ತೆಲುಗು ಕಿರುತೆರೆ ನಟಿ ನಾಗಾ ಝಾನ್ಸಿ ಆತ್ಮಹತ್ಯೆ

ತೆಲುಗು ಕಿರುತೆರೆ ನಟಿ ನಾಗಾ ಝಾನ್ಸಿ(21) ಹೈದರಾಬಾದ್ ನ ಶ್ರೀನಗರ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Feb 6, 2019, 12:45 PM IST
ತೆಲುಗು ಕಿರುತೆರೆ ನಟಿ ನಾಗಾ ಝಾನ್ಸಿ ಆತ್ಮಹತ್ಯೆ  title=

ನವದೆಹಲಿ: ತೆಲುಗು ಕಿರುತೆರೆ ನಟಿ ನಾಗಾ ಝಾನ್ಸಿ(21) ಹೈದರಾಬಾದ್ ನ ಶ್ರೀನಗರ ಕಾಲೋನಿಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪೋಲಿಸರರು ಹೇಳುವಂತೆ ಈ ಘಟನೆ ನಡೆದಾಗ ನಟಿ ಮನೆಯಲ್ಲಿ ಒಬ್ಬರೇ ಇದ್ದರೆಂದು ತಿಳಿದುಬಂದಿದೆ. ಈ ಸಂದರ್ಭದಲ್ಲಿ ಆಕೆಯ ಸಹೋದರ ದುರ್ಗಾ ಪ್ರಸಾದ್  ನೆರೆಹೊರೆಯವರಿಗೆ  ಗಮನಕ್ಕೆ ತಂದಿದ್ದಾರೆ,ತಂದನಂತರ ಬಾಗಿಲನ್ನು ಒಡೆದಾಗ ಮನೆಯಲ್ಲಿ ಅವರು ಸೀಲಿಂಗ್ ಫ್ಯಾನ್ ನಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.ನಂತರ ಅವರ ಶವವನ್ನು ಸರ್ಕಾರಿ ಗಾಂಧಿ ಆಸ್ಪತ್ರೆಗೆ ಪರೀಕ್ಷೆಗಾಗಿ ಕಳುಹಿಸಲಾಯಿತು.ಈಗ  ಪ್ರಕರಣವನ್ನು ಪುಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ

ಮೂಲತಃ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯವರಾಗಿದ್ದ ಝಾನ್ಸಿ MAA ಟಿವಿಯಲ್ಲಿ "ಪವಿತ್ರ ಬಂಧನ್" ಸೇರಿದಂತೆ ಹಲವು  ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅಮೀರ್ಪೆಟ್ ಪ್ರದೇಶದಲ್ಲಿ ಬ್ಯೂಟಿ ಪಾರ್ಲರ್ ನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
 

Trending News