Tamanna Bhatia: ತಮನ್ನಾ ಬೋಲ್ಡ್‌ ಲುಕ್‌ಗೆ ಬೆವರಿದ ಗಂಡಹೈಕ್ಳು.. ಟೆಂಪರೇಚರ್‌ ಹೈ ಮಾಡುತ್ತೆ ಈ ವೆಬ್‌ ಸಿರೀಸ್‌!

Jee Karda Trailer: ಜೀ ಕರ್ದಾ ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾದಾಗಿನಿಂದ ತಮನ್ನಾ ಭಾಟಿಯಾ ಅಭಿಮಾನಿಗಳು ಸಂತಗೊಂಡಿದ್ದಾರೆ. ಈ ಸೀರಿಸ್ ನೋಡಲು ತಮನ್ನಾ ಅವರೇ ಕಾರಣ ಎಂದು ಅನೇಕರು ಹೇಳುತ್ತಿದ್ದಾರೆ. ಇದು ಏಳು ಸ್ನೇಹಿತರ ಕಥೆಯಾಗಿದ್ದರೂ, ಇಲ್ಲಿ ತಮನ್ನಾ ಸಂಪೂರ್ಣವಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್‌ ದೃಶ್ಯಗಳೂ ಇದ್ದು ನಿಮ್ಮ ನಿದ್ದೆಗೆಡಿಸುತ್ತವೆ.  

Written by - Chetana Devarmani | Last Updated : Jun 7, 2023, 05:15 PM IST
  • ಜೀ ಕರ್ದಾ ವೆಬ್ ಸರಣಿಯ ಟ್ರೇಲರ್ ಬಿಡುಗಡೆ
  • ತಮನ್ನಾ ಬೋಲ್ಡ್‌ ಲುಕ್‌ಗೆ ಬೆವರಿದ ಗಂಡಹೈಕ್ಳು
  • ಟೆಂಪರೇಚರ್‌ ಹೈ ಮಾಡುತ್ತೆ ಈ ವೆಬ್‌ ಸಿರೀಸ್‌
Tamanna Bhatia: ತಮನ್ನಾ ಬೋಲ್ಡ್‌ ಲುಕ್‌ಗೆ ಬೆವರಿದ ಗಂಡಹೈಕ್ಳು.. ಟೆಂಪರೇಚರ್‌ ಹೈ ಮಾಡುತ್ತೆ ಈ ವೆಬ್‌ ಸಿರೀಸ್‌!  title=
Tamanna Bhatia

Jee Karda On Prime Video: ತಮನ್ನಾ ಭಾಟಿಯಾ ನಟನೆಯ ವೆಬ್ ಸಿರೀಸ್ ಜೀ ಕರ್ದಾ ಬಿಡುಗಡೆಗೆ ಸಿದ್ಧವಾಗಿದೆ. ತಮಿಳು, ತೆಲುಗಿನ ಜೊತೆಗೆ ಹಿಂದಿಯಲ್ಲೂ ನಟಿಸಿರುವ ನಟಿ ತಮನ್ನಾ ಭಾಟಿಯಾ ಸುಮಾರು ಎರಡು ದಶಕಗಳಿಂದ ಸಿನಿ ಇಂಡಸ್ಟ್ರಿಯಲ್ಲಿದ್ದಾರೆ. ಆದರೆ ಜೀ ಕರ್ದಾದಲ್ಲಿ ಅವರ ಬೋಲ್ಡ್ ಲುಕ್ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತಿದೆ. ಈ ವೆಬ್‌ ಸಿರೀಸ್‌ನ ಟ್ರೇಲರ್‌ನಲ್ಲಿ, ಅವರ ಅಭಿಮಾನಿಗಳು ತಮನ್ನಾ ಅವರ ಬೋಲ್ಡ್‌ ಲುಕ್‌ನ್ನು ನೋಡುತ್ತಾರೆ. 

