಗ್ಗೆ ತನ್ನದೇ ಆದ ದೃಷ್ಟಿಕೋನವನ್ನು ಹೊಂದಿದ್ದಾಳೆ.

ಇದನ್ನೂ ಓದಿ: ಯುವತಿಯರ ʼಈ ರಹಸ್ಯ ಸ್ಥಳʼಗಳಲ್ಲಿ ʼಮಚ್ಚೆʼ ಇದ್ರೆ ಆಕೆಯ ಗಂಡನಿಗೆ ಶುಭ..!

ಹಣವು ಸಮಸ್ಯೆ ಇರುವುದಿಲ್ಲ : ಮಹಿಳೆಯರು ಪುರುಷರಿಗಿಂತ ವೇಗವಾಗಿ ತಮ್ಮ ವೃತ್ತಿಜೀವನದಲ್ಲಿ ನೆಲೆಸುತ್ತಾರೆ. ಅಂತಹ ಸ್ಥಿತಿಯಲ್ಲಿ ಹುಡುಗರು ಅವರ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಏಕೆಂದರೆ ಸಂಬಂಧದಲ್ಲಿ ಹಣಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಅವನಿಗೆ ತಿಳಿದಿರುತ್ತದೆ. ಅಗತ್ಯವಿದ್ದರೆ ಸಹಾಯ ಮಾಡುವ ಸ್ಥಿತಿಯಲ್ಲಿ ಅವರಲ್ಲಿ ಇರುತ್ತದೆ.
ಹೆಚ್ಚು ತಿಳುವಳಿಕೆ ಮತ್ತು ಬೆಂಬಲ : ಮಹಿಳೆಯರು ತಮ್ಮ ಚಿಕ್ಕ ವಯಸ್ಸಿನಲ್ಲಿ ಕಷ್ಟ ಮೇಲೆ ಬಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಅವರಿಗೆ ಸಂಬಂಧದಲ್ಲಿ ಏನಾದರೂ ತಪ್ಪಾದಲ್ಲಿ ಅವರು ನಿಭಾಯಿಸಿಕೊಂಡು ಸಾಗುತ್ತಾರೆ. ಸಂಗಾತಿಗೆ ಹೆಚ್ಚು ಬೆಂಬಲ ನೀಡಿ ಮುನ್ನಡೆಸುತ್ತಾರೆ.

ಹೆಚ್ಚು ಪ್ರಾಮಾಣಿಕ : ಪ್ರಾಮಾಣಿಕತೆಗೆ ವಯಸ್ಸಿನೊಂದಿಗೆ ಯಾವುದೇ ಸಂಬಂಧವಿಲ್ಲ. ಆದರೆ ಮಹಿಳೆಯರು ಹೆಚ್ಚು ತಿಳುವಳಿಕೆ ಹೊಂದಿರುತ್ತಾರೆ. ಏಕೆಂದರೆ ಹರೆಯದಲ್ಲೂ ಅವರು ಸಮಾಜವನ್ನು ಅರಿತುಕೊಂಡಿರುತ್ತಾರೆ. ಅವರಲ್ಲಿ ಹೆಚ್ಚಿನ ಪ್ರಜ್ಞೆ ಇರುತ್ತದೆ. ಅದಕ್ಕಾಗಿಯೇ ಹುಡುಗರು ತಮಗಿಂದ ಹೆಚ್ಚಿನ ವಯಸ್ಸಿರುವ ಹುಡುಗಿಯರೊಂದಿಗೆ ಹೆಚ್ಚು ಸಂಬಂಧ ಹೊಂದಲು ಬಯಸುತ್ತಾರೆ. ಅಲ್ಲದೆ, ಸಂಬಂಧದಲ್ಲಿ ಮೋಸ ಹೊಗುವ ಸಾಧ್ಯತೆ ಕಡಿಮೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News