Year Ender 2023: ಈ ವರ್ಷ Google ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಸಿನಿಮಾಗಳಿವು..

Most Searched Movies in 2023: ಗೂಗಲ್‌ನಲ್ಲಿ ಜನರು ಹಲವು ವಿಚಾರಗಳನ್ನು ಹುಡುಕುತ್ತಾರೆ. ಈ ವರ್ಷ ಅತಿ ಹೆಚ್ಚು ಜನರು ಈ ಒಂದು ಸಿನಿಮಾ ಕುರಿತು ಸರ್ಚ್‌ ಮಾಡಿದ್ದಾರೆ. 

Written by - Chetana Devarmani | Last Updated : Dec 14, 2023, 02:22 PM IST
  • Google ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಸಿನಿಮಾ
  • ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು
  • ಅತಿ ಹೆಚ್ಚು ಸರ್ಚ್ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ
Year Ender 2023: ಈ ವರ್ಷ Google ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಸಿನಿಮಾಗಳಿವು..  title=

Most Searched Movies in 2023: ಈ ವರ್ಷ ಕೊನೆಗೊಳ್ಳಲು ಎರಡೇ ವಾರಗಳು ಬಾಕಿ ಉಳಿದಿವೆ. ವಿಶ್ವದ ಪ್ರಮುಖ ಸರ್ಚ್ ಇಂಜಿನ್ ಗೂಗಲ್ ಈಗ ಡೇಟಾವನ್ನು ಬಿಡುಗಡೆ ಮಾಡುತ್ತಿದೆ. ಅದರಂತೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಸಿನಿಮಾಗಳ ಟಾಪ್ 10 ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. 

ಈ ಸಂದರ್ಭದಲ್ಲಿ ಗೂಗಲ್ 2023 ರಲ್ಲಿ ಅತಿ ಹೆಚ್ಚು ಸರ್ಚ್‌ ಆದ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಭಾರತದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಜಾಗತಿಕವಾಗಿ ಹೆಚ್ಚು ಸರ್ಚ್ ಆದ ಸಿನಿಮಾಗಳ ಪಟ್ಟಿಯಲ್ಲಿ ಜವಾನ್ ಮೂರನೇ ಸ್ಥಾನ ಪಡೆದಿರುವುದು ಕೂಡ ಗಮನಾರ್ಹ.  

ಇದನ್ನೂ ಓದಿ: ಜೋಗಿ ನಟಿ ಜೆನಿಫರ್ ಕೊತ್ವಾಲ್ ನೆನಪಿದ್ದಾರಾ, ಈಗ ಎಲ್ಲಿದ್ದಾರೆ ಏನ್ಮಾಡ್ತಿದ್ದಾರೆ ಗೊತ್ತೇ! 

ಇದಲ್ಲದೇ ಸನ್ನಿ ಡಿಯೋಲ್ ಅಭಿನಯದ ಗದರ್ 2 ಚಿತ್ರ ಎರಡನೇ ಸ್ಥಾನ ಪಡೆದುಕೊಂಡಿದೆ. ಕ್ರಿಸ್ಟೋಫರ್ ನೋಲನ್ ಅವರ ಓಪೆನ್‌ಹೈಮರ್ ಮೂರನೇ ಸ್ಥಾನದಲ್ಲಿದೆ. ಓಪನ್‌ಹೈಮರ್ ಈ ಪಟ್ಟಿಯಲ್ಲಿರುವ ಏಕೈಕ ಹಾಲಿವುಡ್ ಚಲನಚಿತ್ರವಾಗಿದೆ. 

ನಾಲ್ಕನೇ ಸ್ಥಾನದಲ್ಲಿ ಆದಿಪುರುಷ, ಶಾರುಖ್ ಖಾನ್ ಚಿತ್ರ ಪಠಾಣ್ ಐದನೇ ಸ್ಥಾನ ಪಡೆದುಕೊಂಡಿದೆ. ಸುದೀಪ್ತೋ ಸೇನ್ ಅವರ ವಿವಾದಾತ್ಮಕ ಚಿತ್ರ ದಿ ಕೇರಳ ಸ್ಟೋರಿ ಆರನೇ ಸ್ಥಾನದಲ್ಲಿದೆ. ಇದರ ನಂತರ ಏಳನೇ ಸ್ಥಾನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಇದೆ. ಈ ಪಟ್ಟಿಯಲ್ಲಿ ವಿಜಯ್ ಅಭಿನಯದ ಲಿಯೋ ಎಂಟನೇ ಸ್ಥಾನದಲ್ಲಿದ್ದರೆ, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಟೈಗರ್ 3 ಒಂಬತ್ತನೇ ಸ್ಥಾನದಲ್ಲಿದ್ದರೆ, ವರಿಸು ಹತ್ತನೇ ಸ್ಥಾನದಲ್ಲಿದೆ.

ಈ ವರ್ಷ Google ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಸಿನಿಮಾಗಳು: 

1. ಜವಾನ್

2. ಗದರ್ 2

3. ಓಪನ್‌ಹೈಮರ್

4. ಆದಿಪುರುಷ

5. ಪಠಾಣ್

6. ದಿ ಕೇರಳ ಸ್ಟೋರಿ

7. ಜೈಲರ್

8. ಲಿಯೋ 

9.‌ ಟೈಗರ್‌ 3

10. ವರಿಸು 

ಇದನ್ನೂ ಓದಿ: ಪೂಜಾ ಗಾಂಧಿ ತಂಗಿ ಯಾರು ಗೊತ್ತೇ, ಇವರು ಕೂಡ ಕನ್ನಡದ ಟಾಪ್‌ ನಟಿ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News