ತಮನ್ನಾ ಸೌತ್ ಚಿತ್ರಗಳಲ್ಲಿ ತುಂಬಾ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದಾರೆ. ಬೋಲ್ಡ್ ಪಾತ್ರಗಳನ್ನು ಮಾಡಿದ್ದಾರೆ. ಎಲ್ಲೂ ಲಿಮಿಟ್‌ ಮೀರಿ ಬೋಲ್ಡ್‌ ಆಗಿ ತಮನ್ನಾ ನಟಿಸಿದ್ದು ಕಾಣಸಿಗುವುದಿಲ್ಲ. ಆದರೆ ಜೀ ಕರ್ದಾ ಟ್ರೇಲರ್ ನೋಡಿದ ನಂತರ ಇಲ್ಲಿ ಅಂಪೂರ್ಣ ಹೊಸ ಅವತಾರದಲ್ಲಿ ನೀವು ತಮನ್ನಾ ನೋಡುವಿರಿ. ಜೀ ಕರ್ದಾ ಬಾಲ್ಯದಿಂದಲೂ ಒಟ್ಟಿಗೆ ಬೆಳೆದ ಏಳು ಸ್ನೇಹಿತರ ಕಥೆ. ಇದು ವಿನೋದ, ನಾಟಕ ಮತ್ತು ಭಾವನೆಗಳನ್ನು ಒಳಗೊಂಡಿದೆ. ಇದರ ಮಧ್ಯಭಾಗದಲ್ಲಿ ತಮನ್ನಾ ಭಾಟಿಯಾ ಇದ್ದಾರೆ. 2 ನಿಮಿಷಗಳ ಈ ಟ್ರೇಲರ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ತಮನ್ನಾ ಬೋಲ್ಡ್ ಸ್ಟೈಲ್. ಈ ಬೋಲ್ಡ್ ಸ್ಟೋರಿಯಲ್ಲಿ ಅರೆನಗ್ನ ದೃಶ್ಯಗಳಿಂದ ಬಹಿರಂಗ ಲೈಂಗಿಕತೆಯವರೆಗೆ ಮಾತನಾಡಲಾಗಿದೆ ಎಂದು ಟ್ರೇಲರ್‌ನಿಂದ ಊಹಿಸಬಹುದು.

ಇದನ್ನೂ ಓದಿ: ಬೋಲ್ಡ್‌ ಪೋಟೋಗಳ ಮೂಲಕ ಹುಡುಗರಿಗೆ ಮತ್ತೆರಿಸಿದ ಕೇಟ್‌ ಶರ್ಮಾ; ಪೋಟೋಸ್‌ ನೋಡಿ

ಇದು ಕೇವಲ ಟ್ರೈಲರ್ ಆಗಿದ್ದರೂ ತಮನ್ನಾ ಅವರ ಹೊಸ ಬೋಲ್ಡ್ ಅವತಾರದಿಂದ ಅವರ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ. ಅವರ ವೃತ್ತಿಜೀವನದ ಈ ಹಂತದಲ್ಲಿ ಅವರು ಅಂತಹ ಪಾತ್ರವನ್ನು ಮಾಡುವ ಅವಶ್ಯಕತೆ ಏನಿತ್ತು ಮತ್ತು ಅದು ಕೂಡ OTT ಶೋನಲ್ಲಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಈ ವೆಬ್‌ ಸಿರೀಸ್ ಜೂನ್ 15 ರಂದು ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ. ಇದರಲ್ಲಿ ತಮನ್ನಾ ಭಾಟಿಯಾ ಆಶಿಮ್ ಗುಲಾಟಿ, ಅನ್ಯಾ ಸಿಂಗ್, ಹುಸೇನ್ ದಲಾಲ್, ಸುಹೇಲ್ ನಯ್ಯರ್, ಸಯಾನ್ ಬ್ಯಾನರ್ಜಿ ಮತ್ತು ಸಂವೇದನಾ ಸುವಾಲ್ಕಾ ಬಾಲ್ಯದ ಗೆಳೆಯರಾಗಿದ್ದಾರೆ. ಸೈಮನ್ ಸಿಂಗ್ ಮತ್ತು ಮಲ್ಹಾರ್ ಥಾಕರ್ ಕೂಡ ಇಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸರಣಿಯನ್ನು ದಿನೇಶ್ ವಿಜನ್ ನಿರ್ಮಿಸಿದರೆ, ನಿರ್ದೇಶಕಿ ಅನನ್ಯಾ ಶರ್ಮಾ ಡೈರೆಕ್ಷನ್‌ ಈ ವೆಬ್‌ ಸಿರೀಸ್‌ಗೆ ಇದೆ.

ಇದನ್ನೂ ಓದಿ: ತಿರುಪತಿ ದೇವಸ್ಥಾನದಲ್ಲಿ ಕೃತಿ ಸನೋನ್‌ಗೆ ಕಿಸ್‌ ಕೊಟ್ಟ ನಿರ್ದೇಶಕ, ಟೀಕೆಗೆ ಗುರಿ.!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News