KGF ಚಾಪ್ಟರ್‌ 3 ನಲ್ಲಿ ನಟಿಸುತ್ತಾರಾ ಡಾರ್ಲಿಂಗ್‌ ಪ್ರಭಾಸ್!?

ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಆದರೆ ಇದೀಗ ಕೆಜಿಎಫ್‌ 2 ನೋಡಿದ ಜನರಲ್ಲಿ ಚಾಪ್ಟರ್‌ 3 ಬರಬಹುದಾ ಎಂಬ ಪ್ರಶ್ನೆ ಮೂಡಿದೆ. 

Written by - Chetana Devarmani | Last Updated : Apr 24, 2022, 05:25 PM IST
  • ಕೆಜಿಎಫ್‌ ಚಾಪ್ಟರ್‌ 3 ಬರಬಹುದಾ ಎಂಬ ಪ್ರಶ್ನೆ ಮೂಡಿದೆ
  • ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿನ ಕೊನೆಯ ಸೀನ್‌
  • KGF ಚಾಪ್ಟರ್‌ 3 ನಲ್ಲಿ ನಟಿಸುತ್ತಾರಾ ಡಾರ್ಲಿಂಗ್‌ ಪ್ರಭಾಸ್!?
KGF ಚಾಪ್ಟರ್‌ 3 ನಲ್ಲಿ ನಟಿಸುತ್ತಾರಾ ಡಾರ್ಲಿಂಗ್‌ ಪ್ರಭಾಸ್!?   title=
ಡಾರ್ಲಿಂಗ್‌ ಪ್ರಭಾಸ್

ಕೆಜಿಎಫ್‌ ಬಳಿಕ ಪ್ರಶಾಂತ್‌ ನೀಲ್‌ಗೆ ಊಹಿಸಿದಂತಹ ಬಿಗ್‌ ಹಿಟ್‌ ನೀಡಿತು ಕೆಜಿಎಫ್‌ ಚಾಪ್ಟರ್‌ 2. ಟ್ರೈಲರ್, ಟೀಸರ್ ಮತ್ತು​ ಹಾಡುಗಳಿಂದ ಹೈಪ್‌ ಕ್ರಿಯೇಟ್‌ ಮಾಡಿದ್ದ ಕೆಜಿಎಫ್‌ 2 ಸಿನಿಮಾ ಏಪ್ರಿಲ್‌ 14 ರಂದು ವಿಶ್ವದಾದ್ಯಂತ 10,500 ಅಧಿಕ ಸ್ಕ್ರೀನ್ ಗಳಲ್ಲಿ ತೆರೆ ಕಂಡಿದೆ.  ಕೊರೊನಾ ಕಾರಣದಿಂದಾಗಿ ತಡವಾಗಿ ರಿಲೀಸ್ ಆದ ಈ ಚಿತ್ರಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದರು. ಯಶ್ ಅಭಿಮಾನಿಗಳು ಕೆಜಿಎಫ್‌2 ಚಿತ್ರವನ್ನು ವೀಕ್ಷಿಸುತ್ತಿದ್ದು, ಫುಲ್‌ ಫಿದಾ ಆಗಿದ್ದಾರೆ.  ಕೆಜಿಎಫ್ ಚಾಪ್ಟರ್ 1ರ ಬಳಿಕ ಕೆಜಿಎಫ್ ಚಾಪ್ಟರ್ 2 ಬಗ್ಗೆ ಸಹಜವಾಗಿಯೇ ನಿರೀಕ್ಷೆ ಡಬಲ್‌ ಆಗಿತ್ತು. ಗರುಡನ ಕೊಲೆ.. ನರಾಚಿ ಲೋಕ.. ರಾಕಿಭಾಯ್‌ ಲುಕ್‌ನಿಂದಾಗಿ ಈ ಸಿನಿಮಾ ಹೈಪ್ ಪಡೆದುಕೊಂಡಿದೆ. ಕೆಜಿಎಫ್ 2  ವಿಶ್ವದೆಲ್ಲೆಡೆ ಹೊಸ ಟ್ರೆಂಡ್‌ ಕ್ರಿಯೇಟ್‌ ಮಾಡಿತ್ತು. ಆದರೆ ಇದೀಗ ಕೆಜಿಎಫ್‌ 2 ನೋಡಿದ ಜನರಲ್ಲಿ ಚಾಪ್ಟರ್‌ 3 ಬರಬಹುದಾ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಮುಖ್ಯ ಕಾರಣ ಸಿನಿಮಾದಲ್ಲಿನ ಕೊನೆಯ ಸೀನ್‌. 

ಇದನ್ನೂ ಓದಿ: ಭರ್ಜರಿ ಲಾಟ್ರಿ! ಆಲಿಯಾ ಭಟ್‌ ನಟಿಸಬೇಕಿದ್ದ ಆ ಸ್ಟಾರ್​ ಮೂವಿಯಲ್ಲಿ ರಶ್ಮಿಕಾ ಮಂದಣ್ಣ!!

