ನವದೆಹಲಿ: ಖ್ಯಾತ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೆಲ ದಿನಗಳಿಂದ ತಮ್ಮ ಚಿತ್ರ 'ಪತಿ ಪತ್ನಿ ಔರ್ ವೋ' ಯಸಸ್ಸಿನ ರುಚಿ ಸವಿಯುತ್ತಿದ್ದಾರೆ. ಹಾಗೆ ನೋಡಿದರೆ ಕಾರ್ತಿಕ್ ಸಾಮಾಜಿಕ ಜಾಲತಾನಗಳಲ್ಲಿಯೂ ಕೂಡ ಹೆಚ್ಚು ಸಕ್ರೀಯರಾಗಿರುತ್ತಾರೆ. ಸದ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಟಿಕ್-ಟಾಕ್ ವೀಡಿಯೊವೊಂದನ್ನು ಹಂಚಿಕೊಂಡಿದ್ದು, ಅದಕ್ಕೆ ವಿಕ್ಷಕರ ಭಾರಿ ಮನ್ನಣೆ ದೊರೆತಿದೆ. ಈ ವಿಡಿಯೋಗೆ ಲಕ್ಷಾಂತರ ವಿವ್ಸ್ ದೊರೆತಿವೆ.
ಈ ವಿಡಿಯೋದಲ್ಲಿ ಕನ್ನಡಕ ಧರಿಸಿರುವ ಕಾರ್ತಿಕ್ ಆರ್ಯನ್ ಯುವತಿಯೋರ್ವಳನ್ನು ಗುರಾಯಿಸುತ್ತಿದ್ದಾರೆ. ಇದನ್ನು ಗಮನಿಸಿದ ಯುವತಿ ಸ್ವಲ್ಪ ಹೊತ್ತು ಕಾರ್ತಿಕ್ ಆರ್ಯನ್ ಅವರನ್ನು ನಿರ್ಲಕ್ಷಿಸುತ್ತಾಳೆ. ನಂತರ ಕುಪಿತಗೊಂಡ ಯುವತಿ ಕಾರ್ತಿಕ್ ಬಳಿ ತೆರಳಲು ಯತ್ನಿಸುತ್ತಾಳೆ. ಈ ವೇಳೆ ಬೇರೊಬ್ಬ ಯುವಕ ಮಧ್ಯ ಪ್ರವೇಶಿಸಿ 'ಅವರಿಗೆ ಕಣ್ಣು ಕಾಣಿಸುವುದಿಲ್ಲ' ಎಂದು ಯುವತಿಗೆ ಸಮಜಾಯಿಸಿ ನೀಡುತ್ತಾನೆ. ಇದನ್ನು ಕೇಳಿದ ಯುವತಿ ಅಲ್ಲಿನ ಹೊರಟುಹೋಗುತ್ತಾಳೆ ಮತ್ತು ಕಾರ್ತಿಕ್ ಧರ್ಮದೇಟಿನಿಂದ ಪಾರಾಗುತ್ತಾರೆ. ಬಳಿಕ ಕಾರ್ತಿಕ ಯುವಕನನ್ನು ನೋಡಿ ಕಣ್ಣುಹೊಡೆಯುತ್ತಾರೆ. ಕಾರ್ತಿಕ ಅವರ ಈ ವಿಡಿಯೋಗೆ ಸಕತ್ ಪ್ರತಿಕ್ರಿಯೆಗಳು ಬರಲಾರಂಭಿಸಿವೆ.
ಇತ್ತೀಚೆಗಷ್ಟೇ ಪೋಸ್ಟ್ ವೊಂದನ್ನು ಹರಿಬಿಟ್ಟ ಕಾರ್ತಿಕ್ ತಮ್ಮ ನೋವನ್ನು ತೋಡಿಕೊಂಡಿದ್ದರು. ಈ ಕುರಿತು ಬರೆದುಕೊಂಡ ಅವರು ಮೂರನೇ ಚಿತ್ರ ರಿಲೀಸ್ ಆಗುವ ತನಕ 12 ಸ್ನೇಹಿತರ ಜೊತೆ ಅವರು ಒಂದೇ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದರು ಎಂದು ಹೇಳಿಕೊಂಡಿದ್ದರು. ಶಾರುಕ್ ಅಭಿನಯದ 'ಬಾಜಿಗರ್' ಚಿತ್ರ ವಿಕ್ಷೀಸಿದ ಬಳಿಕ ತಾವು ನಟನಾಗಲು ನಿರ್ಧರಿಸಿರುವುದಾಗಿ ಹೇಳಿದ್ದರು. ಬಳಿಕ ವಿದ್ಯಾಭಾಸಕ್ಕಾಗಿ ಮುಂಬೈಗೆ ಶಿಫ್ಟ್ ಆಗಿರುವ ಕಾರ್ತಿಕ್, ವಿದ್ಯಾಭ್ಯಾಸದ ಜೊತೆಗೆ ತಮ್ಮನ್ನು ತಾವು ಆಡಿಶನ್ ನಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ. ಸದ್ಯ ಅವಕಾಶಗಳು ಅವರನ್ನು ಆರಿಸಿಕೊಂಡು ಬರುತ್ತಿದ್ದು, ಕಾರ್ತಿಕ್ ತಾವು ಚಿತ್ರಗಳಲ್ಲಿಯೇ ಕೆಲಸ ಮುಂದುವರೆಸುವುದಾಗಿ ತಮ್ಮ ಪೋಷಕರಿಗೆ ತಿಳಿಸಿದ್ದು, ಅದನ್ನೇ ಮುಂದುವರೆಸಿದ್ದಾರೆ.
ಇತ್ತೀಚಗಷ್ಟೇ ಕಾರ್ತಿಕ್ ಆರ್ಯನ್ ಅಭಿನಯದ 'ಪತಿ ಪತ್ನಿ ಔರ್ ವೋ' ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅವರೊಂದಿಗೆ ಅನನ್ಯ ಪಾಂಡೆ ಹಾಗೂ ಭೂಮಿ ಪೇಡ್ನೇಕರ್ ಕಾಣಿಸಿಕೊಂಡಿದ್ದಾರೆ. ನಂತರ ಅವರ 'ಲವ್ ಆಜ್-ಕಲ್ 2' ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಾರಾ ಅಲಿ ಖಾನ್ ಅವರ ಅಪೋಸಿಟ್ ನಟಿಸಿದ್ದಾರೆ.