Highest Paid Actor: ಶಾರುಖ್, ಸಲ್ಮಾನ್ ಅಲ್ಲ.. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಇವರೇ

India’s highest paid actor: ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಬಾಲಿವುಡ್‌ನ ಇತರ ದೊಡ್ಡ ಸೂಪರ್‌ಸ್ಟಾರ್‌ಗಳು ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿದ್ದಾರೆ. ಆದರೆ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ. ಇನ್ನೊಬ್ಬ ನಟನಿದ್ದಾರೆ, ಅವರೇ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಆ ಹೆಸರು ನಿಮ್ಮನ್ನು ಆಶ್ಚರ್ಯಗೊಳಿಸುತ್ತದೆ.

Written by - Chetana Devarmani | Last Updated : Jun 5, 2023, 11:29 AM IST
  • ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಇವರೇ
  • ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ ಆ ಹೆಸರು
  • ಶಾರುಖ್, ಸಲ್ಮಾನ್ ರನ್ನು ಮೀರಿಸುತ್ತೆ ಇವರ ಸಂಭಾವನೆ
Highest Paid Actor: ಶಾರುಖ್, ಸಲ್ಮಾನ್ ಅಲ್ಲ.. ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಇವರೇ  title=

India’s highest paid actor: ಬಾಲಿವುಡ್‌ ಎಂದ ತಕ್ಷಣ ಮೊದಲು ಮನರಂಜನೆ ಆದರೆ ನಂತರ ತಲೆಗೆ ಬರುವ ಎರಡನೇ ಆಲೋಚನೆಯೇ ಸಂಭಾವನೆ. ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಭಾರೀ ಮೊತ್ತದ ಬಜೆಟ್‌ನಲ್ಲಿ ಸಿನಿಮಾಗಳನ್ನು ನಿರ್ಮಿಸುತ್ತಾರೆ. ಅಲ್ಲದೇ ನಟರು ಸಹ ಕೋಟಿ ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ. ಅಮಿತಾಬ್‌ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಬಾಲಿವುಡ್‌ನ ಇತರ ದೊಡ್ಡ ತಾರೆಯರು ಚಿತ್ರದ ಸಂಪೂರ್ಣ ಬಜೆಟ್‌ಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಾರೆ. 

ಬಾಲಿವುಡ್‌ನ ಮೂವರು ಖಾನ್‌ಗಳು ಅಥವಾ ದಕ್ಷಿಣದ ಸೂಪರ್‌ಸ್ಟಾರ್‌ಗಳಾದ ಪ್ರಭಾಸ್ ಅಥವಾ ಅಲ್ಲು ಅರ್ಜುನ್ ಯಾರೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲ. ಈ ನಟರಿಗಿಂತ ಹೆಚ್ಚು ಶುಲ್ಕ ವಿಧಿಸುವ ಒಬ್ಬ ನಟರಿದ್ದಾರೆ. ಅವರೇ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ.  

ಇದನ್ನೂ ಓದಿ: Pooja Hegde: ಮಾಧುರಿ ದೀಕ್ಷಿತ್ ಜೊತೆಗಿನ ಸ್ಮರಣೀಯ ಕ್ಷಣವನ್ನು ಹಂಚಿಕೊಂಡ ಪೂಜಾ ಹೆಗ್ಡೆ

ಬಾಲಿವುಡ್ ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಪ್ರತಿ ಚಿತ್ರಕ್ಕೆ 100-150 ಕೋಟಿಗಿಂತ ಹೆಚ್ಚು ಶುಲ್ಕ ವಿಧಿಸುತ್ತಾರೆ ಎಂದು ವರದಿಗಳು ಹೇಳುತ್ತವೆ. ಇನ್ನೂ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ತಮಿಳಿನ ಸೂಪರ್ ಸ್ಟಾರ್ ಒಬ್ಬರಿಗಿದೆ. ಪ್ರಶ್ನೆಯಲ್ಲಿರುವ ಹೆಸರು ವಿಜಯ್ ಜೋಸೆಫ್ ಅವರೇ ದಳಪತಿ ವಿಜಯ್. 

ಹೌದು, ದಳಪತಿ ವಿಜಯ್ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ವರದಿಗಳ ಪ್ರಕಾರ, ದಳಪತಿ ವಿಜಯ್ ತಮ್ಮ ಮುಂದಿನ ಚಿತ್ರಕ್ಕಾಗಿ 200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗ್ತಿದೆ. 

ಇದನ್ನೂ ಓದಿ: ನಾನು ಒಂದು ದಿನಕ್ಕೆ 4 ಲಕ್ಷ ರೂ. ದುಡಿತಿದ್ದೆ..! ಆ ದಿನಗಳನ್ನು ನೆನೆದ ಶಕೀಲಾ

ವಿಜಯ್ ಕಳೆದ 27 ವರ್ಷಗಳಿಂದ ಚಲನಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿಯವರೆಗೆ ನಟ ಸುಮಾರು 66 ಚಿತ್ರಗಳಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 500 ರೂಪಾಯಿಗಳ ಮೊದಲ ಸಂಭಾವನೆಯನ್ನು ಸ್ವೀಕರಿಸುವ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಟ ದಳಪತಿ ವಿಜಯ್ ಈಗ ಪ್ರತಿ ಚಿತ್ರಕ್ಕೆ 200 ಕೋಟಿ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿಕೊಂಡಿದ್ದಾರೆ. 

ನಟ ನಿರ್ದೇಶಕ ವೆಂಕಟ್ ಪ್ರಭು ಅವರ 68 ನೇ ಚಿತ್ರದಲ್ಲಿ ದಳಪತಿ ವಿಜಯ್ ನಟಿಸಲಿದ್ದಾರೆ. ರಕ್ಷಿತ್ ಶೆಟ್ಟಿ - ರಶ್ಮಿಕಾ ನಿಶ್ಚಿತಾರ್ಥ ಮುರಿದು ಬೀಳಲು ಅಸಲಿ ಕಾರಣವನ್ನು ಅವರ ತಾಯಿ ತಿಳಿಸಿದ್ದು, ಇದು ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದೆ. 21 ಮೇ 2023 ರಂದು, ತಾತ್ಕಾಲಿಕವಾಗಿ 'ತಲಪತಿ 68' ಶೀರ್ಷಿಕೆಯ ಚಲನಚಿತ್ರವನ್ನು ಘೋಷಿಸಲಾಯಿತು. ಎಜಿಎಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ವರದಿಗಳ ಪ್ರಕಾರ, ವಿಜಯ್ ಈ ಚಿತ್ರಕ್ಕಾಗಿ 200 ಕೋಟಿ ರೂಪಾಯಿಗಳ ಸಂಭಾವನೆ ಪಡೆಯುತ್ತಿದ್ದಾರಂತೆ. ಅದು ಅವರನ್ನು ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟನನ್ನಾಗಿ ಮಾಡುತ್ತದೆ ಎಂದು ವರದಿಯಾಗಿದೆ. 

ಇದನ್ನೂ ಓದಿ: ಸಿನಿಮಾ ಸೆಟ್‌ನಲ್ಲಿ ಪ್ರಶಾಂತ್​ ನೀಲ್​ ಹೀಗಿರ್ತಾರೆ ನೋಡಿ.. ‘ಸಲಾರ್​’ ಚಿತ್ರತಂಡದಿಂದ ಸ್ಪೆಷಲ್‌ ವಿಡಿಯೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News