ನಿರ್ಮಾಪಕರಿಗೆ 500 ಕೋಟಿ ನಷ್ಟದೊಂದಿಗೆ ಫ್ಲಾಪ್‌ ಚಿತ್ರಗಳನ್ನು ನೀಡಿದ ಸ್ಟಾರ್ ನಟ..! ಮತ್ತೆ ತಮ್ಮ ಛಾಪು ಮೂಡಿಸುತ್ತಾರಾ?

Darling Prabhas: ಪ್ಯಾನ್ ಇಂಡಿಯಾ ಹಿಟ್‌ಗಳಲ್ಲಿ ನಟಿಸಿದ ಅದೇ ಪ್ರಭಾಸ್ ಸದ್ಯ ಅವರ ವೃತ್ತಿಜೀವನದಲ್ಲಿ ದೊಡ್ಡ ವೈಫಲ್ಯತೆಯನ್ನು ಕಾಣುತ್ತಿದ್ದಾರೆ.    

Written by - Savita M B | Last Updated : Oct 21, 2023, 01:09 PM IST
  • ಚಿತ್ರದ ಹಿಟ್ ಅಥವಾ ಫ್ಲಾಪ್ ಕೇವಲ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುವುದಿಲ್ಲ
  • ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಫ್ಲಾಪ್‌ಗಳನ್ನು ನೀಡಿದ್ದು ಈ ಸ್ಟಾರ್‌ ನಟ
  • ಪ್ಯಾನ್ ಇಂಡಿಯಾ ಹಿಟ್‌ಗಳಲ್ಲಿ ನಟಿಸಿದ ನಟ ದೊಡ್ಡ ಫ್ಲಾಪ್‌ ಚಿತ್ರಗಳನ್ನು ನೀಡಿದ್ದಾರೆ.
ನಿರ್ಮಾಪಕರಿಗೆ 500 ಕೋಟಿ ನಷ್ಟದೊಂದಿಗೆ ಫ್ಲಾಪ್‌ ಚಿತ್ರಗಳನ್ನು ನೀಡಿದ ಸ್ಟಾರ್ ನಟ..! ಮತ್ತೆ ತಮ್ಮ ಛಾಪು ಮೂಡಿಸುತ್ತಾರಾ? title=

Prabhas Movie Updates: ಚಿತ್ರದ ಹಿಟ್ ಅಥವಾ ಫ್ಲಾಪ್ ಕೇವಲ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗಿರುವುದಿಲ್ಲ. ಏಕೆಂದರೆ ಪ್ರತಿ ಚಿತ್ರದಲ್ಲೂ ನೂರಾರು ಸಿಬ್ಬಂದಿಗಳು ಕೆಲಸ ಮಾಡುತ್ತಾರೆ, ಅವರೆಲ್ಲರೂ ಚಿತ್ರದ ಯಶಸ್ಸಿಗೆ ಕೊಡುಗೆ ನೀಡುತ್ತಾರೆ. ಆದರೆ ನಟರು ಮತ್ತು ನಿರ್ದೇಶಕರು ಪ್ರತಿ ಚಿತ್ರದ ಮುಖವಾಗಿರುವುದರಿಂದ ಅದರ ಯಶಸ್ಸು ಮತ್ತು ವೈಫಲ್ಯದ ಜವಾಬ್ದಾರಿ ಅವರ ಮೇಲೆ ಬೀಳುತ್ತದೆ. ಆದ್ದರಿಂದ, ಬಹು ಹಿಟ್‌ಗಳನ್ನು ಹೊಂದಿರುವ ನಟರು ಸೂಪರ್‌ಸ್ಟಾರ್ ಆಗುತ್ತಾರೆ.

ಇನ್ನು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಫ್ಲಾಪ್‌ಗಳನ್ನು ನೀಡಿದ್ದು ಈ ಸ್ಟಾರ್‌ ನಟ. ಅವರೇ ಪ್ರಭಾಸ್. ಪ್ಯಾನ್ ಇಂಡಿಯಾ ಹಿಟ್‌ಗಳಲ್ಲಿ ನಟಿಸಿದ ಅದೇ ಪ್ರಭಾಸ್ ದೊಡ್ಡ ಫ್ಲಾಪ್‌ ಚಿತ್ರಗಳನ್ನು ನೀಡಿದ್ದಾರೆ. 

ಇದನ್ನೂ ಓದಿ-ಹಳ್ಳಿ ಸೊಡಗಿನ ಸಿನಿಮಾ ಮೂಲಕ ಮತ್ತೆ ಬರ್ತಿದ್ದಾರೆ 'ರಾಜಹಂಸ' ಹೀರೋ ಗೌರಿ ಶಂಕರ್  

ಬಾಹುಬಲಿಯ ಅಗಾಧ ಯಶಸ್ಸಿನ ನಂತರ ಬಿಡುಗಡೆಯಾದ ಪ್ರಭಾಸ್ ಅವರ ಬಹು ನಿರೀಕ್ಷಿತ ಸಾಹೋ, ಬಾಕ್ಸ್ ಆಫೀಸ್ ಯಶಸ್ಸನ್ನು ಕಂಡಿತು, ಆದರೆ ವಿಮರ್ಶಾತ್ಮಕ ಹಿನ್ನಡೆಯನ್ನು ಎದುರಿಸಿತು. ಚಿತ್ರವು ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಇದರ ನಂತರ ಪ್ರಭಾಸ್ ಅಭಿನಯದ ರಾಧೆ ಶ್ಯಾಮ್ ಮತ್ತು ಆದಿಪುರುಷ ದೊಡ್ಡ ಫ್ಲಾಪ್ ಆಗಿದ್ದವು.

