ಸ್ಟಾರ್ ಹೀರೋ ಜೊತೆ ಡ್ಯಾಶಿಂಗ್ ಓಪನರ್.. ಬಾಲಿವುಡ್‌ಗೆ ಎಂಟ್ರಿಕೊಡ್ತಾರಾ ಸ್ಟಾರ್‌ ಕ್ರಿಕೆಟಿಗ?!

Shikar Dhawan: ಸಿನಿಮಾ ಜಗತ್ತಿಗೂ ಕ್ರಿಕೆಟ್‌ಗೂ ನಿಕಟ ಸಂಬಂಧವೊಂದಿದೆ.. ಅನೇಕ ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾಗಿದ್ದಾರೆ... ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕೆಲವು ಕ್ರಿಕೆಟ್ ತಾರೆಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. 

Written by - Savita M B | Last Updated : Jun 6, 2024, 01:41 PM IST
  • ಸಿನಿಮಾ ಜಗತ್ತಿಗೂ ಕ್ರಿಕೆಟ್‌ಗೂ ನಿಕಟ ಸಂಬಂಧವೊಂದಿದೆ
  • ಅನೇಕ ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾಗಿದ್ದಾರೆ.
ಸ್ಟಾರ್ ಹೀರೋ ಜೊತೆ ಡ್ಯಾಶಿಂಗ್ ಓಪನರ್.. ಬಾಲಿವುಡ್‌ಗೆ ಎಂಟ್ರಿಕೊಡ್ತಾರಾ ಸ್ಟಾರ್‌ ಕ್ರಿಕೆಟಿಗ?! title=

Shikar Dhawan Entry to Bollywood : ಸಿನಿಮಾಕ್ಕೂ ಕ್ರಿಕೆಟ್‌ಗೂ ನಿಕಟ ಸಂಬಂಧವಿದೆ. ಅನೇಕ ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾಗಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಕೆಲವು ಕ್ರಿಕೆಟ್ ತಾರೆಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕೆಲವರು ಚಿತ್ರಗಳನ್ನೂ ನಿರ್ಮಿಸುತ್ತಿದ್ದಾರೆ.. ಹಾಗಾಗಿಯೇ ಚಿತ್ರರಂಗಕ್ಕೂ ಕ್ರಿಕೆಟಿಗರಿಗೂ ಅವಿನಾಭಾವ ಸಂಬಂಧ ಎಂದು ಹೇಳಲಾಗುತ್ತಿದೆ. ಇದೆಲ್ಲದರ ಮಧ್ಯೆ ಖ್ಯಾತ ಕ್ರಿಕೆಟರ್‌ವೊಬ್ಬರು ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವಾಗಲೇ ಚಿತ್ರರಂಗಕ್ಕೆ ಪ್ರವೇಶಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.  

 ಗಂಭೀರ್ ನಂತರ ಭಾರತ ತಂಡದಲ್ಲಿ ಉತ್ತಮ ಓಪನರ್ ಎಂದು ಗುರುತಿಸಿಕೊಂಡು ಹಲವು ಬಾರಿ ತಂಡವನ್ನು ಗೆದ್ದುಕೊಂಡಿರುವ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಇದೀಗ ಚಿತ್ರರಂಗಕ್ಕೆ ಕಾಲಿಡುವ ಆಸೆ ವ್ಯಕ್ತಪಡಿಸಿದ್ದಾರೆ. ಈಗಲೂ ಐಪಿಎಲ್ ನಲ್ಲಿ ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿರುವ ಶಿಖರ್ ಧವನ್ ಸಿನಿಮಾಗಳಲ್ಲಿ ನಟಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ-ಸೀರೆಯುಟ್ಟ ಶ್ರೀಲೀಲಾ... ಇದಲ್ಲವೇ ಸೌಂದರ್ಯ ಅಂದ್ರೆ..! ಫೊಟೋಸ್‌ ಇಲ್ಲಿವೆ

 ಈಗಾಗಲೇ ಜಿಯೋ ಸಿನಿಮಾಗಳಲ್ಲಿ ಶೋ ಆರಂಭಿಸಿ ಮನರಂಜನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ಶಿಖರ್ ಈಗ ನಟನೆಯನ್ನು ಪ್ರಯತ್ನಿಸಲು ಬಯಸಿದ್ದಾರೆ. ಸದ್ಯದಲ್ಲೇ ‘ಧವನ್ ಕರೆಂಗೆ’ ಟಾಕ್ ಶೋ ಆರಂಭವಾಗಲಿದೆ. ಇತ್ತೀಚೆಗಷ್ಟೇ ಅಮೀರ್ ಖಾನ್ ನಿರ್ದೇಶನದ 'ಸಿತಾರೆ ಜಮೀನ್ ಪರ್' ಚಿತ್ರದ ಸೆಟ್‌ನಲ್ಲಿ ಶಿಖರ್ ಧವನ್ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಅಮೀರ್ ಖಾನ್ ಜೊತೆ ಧವನ್ ನಟಿಸಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಇದನ್ನೂ ಓದಿ-ಕಾಜಲ್‌ ಅಗರ್ವಾಲ್‌ ಸೆಕೆಂಡ್‌ ಇನ್ನಿಂಗ್ಸ್‌, ತೆರೆಗೆ ಬರಲು ಸಜ್ಜಾಯ್ತು 'ಸತ್ಯಭಾಮ'

ಈ ಸಂದರ್ಭದಲ್ಲಿ ಧವನ್, 'ಅಮೀರ್ ಖಾನ್ ನನಗೆ ಅಣ್ಣನಿದ್ದಂತೆ. ನಾನು ಅವರೊಂದಿಗೆ ಸ್ವಲ್ಪ ಸಮಯ ಕಳೆಯಲು ಸೆಟ್‌ಗೆ ಹೋಗಿದ್ದೆ. ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕರೆ ಖಂಡಿತಾ ಮಿಸ್‌ ಮಾಡುವುದಿಲ್ಲ. ನಾನು ಕ್ಯಾಮೆರಾ ಮುಂದೆ ಇರಲು ಇಷ್ಟಪಡುತ್ತೇನೆ. ಇನ್ನು ಮುಂದೆ ಇನ್ನಷ್ಟು ಚಿತ್ರಗಳಲ್ಲಿ ನಟಿಸಲು ಪ್ರಯತ್ನಿಸುತ್ತೇನೆ,’’ ಎಂದಿದ್ದಾರೆ.. 

 ಇನ್ನು 2022 ರಲ್ಲಿ, ಹುಮಾ ಖುರೇಷಿ ಅಭಿನಯದ ಡಬಲ್ ಎಕ್ಸ್‌ಎಲ್‌ನಲ್ಲಿ ಧವನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಲಾಲ್ ಸಿಂಗ್ ಚಡ್ಡಾ ನಂತರ 2 ವರ್ಷಗಳ ಸುದೀರ್ಘ ಗ್ಯಾಪ್ ತೆಗೆದುಕೊಂಡು ಅಮೀರ್ ಸಿತಾರೆ ಜಮೀನ್ ಪರ್ ಚಿತ್ರದ ಮೂಲಕ ಥಿಯೇಟರ್‌ಗಳಿಗೆ ಬರಲಿದ್ದಾರೆ. ಜೆನಿಲಿಯಾ ದೇಶಮುಖ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News