ಕೆಜಿಎಫ್ ಚಾಪ್ಟರ್‌ 2 ಚಿತ್ರದ ಕೊನೆಯಲ್ಲಿ ಕೆಜಿಎಫ್ ತಯಾರಕರು ಪ್ರೇಕ್ಷಕರನ್ನು ಅಚ್ಚರಿಗೊಳಿಸಿದ್ದಾರಂತೆ. ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆಜಿಎಫ್2 ಸೃಷ್ಟಿಸಿದ್ದ ಕ್ರೇಜ್ ಅಷ್ಟಿಷ್ಟಲ್ಲ. 2018 ರಲ್ಲಿ ರಿಲೀಸ್ ಆಗಿದ್ದ  ಕೆಜಿಎಫ್ ಇಡೀ ವಿಶ್ವವೇ ಕನ್ನಡ  ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿತ್ತು. ಅಲ್ಲಿಂದ ಕೆಜಿಎಫ್ ಕೇವಲ ಸಿನಿಮಾ ಆಗಿ ಮಾತ್ರವಲ್ಲ ಒಂದು ಬ್ರ್ಯಾಂಡ್ ಆಗಿ ಹವಾ ಹುಟ್ಟು ಹಾಕಿತು. ಇದೀಗ ಕೆಜಿಫ್‌ನ ಮತ್ತೊಂದು ಚಾಪ್ಟರ್‌ ಬರಲಿದ್ಯಾ ಎಂಬ ಪ್ರಶ್ನೆ ಜನ ಮಾನಸದಲ್ಲಿ ಮೂಡಿದೆ. ಕೆಜಿಎಫ್ 3 ಲೋಡ್ ಆಗುತ್ತಿದೆ ಎಂಬ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ ಕೆಜಿಎಫ್‌ 2 ಚಿತ್ರದ ಕೊನೆಯಲ್ಲಿ ಬರುವ ಆ ಒಂದು ಟ್ವಿಸ್ಟ್‌. ಆದರೆ ಕೆಜಿಎಫ್‌3 ಬಗ್ಗೆ ಚಿತ್ರತಂಡದ ಯಾರೊಬ್ಬರು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿಲ್ಲ. 

ರಾಕಿಭಾಯ್ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಅಭಿನಯದ KGF2 ಕುರಿತು ಇಡೀ ವಿಶ್ವವೇ ಮಾತನಾಡುತ್ತಿದೆ. ಒಂದಾದ ಮೇಲೆ ಒಂದು ದಾಖಲೆ ಬರೆಯುತ್ತಿದೆ. ಅಲ್ಲದೇ ಗಲ್ಲಾಪೆಟ್ಟಿಗೆಯಲ್ಲೂ ಸಖತ್‌ ಸದ್ದು ಮಾಡುತ್ತಿದೆ. ಈ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರೂ ಕೆಜಿಎಫ್‌ 3 ಬರಬಹುದು ಎಂಬ ನೀರೀಕ್ಷೆಯಲ್ಲಿದ್ದಾರೆ. ಈ ಊಹಾಪೋಹಗಳ ಬೆನ್ನಲ್ಲೇ KGF 3 ನಲ್ಲಿ ಟಾಲಿವುಡ್ ಸ್ಟಾರ್ ನಟ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ವೈರಲ್‌ ಆಗುತ್ತಿದೆ. ಡಾರ್ಲಿಂಗ್ ಪ್ರಭಾಸ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಜೊತೆ ಕೆಜಿಎಫ್‌ ಚಾಪ್ಟರ್‌ 3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಸಿಪ್‌ ಎಲ್ಲೆಡೆ ಶುರುವಾಗಿದೆ. 

ಇದನ್ನೂ ಓದಿ: ಕೆಜಿಎಫ್ 2 ಚಿತ್ರ ನನ್ನ ಸಾಮರ್ಥ್ಯವನ್ನು ಮತ್ತೊಮ್ಮೆ ನೆನಪಿಸಿತು - ಸಂಜಯ್ ದತ್

ಸದ್ಯ ಫ್ಯಾನ್ಸ್ ಗಳು ಇವರನ್ನು ದೊಡ್ಡ ಪರದೆಯ ಮೇಲೆ ನೋಡಲು ಕಾತುರದಿಂದ ಕಾದುಕುಳಿತ್ತಿದ್ದಾರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಬಹು ನಿರೀಕ್ಷಿತ ಚಿತ್ರ ಸಲಾರ್ ನಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆ ಕೆಜಿಎಫ್‌ 3 ಬರುತ್ತೆ ಎಂದು ಪ್ರಶಾಂತ್ ನೀಲ್ ಈಗಾಗಲೇ ಖಚಿತಪಡಿಸಿದ್ದಾರೆ. ಎಲ್ಲದರ ನಡುವೆ ಡಾರ್ಲಿಂಗ್ ಪ್ರಭಾಸ್ ಕೆಜಿಎಫ್ 3ನಲ್ಲಿ ನಟಿಸುವ ಸಾಧ್ಯತೆಯಿದೆಯಂತೆ. ಪ್ರಭಾಸ್ ಬಹುಶಃ ಯಶ್ ಅವರ ಕೆಜಿಎಫ್ 3 ನಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಾರಂತೆ. ಆದರೆ ಈ ಬಗ್ಗೆ ನಟ ಪ್ರಭಾಸ್‌ ಆಗಲಿ ಅಥವಾ ಕೆಜಿಎಫ್‌ ಚಿತ್ರತಂಡವಾಗಲಿ ಯಾವುದೇ ಮಾಹಿತಿ ನೀಡಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News