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಫ್ಲಾಪ್ ಆಗಿದ್ದ ಈ ಎರಡು ಚಿತ್ರಗಳು ಸುಮಾರು ರೂ. 400 ಕೋಟಿ ನಷ್ಟವನ್ನುಂಟುಮಾಡಿವೆ ಎನ್ನಲಾಗಿದೆ. ಒಟ್ಟಾರೆಯಾಗಿ ಪ್ರಭಾಸ್ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ನಿರ್ಮಾಪಕರಿಗೆ 500 ಕೋಟಿಗೂ ಹೆಚ್ಚು ನಷ್ಟ ಉಂಟು ಮಾಡಿದೆ.

ಜನಪ್ರಿಯ ತೆಲುಗು ನಟ ಪ್ರಭಾಸ್ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಪ್ರಭಾಸ್ ತಮ್ಮ 20 ವರ್ಷಗಳ ಸಿನಿಮಾ ಜೀವನದಲ್ಲಿ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರ ಕೆಲಸ ಮಾಡಿದ್ದಾರೆ. ಅವರು 2002 ರಲ್ಲಿ ತೆಲುಗು ಚಿತ್ರ ಈಶ್ವರ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

ನಂತರ, 2015 ರಲ್ಲಿ ಬ್ಲಾಕ್‌ಬಸ್ಟರ್‌ಗಳಾದ ಬಾಹುಬಲಿ 1 ಮತ್ತು ಬಾಹುಬಲಿ 2 ನಲ್ಲಿ ನಟಿಸುವ ಮೂಲಕ ಪ್ರಭಾಸ್‌ ಪ್ಯಾನ್ ಇಂಡಿಯಾ ನಟರಾದರು. ಈ ಎರಡೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಬರೆದವು ಮತ್ತು ಭಾರತದ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಾದವು.

ಬಾಹುಬಲಿ ಚಿತ್ರಗಳ ಯಶಸ್ಸಿನ ನಂತರ ಪ್ರಭಾಸ್ ಚಿತ್ರಗಳ ಮೇಲಿನ ನಿರೀಕ್ಷೆಗಳು ಹಲವು ಪಟ್ಟು ಹೆಚ್ಚಾಯಿತು. ಆದರೆ ಇತ್ತೀಚೆಗೆ ಪ್ರಭಾಸ್ ತಮ್ಮ ಪರದೆಯ ವೃತ್ತಿಜೀವನದಲ್ಲಿ ಕೆಟ್ಟ ಹಂತವನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು. 

ಇದನ್ನೂ ಓದಿ-ರಜನಿಕಾಂತ್ ವೈರಲ್‌ ಫೋಟೋ ಹಿಂದಿನ ರಹಸ್ಯ ಬಯಲು..! ಅಸಲಿಗೆ ಸತ್ಯ ಏನ್‌ ಗೊತ್ತಾ..?

ಸದ್ಯ ಪ್ರಭಾಸ್ ಬಾಕ್ಸ್ ಆಫೀಸ್ನಲ್ಲಿ ತತ್ತರಿಸುತ್ತಿದ್ದಾರೆ. ಆದರೆ ಈ ಸೋಲುಗಳನ್ನು ಯಶಸ್ಸಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಪ್ರಭಾಸ್ ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆಯೇ? ಬ್ಲಾಕ್ ಬಸ್ಟರ್ ಚಿತ್ರ ಕೆಜಿಎಫ್ ನಿರ್ದೇಶಿಸಿದ್ದ ಪ್ರಶಾಂತ್ ನೀಲ್, ಪ್ರಭಾಸ್ ಜೊತೆ ಸಲಾರ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದರಿಂದಾಗಿ ಚಿತ್ರವು ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಈ ಚಿತ್ರದ ಯಶಸ್ಸಿನೊಂದಿಗೆ ಪ್ರಭಾಸ್ ಮತ್ತೊಮ್ಮೆ ತಮ್ಮ ಸ್ಥಾನವನ್ನು ಪಡೆದುಕೊಳ್ಳುವ ನಿರೀಕ್ಷೆಯಿದೆ.

ಸಲಾರ್ ಜೊತೆಗೆ, ಕಲ್ಕಿ 2898 AD ನಲ್ಲಿ ಪ್ರಭಾಸ್ ನಟಿಸುತ್ತಿದ್ದಾರೆ. ಇದು ಭಾರತದಲ್ಲೇ ಅತಿ ಹೆಚ್ಚು ಬಜೆಟ್ಟಿನ ಚಿತ್ರವಾಗಿದ್ದು, ಬಹು ನಿರೀಕ್ಷಿತ ಚಿತ್ರವೂ ಹೌದು. ಪ್ರಭಾಸ್ ತಮ್ಮ ಸತತ ಸೋಲುಗಳಿಂದ ಪುಟಿದೇಳುತ್ತಾರೋ?ಇಲ್ಲವೋ? ಮ್ತತು ಈ 2 ಚಿತ್ರಗಳ ಮೂಲಕ ಭಾರೀ ಹಿಟ್ ದಾಖಲಿಸುತ್ತಾರೋ? ಇಲ್ಲವೋ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News