ಹಸಿ ಬಿಸಿ ಪಾತ್ರ ಮಾಡೋಕೆ ಮಿಲ್ಕಿ ಬ್ಯೂಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?

Tamannaah bhatia lust stories 2 : ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ಸುಂದರಿ ತಮನ್ನಾ ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ತಮನ್ನಾ ನಟನೆಯ ಲಸ್ಟ್ ಸ್ಟೋರೀಸ್ 2 ಬಿಡುಗಡೆಯಾಗಿ ಪ್ರಸ್ತುತ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ವೆಬ್ ಸೀರೀಸ್​ನಲ್ಲಿ ತಮನ್ನಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. 

Written by - Krishna N K | Last Updated : Jul 2, 2023, 03:35 PM IST
  • ನಟಿ ತಮನ್ನಾ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ.
  • ಇತ್ತೀಚಿಗಷ್ಟೇ ತಮನ್ನಾ ನಟನೆಯ ಲಸ್ಟ್ ಸ್ಟೋರೀಸ್ 2 ಬಿಡುಗಡೆಯಾಗಿತ್ತು.
  • ಈ ಚಿತ್ರದಲ್ಲಿ ನಟಿಸಲು ತಮನ್ನಾ ಪಡೆದ ಸಂಭಾವನೆ ಕುರಿತ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಹಸಿ ಬಿಸಿ ಪಾತ್ರ ಮಾಡೋಕೆ ಮಿಲ್ಕಿ ಬ್ಯೂಟಿ ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ..? title=

Tamannaah bhatia remuneration : ಬಿಟೌನ್‌ ಸುಂದರಿ ತಮನ್ನಾ ಭಾಟಿಯಾ ಕಳೆದ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಲ್ಲಿದ್ದಾರೆ. ನಟ ವಿಜಯ್‌ ಜೊತೆ ಲಸ್ಟ್‌ ಸ್ಟೋರಿಯಲ್ಲಿ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿ ವೈರಲ್‌ ಆಗಿದ್ದು ಎಲ್ಲರಿಗೂ ಗೊತ್ತಿದೆ. ಇದೀಗ ಅಂತಹ ಪಾತ್ರದಲ್ಲಿ ನಟಿಸಲು ತಮನ್ನಾ ಪಡೆದ ಸಂಭಾವನೆ ಕುರಿತ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ಸುಂದರಿ ಇದೀಗ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೇ ತಮನ್ನಾ ನಟನೆಯ ಲಸ್ಟ್ ಸ್ಟೋರೀಸ್ 2 ಬಿಡುಗಡೆಯಾಗಿ ಪ್ರಸ್ತುತ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ. ಈ ವೆಬ್ ಸೀರೀಸ್​ನಲ್ಲಿ ತಮನ್ನಾ ಹಾಟ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಕೆಲವು ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ವಿಶೇಷ ಚೇತನ ಮಕ್ಕಳಿಯಿಂದ ʼಸ್ಯಾಂಡಲ್ವುಡ್‌ ಗಣಿʼಗೆ ವಿಭಿನ್ನ ಶುಭಾಶಯ..!

ಇನ್ನು ಮೊದಲ ಬಾರಿಗೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರುವ ತಮನ್ನಾ ಈ ವೆಬ್ ಸೀರಿಸ್ಗಾಗಿ 6 ಕೋಟಿ ಸಂಭಾವನೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ ತಮನ್ನಾ ಪ್ರತಿ ಚಿತ್ರಕ್ಕೆ 5 ಕೋಟಿ ತೆಗೆದುಕೊಳ್ಳುತ್ತಾರೆ ಆದ್ರೆ ಈ ಚಿತ್ರಕ್ಕೆ ಹೆಚ್ಚು ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಇದುವರೆಗೆ ತಮನ್ನಾ ಯಾವುದೇ ಸಿನಿಮಾದಲ್ಲಿ ಕಿಸ್ಸಿಂಗ್ ಸೀನ್ನಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಲಸ್ಟ್ ಸ್ಟೋರಿಯಲ್ಲಿ ರೊಮ್ಯಾಂಟಿಕ್‌ ಸೀನ್‌ನಲ್ಲಿ ವಿಜಯ್ ವರ್ಮಾ ಜೊತೆ ಕಾಣಿಸಿಕೊಂಡಿದ್ದರು. ಅಲ್ಲದೆ, ನಟ ವಿಜಯ್ ಜೊತೆ ತಮನ್ನ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿಯು ಸಹ ಹರಿದಾಡುತ್ತಿದೆ. ಆದರೆ ಈ ಬಗ್ಗೆ ತಮನ್ನಾ ಯಾವುದೇ ಸ್ಪಷ್ಟನೆ ನೀಡಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News